ಪಿಎಸ್​ಐ ನೇಮಕಾತಿ ಹಗರಣ: ಪ್ರಮುಖ ಆರೋಪಿ, ಕಾಮಾಕ್ಷಿಪಾಳ್ಯ ಪಿಎಸ್​ಐ ಷರೀಫ್​ ಮುಂಬೈನಲ್ಲಿ ತಡವಾಗಿ ಅರೆಸ್ಟ್ | PSI Recruitment Scam another accused Kamakshi Palya PSI arrested in Mumbai


PSI Recruitment Scam: ಕಾಮಾಕ್ಷಿಪಾಳ್ಯ ಠಾಣೆ ಪಿಎಸ್​ಐ ಷರೀಫ್​​ ಬಂಧಿತ ಆರೋಪಿ. ಹಗರಣ ಹೊರಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ PSI ಷರೀಫ್, ಮುಂಬೈನಲ್ಲಿ ಅಡಗಿಕೊಂಡಿದ್ದು, ಬೆಂಗಳೂರು ಸಿಐಡಿ ಪೊಲೀಸ್ ತಂಡ ಬಂಧಿಸಿ, ಬೆಂಗಳೂರಿಗೆ ಕರೆತಂದಿದೆ.

ಪಿಎಸ್​ಐ ನೇಮಕಾತಿ ಹಗರಣ: ಪ್ರಮುಖ ಆರೋಪಿ, ಕಾಮಾಕ್ಷಿಪಾಳ್ಯ ಪಿಎಸ್​ಐ ಷರೀಫ್​ ಮುಂಬೈನಲ್ಲಿ ತಡವಾಗಿ ಅರೆಸ್ಟ್

ಪ್ರಮುಖ ಆರೋಪಿ, ಕಾಮಾಕ್ಷಿಪಾಳ್ಯ ಪಿಎಸ್​ಐ ಷರೀಫ್​ ಮುಂಬೈನಲ್ಲಿ ತಡವಾಗಿ ಅರೆಸ್ಟ್

ಬೆಂಗಳೂರು: 545 ಪಿಎಸ್​ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ (PSI Recruitment Scam) ಏಜೆಂಟ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಮುಖ ಆರೋಪಿಯನ್ನು ಮುಂಬೈನಲ್ಲಿ ತಡವಾಗಿ ಸೆರೆಹಿಡಿಯಲಾಗಿದೆ. ಕಾಮಾಕ್ಷಿಪಾಳ್ಯ ಠಾಣೆ ಪಿಎಸ್​ಐ (Kamakshi Palya PSI) ಷರೀಫ್​ ಕಲಿಮಠ್​ ಬಂಧಿತ ಆರೋಪಿ ಹಗರಣ ಹೊರಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ PSI ಷರೀಫ್, ಮುಂಬೈನಲ್ಲಿ ಅಡಗಿಕೊಂಡಿದ್ದರು. ಬೆಂಗಳೂರು ಸಿಐಡಿ (Bangalore CID) ಪೊಲೀಸ್ ತಂಡ ಮುಂಬೈನಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸಿ, ಬೆಂಗಳೂರಿಗೆ ಕರೆತಂದಿದೆ.

ಪಿಎಸ್​ಐ ನೇಮಕಾತಿ ಅಕ್ರಮ ಆರೋಪಿ ಷರೀಫ್ 10 ದಿನ ಪೊಲೀಸ್ ಕಸ್ಟಡಿಗೆ:

ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿ ಶರೀಫ್ ನನ್ನು ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್​ ಕಸ್ಟಡಿಗೆ ನೀಡುವಂತೆ ಸಿಐಡಿ ಪೊಲೀಸರು ಕೋರ್ಟ್​ಗೆ ಮನವಿ, ಮಾಡಿಕೊಂಡಿದ್ದಾರೆ. ಸಿಐಡಿ ಮನವಿ ಹಿನ್ನೆಲೆ ಆರೋಪಿ ಶರೀಫ್ ಕಲಿಮಠ್ ನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಆಗಸ್ಟ್ 8 ರವರೆಗೆ ಸಿಐಡಿ ಪೊಲೀಸ್ ಕಸ್ಟಡಿಗೆ ನೀಡಿ ಒಂದನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಸಿಐಡಿ ಬಂಧಿತ ಆರೋಪಿ ಎಸ್ ಡಿಎ ಹರ್ಷಾ ಮತ್ತು ಕೆಲ ಅಭ್ಯರ್ಥಿಗಳೊಂದಿಗೆ ಪಿಎಸ್​ಐ ಷರೀಫ್​ ಕಲಿಮಠ್​ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈತ 10 ಅಭ್ಯರ್ಥಿಗಳ ಅಕ್ರಮ ನೇಮಕಾತಿಯಲ್ಲಿ ಮಧ್ಯವರ್ತಿಯಾಗಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ಷರೀಫ್ ನನ್ನು ವಶಕ್ಕೆ ಪಡೆದ ಸಿಐಡಿ ಪೊಲೀಸರು ಗ್ರಿಲ್ ಮುಂದುವರೆಸಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *