ಕೊರೊನಾ ವಿರುದ್ಧ ಸಮರದಲ್ಲಿ ಭಾರತೀಯ ಸೇನೆ ನಿತ್ಯ ನಿರಂತರವಾಗಿ ತೊಡಗಿಸಿಕೊಂಡಿದೆ. ಮೊದಲು ಏರ್ ಫೋರ್ಸ್, ಬಳಿಕ ನೌಕಾಪಡೆ, ಇದೀಗ ಸಿಆರ್​​ಪಿಎಫ್ ಕೂಡ ತನ್ನದೇ ಆದ ಕೊಡುಗೆ ನೀಡ್ತಿದೆ. ಎಲ್ಲಾ ಕಡೆ ಅತಿ ಹೆಚ್ಚು ಯೂಸ್ ಆಗ್ತಾ ಇರುವ ಪಿಪಿಇ ಕಿಟ್​​ಗೆ ಹೊಸ ರೂಪ ಕೊಟ್ಟಿದೆ.

ಸಿಆರ್​​ಪಿಎಫ್​​ ದೇಶದ ಬಹು ದೊಡ್ಡ ಪ್ಯಾರ ಮಿಲಿಟರಿ ಫೋರ್ಸ್. ದೇಶ ಸೇವೆ ಎಂದರೆ ಕೈನಲ್ಲಿ ತೂಕವಾದ ಬಂದೂಕುಗಳನ್ನು ಹಿಡಿದು ಜನರ ರಕ್ಷಣೆಗೆ ಮುಂದಾಗುವ ಕೇಂದ್ರದ ಪೋಲಿಸ್ ಪಡೆ. ಈ ಪೋಲಿಸ್ ಪಡೆ ಬ್ರಿಟೀಷ್ ಆರ್ಮಿಯಾಗಿ ಜುಲೈ 17, 1939ರಿಂದ ಸೇವೆಯಲ್ಲಿದೆ. ದೇಶ ಸ್ವಾತಂತ್ರವಾದ ನಂತರ ತಮ್ಮ ನಿಷ್ಠಾವಂತ ಸೇವೆಯನ್ನು ಭಾರತೀಯರಿಗೆ ನೀಡುತ್ತಿದ್ದಾರೆ ಈ ಯೋಧರು. ಕೇಂದ್ರದ ಗೃಹ ಮಂತ್ರಿಗಳ ಅಡಿಯಲ್ಲಿ ಬರುವ ಸಿ.ಆರ್.ಪಿ.ಎಫ್ ಯೋಧರು ಕೇಂದ್ರಾಡಳಿತ ರಾಜ್ಯಗಳಲ್ಲಿ ಅಥವಾ ತುರ್ತು ಪರಿಸ್ಥಿತಿ ಇರುವ ರಾಜ್ಯಗಳ ಪೋಲಿಸರಿಗೆ ಸಹಾಯಕರಾಗಿ ಮುಂದಾಗಿರುತ್ತಾರೆ. ಅಲ್ಲದೆ ಬಾರ್ಡರ್ ಸೆಕ್ಯರಿಟಿ ಫೋರ್ಸ್ ನಂತರದಲ್ಲಿ ಭಾರತದ ಗಡಿ ಪ್ರದೇಶವನ್ನು ಕಾಯುವವರು ಇದೆ ಸಿ.ಆರ್.ಪಿ. ಎಫ್ ಯೋಧರು.

