ಚಿಕ್ಕಮಗಳೂರು: ಇಂದು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದ ಜನ ಸಾಮಾನ್ಯರ ಆರೋಗ್ಯವನ್ನು ವಿಚಾರಿಸಿದರು. ಪಿಪಿಇ ಕಿಟ್​​ ಧರಿಸಿ ಸಿ.ಟಿ ರವಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರವಿ ಅವರು, ಸೋಂಕಿನ ನಿಯಂತ್ರಣದ ಬಗ್ಗೆ ಪಾಸಿಟಿವ್ ಆಗಿ ಕೊಡುವ ಎಲ್ಲಾ ಸಲಹೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತೇವೆ. ಟೀಕೆನಾ ಎದುರಿಸಿದ ನಂತರ ವೈಫಲ್ಯಗಳನ್ನ ಬೆಟ್ಟು ಮಾಡಿ ತೋರಿಸಲಿ. ಅದನ್ನು ಬಿಟ್ಟು ಬುದ್ಧಿವಂತರ ತರಹ ನಮ್ಮಗೆ ಮುಂಚೆನೇ ತಿಳಿದಿತ್ತು ಅಂತಾ ಮಾತನಾಡುತ್ತಿದ್ದಾರೆ.

ನಾನು ಕರ್ನಾಟಕದಲ್ಲಿ ಆಗ ಹೆಚ್ಚು ಸಕ್ರಿಯವಾಗಿರಲಿಲ್ಲ. ಕರ್ನಾಟಕದಲ್ಲಿ ಕೋವಿಡ್​ನ ಮುಂಜಾಗ್ರತೆಯ ಚರ್ಚೆ ನಡೆದಿಲ್ಲ. ರಾಜಕಾರಣಿಗಳು ಮಾಡಿದ್ದು ಸಿಡಿ ಚರ್ಚೆ, ಮಾಧ್ಯಮಗಳು ೧೫ ದಿನ ಮಾಡಿದ್ದು ಸಿಡಿ ಚರ್ಚೆ. ಕೋವಿಡ್ ಅಲೆ ಹೆಚ್ಚಾಗುತ್ತದೆ ತಜ್ಞರನ್ನ ಕರೆಸಿ ಜಾಗೃತಿ ಮೂಡಿಸುವ ಕೆಲಸ ಮಾಡಿಲ್ಲ. ಅಲ್ಲದೇ ಸರ್ಕಾರ ನಿಯಂತ್ರಣ ಹೇರಬೇಕು ಅನ್ನೋ ಒತ್ತಡ ಹಾಕೋ ಕೆಲಸವನ್ನು ವಿರೋಧ ಪಕ್ಷಗಳು ಮಾಡಲಿಲ್ಲ.

ತಮಿಳುನಾಡಿನಲ್ಲಿ ನಾವು ಇದ್ದಾಗ ಘಟನೆಯನ್ನ ರಿಕಾಲ್ ಮಾಡುತ್ತಿದ್ದೇನೆ. ಈಗ ಹೇಳ್ತಾ ಇರೋದು ಸರ್ಕಾರದ ವೈಫಲ್ಯ ಅಂತಾ.. ವಿಧಾನಸಭಾ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕರು ಎರಡನೇ ಅಲೆ ಬರುತ್ತೆ ತಜ್ಞರು ಹೇಳುತ್ತಿದ್ದಾರೆ. ನೀವು ಇಂತಹದ್ದು ಮಾಡಿ ಅಂತಾ ಸಲಹೆ ನೀಡಿದ್ದರೆ ಅಪಾದನೆಗೂ ತಾಕತ್ತು ಬರುತ್ತಿತ್ತು ಎಂದರು.

The post ಪಿಪಿಇ ಕಿಟ್​​ ಧರಿಸಿ ಕೊರೊನಾ ಸೋಂಕಿತರ ಆರೋಗ್ಯ ವಿಚಾರಿಸಿದ ಸಿ.ಟಿ ರವಿ appeared first on News First Kannada.

Source: newsfirstlive.com

Source link