ಪಿಎಸ್​​ಐ ನೇಮಕಾತಿ ಅಕ್ರಮ: ಕಿಂಗ್​​​ಪಿನ್ ರುದ್ರಗೌಡ ಪಾಟೀಲ್​ನ ಅಳಿಮಯ್ಯ ಅರೆಸ್ಟ್, ಇವ ಅಭ್ಯರ್ಥಿಗಳಿಗೆ ಬ್ಲೂಟೂತ್ ಸರಬರಾಜು ಮಾಡುತ್ತಿದ್ದ! | PSI Recruitment Scam Kingpin Rudragowda patil close persons arrested by kalaburgi CID police


ಪಿಎಸ್​​ಐ ನೇಮಕಾತಿ ಅಕ್ರಮ: ಕಿಂಗ್​​​ಪಿನ್ ರುದ್ರಗೌಡ ಪಾಟೀಲ್​ನ ಅಳಿಮಯ್ಯ ಅರೆಸ್ಟ್, ಇವ ಅಭ್ಯರ್ಥಿಗಳಿಗೆ ಬ್ಲೂಟೂತ್ ಸರಬರಾಜು ಮಾಡುತ್ತಿದ್ದ!

ಸಾಂದರ್ಭಿಕ ಚಿತ್ರ

ಆರೋಪಿಗಳನ್ನ ಕಲಬುರಗಿ ಸಿಐಡಿ ಕಚೇರಿಗೆ ತಂದ ಪೊಲೀಸರು ಸದರಿ ಪರೀಕ್ಷಾ ಅಕ್ರಮದಲ್ಲಿ ಈವರೆಗೆ ಒಟ್ಟು 37 ಜನರನ್ನು ಬಂಧಿಸಿದ್ದಾರೆ. ಬಂಧಿತ ಅಸ್ಲಮ್​ ಈ ಹಿಂದೆ ಪಿಎಸ್ಐ ಅಕ್ರಮ ವಿರುದ್ಧ ಹೋರಾಟ ನಡೆಸುತ್ತಿರುವ ಧಾರವಾಡದ ರವಿಶಂಕರ್​ಗೆ ಜೀವ ಬೆದರಿಕೆ ಹಾಕಿದ್ದ.

ಕಲಬುರಗಿ: ಪಿಎಸ್​​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕಿಂಗ್​ಪಿನ್ ರುದ್ರಗೌಡ ಪಾಟೀಲ್​ನ ಮತ್ತಿಬ್ಬರು ಆಪ್ತರನ್ನು ಅರೆಸ್ಟ್ ಮಾಡಲಾಗಿದೆ. ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ನಿವಾಸಿ ಅಸ್ಲಂ ಮುಜಾವರ್ ಹಾಗೂ ಕರಜಗಿ ಗ್ರಾಮದ ಮೂಲದ ಮುನಾಫ್ ಜಮಾದಾರ್ ಬಂಧಿತರು. ಇವರಿಬ್ಬರೂ ರುದ್ರಗೌಡ ಜೊತೆ ಮಧ್ಯವರ್ತಿಗಳಾಗಿ ಕೆಲಸ ಮಾಡ್ತಿದ್ದರು. ಬಂಧಿತ ಆರೋಪಿಗಳು ಬ್ಲೂಟೂತ್​ಗಳನ್ನು ಸರಬರಾಜು ಮಾಡ್ತಿದ್ದರು. ಜೊತೆಗೆ, ರುದ್ರಗೌಡ ಪಾಟೀಲ್ ಜೊತೆ ಸೇರಿ ಅಭ್ಯರ್ಥಿಗಳ ಜೊತೆ ಇವರಿಬ್ಬರೂ ಡೀಲ್ ಮಾಡುತ್ತಿದ್ದರು. ಅಕ್ರಮವಾಗಿ ಪರೀಕ್ಷೆ ಬರೆಯಲು ಸಿದ್ದರಿದ್ದವರನ್ನು ಹುಡುಕಿ ರುದ್ರಗೌಡ ಪಾಟೀಲ್ ಗೆ ಭೇಟಿ ಮಾಡಿಸುತ್ತಿದ್ದರು.

