ಬೆಂಗಳೂರು: ಕೊರೋನಾ ಸಾಂಕ್ರಾಮಿಕ ತಡೆಗಟ್ಟಲು ಸರ್ಕಾರ ಹೇರುವ ಲಾಕ್ ಡೌನ್ ಸಮಯದಲ್ಲಿ ಹಲವರು ಹಲವು ಉತ್ತಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಕ್ರಿಯಾತ್ಮಕ ನಟ, ನಿರ್ದೇಶಕ ಎಂದೇ ಹೆಸರಾಗಿರುವ ಇತ್ತೀಚೆಗೆ ರಾಜಕೀಯಕ್ಕೆ ಬಂದಿರುವ ನಟ ಉಪೇಂದ್ರ ವಾರಾಂತ್ಯ ಲಾಕ್ ಡೌನ್, ಕರ್ಫ್ಯೂ ಸಮಯವನ್ನು ಉತ್ತಮ ಕಾಯಕದ ಮೂಲಕ ಕಳೆದರು.

ಬಣ್ಣ ಹಚ್ಚುವುದನ್ನು ಬಿಟ್ಟು ಗದ್ದೆಗೆ ಇಳಿದಿದ್ದಾರೆ. ತಮ್ಮ ಜಮೀನಿನಲ್ಲಿ ಪಿಕ್ಕಾಸು, ಗುದ್ದಲಿ ಹಿಡಿದು ಬೇಸಾಯ ಮಾಡುತ್ತಿದ್ದಾರೆ. ಕೃಷಿಯಲ್ಲಿ ಆಸಕ್ತಿ ಹೊಂದಿರುವ ಉಪೇಂದ್ರ ಅವರು ಈ ರೀತಿ ಕೃಷಿ ಮಾಡಿ ತಮ್ಮ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More