ಆರೋಪಿಗಳನ್ನ ಕಲಬುರಗಿ ಸಿಐಡಿ ಕಚೇರಿಗೆ ತಂದ ಪೊಲೀಸರು ಸದರಿ ಪರೀಕ್ಷಾ ಅಕ್ರಮದಲ್ಲಿ ಈವರೆಗೆ ಒಟ್ಟು 37 ಜನರನ್ನು ಬಂಧಿಸಿದ್ದಾರೆ. ಬಂಧಿತ ಅಸ್ಲಮ್​ ಈ ಹಿಂದೆ ಪಿಎಸ್ಐ ಅಕ್ರಮ ವಿರುದ್ಧ ಹೋರಾಟ ನಡೆಸುತ್ತಿರುವ ಧಾರವಾಡದ ರವಿಶಂಕರ್​ಗೆ ಜೀವ ಬೆದರಿಕೆ ಹಾಕಿದ್ದ. ಇದೀಗ, ಅಸ್ಲಾಂ ಹಾಗೂ ಮುನಾಫ್ ಜಮಾದಾರ್ ಬಂಧನದ ಮೂಲಕ ಅಕ್ರಮದಲ್ಲಿ ಪಾಲುದಾರರಾದ ಇನ್ನಷ್ಟು ಅಭ್ಯರ್ಥಿಗಳು ಸಿಕ್ಕಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಕಿಂಗ್​​​ಪಿನ್ ರುದ್ರಗೌಡ ಪಾಟೀಲ್​ನ ಅಳಿಮಯ್ಯ ಅರೆಸ್ಟ್

ತಾಜಾ ಮಾಹಿತಿಗಳ ಅನುಸಾರ ಪಿಎಸ್​ಐ ಪರೀಕ್ಷಾ ಅಕ್ರಮದಲ್ಲಿ ಮತ್ತೊಬ್ಬ ಆರೋಪಿ ಬಂಧನವಾಗಿದೆ. ಇದರೊಂದಿಗೆ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಇದುವರೆಗೆ ಒಟ್ಟು 38 ಜನರ ಬಂಧನ ಅಭ್ಯರ್ಥಿಗಳಿಗೆ ಬ್ಲೂಟೂತ್​ಗಳನ್ನು ನೀಡುತ್ತಿದ್ದ ಮತ್ತೂ ಒಬ್ಬ ಆರೋಪಿ ಲಾಕ್ ಆಗಿದ್ದಾನೆ. ಆರೋಪಿ ಪ್ರಕಾಶ್​ನನ್ನ ಸಿಐಡಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಲಾಕ್ ಆಗಿರುವ ಪ್ರಕಾಶ ಕಿಂಗ್​​​ಪಿನ್ ರುದ್ರಗೌಡ ಪಾಟೀಲ್​ನ ಅಳಿಯ ಎಂಬುದು ಗಮನಾರ್ಹ. ಅಳಿಮಯ್ಯ ಪ್ರಕಾಶ ರುದ್ರಗೌಡ ಪಾಟೀಲ್​ ಸೂಚನೆ ಮೇರೆಗೆ ಅಭ್ಯರ್ಥಿಗಳಿಗೆ ಬ್ಲೂಟೂತ್​ ನೀಡ್ತಿದ್ದ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Also Read:
ಅಯೋಧ್ಯೆ ರಾಮ ಮಂದಿರ ಸುತ್ತಮುತ್ತ ಮದ್ಯ ಮಾರಾಟ ನಿಷೇಧಿಸಿದ ಉತ್ತರ ಪ್ರದೇಶ ಸರ್ಕಾರ

Also Read:
ನಾಡಿನ ಮಠಾಧೀಶರು ಸರ್ಕಾರಕ್ಕೆ ಪತ್ರ ಬರೆಯುತ್ತಾರೆಂದ್ರೆ ಅದನ್ನ ಗಂಭೀರವಾಗಿ ಪರಿಗಣಿಸಬೇಕು; ಹುಬ್ಬಳ್ಳಿಯಲ್ಲಿ ಸರ್ಕಾರಕ್ಕೆ ಸಲಹೆ ನೀಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್

TV9 Kannada


Leave a Reply

Your email address will not be published. Required fields are marked *