ಪಿಪಿಇ ಕಿಟ್​ ಸಮಸ್ಯೆಗೆ ಆರ್​&ಡಿ ಟೀಂನಿಂದ ಪರಿಹಾರ
ಯುದ್ಧ ಎನ್ನುತ್ತಿದ್ದಂತೆ ಸನ್ನದ್ಧರಾಗುವ ಬೇರೆ ಬೇರೆ ತಂಡಗಳ ರೀತಿ, ಕೊರೊನಾ ವಿರುದ್ಧ ಹೋರಾಡಲು ಈ ಗುಂಪಿನಲ್ಲಿ ಒಂದು ತಂಡವಿದೆ. ಅದು ಆರ್ ಆ್ಯಂಡ್ ಡಿ. ಈ ಯೋಧರ ಕೆಲಸ ರಿಸರ್ಚ್ ಮತ್ತು ಡೆವಲಪ್ಮೆಂಟ್. ಕೋವಿಡ್ ವಿರುದ್ಧದ ಯುದ್ಧದಲ್ಲಿ ಸಿ.ಆರ್.ಪಿ.ಎಫ್ ಆರ್ಮಿ ಈಗಾಗಲೆ ಮುಂದೆ ನಿಂತಾಗಿದೆ. ಆರ್ ಆ್ಯಂಡ್ ಡಿ ತಂಡ ಕೊರೊನಾ ವಾರಿಯರ್ಸ್ಆ ದ ವೈದ್ಯರು ಆರೋಗ್ಯ ಕಾರ್ಯಕರ್ತರು ಹಾಗೂ ಇನ್ನುಳಿದ ಸೇವಕರಿಗೆ ನೆರವಾಗುವಂತೆ ಹೊಸ ಪ್ಲಾನ್ ರೆಡಿ ಮಾಡಿಕೊಂಡಿದೆ. ಕೋವಿಡ್ ಸೋಂಕಿತರನ್ನು ಗುಣಮುಖರನ್ನಾಗಿ ಮಾಡಲು ವೈದ್ಯರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಒಮ್ಮೆ ಐಸಿಯುಗೆ ಕಾಲಿಟ್ಟರೆ ಸತತ ಆರರಿಂದ ಏಳು ಗಂಟೆಗಳ ಕಾಲ ಪಿಪಿಇ ಕಿಟ್ ಧರಿಸೋದು ಸಿಕ್ಕಾಪಟ್ಟೆ ಕಷ್ಟ ಆಗುತ್ತೆ. ಇದರಿಂದ ಬಳಲಿಕೆ ಸುಸ್ತು ಹೆಚ್ಚಾಗ್ತಾ ಇದೆ. ಅಷ್ಟೇ ಅಲ್ಲ ಒಮ್ಮೆ ಯೂಸ್ ಮಾಡಿದ ಪಿಪಿಇ ಕಿಟ್​ ಮತ್ತೊಮ್ಮೆ ಯೂಸ್ ಮಾಡೋಕೂ ಆಗಲ್ಲ. ಅಲ್ಲದೆ ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಗುವ ಪಿಪಿಇ ಕಿಟ್ ಪರಿಸರ ವಿರೋಧಿ ಅಂತಾನೂ ಹೇಳಲಾಗ್ತಿದೆ. ಈ ಸಮಸ್ಯೆಗೆ ಸಿ.ಆರ್.ಪಿ.ಎಫ್ನ ಆರ್ ಅ್ಯಂಡ್ ಡಿ ಟೀಮ್ ಹೊಸ ಪರಿಹಾರದೊಂದಿಗೆ ಬಂದಿದೆ.

ಪಿಪಿಇ ಕಿಟ್ ಅಂದ್ರೆ ಪರ್ಸನಲ್ ಪ್ರಿವೆಂಟೀವ್ ಎಕ್ವಿಪ್ಮೆಂಟ್. ಇದು ದೇಹವನ್ನು ಸಂಪೂರ್ಣವಾಗಿ ಕವರ್ ಮಾಡಿರುತ್ತದೆ. ದೇಹದ ಯಾವ ಅಂಗಕ್ಕೂ ಸಹ ವೈರಸ್ ತಾಗದಂತೆ,  ಅಡಿ ಇಂದ ಮುಡಿ ತನಕ ಸೇಫ್ ಇಟ್ಟಿರುತ್ತದೆ. ಕೊರೊನಾ ವಿರುದ್ಧ ಹೋರಾಡುತ್ತಿರುವ ಫ್ರಂಟ್​​ಲೈನ್​ ವರ್ಕರ್ಸ್​ಗೆ ಸದ್ಯ ಪಿಪಿಇ ಕಿಟ್ ಎನ್ನುವುದು ಯುದ್ಧಕವಚವಿದ್ದಂತೆ. ಆದ್ರೆ ಅದರೊಳಗೆ ಜೀವಿಸುವ ವೈದ್ಯರು, ಆರೋಗ್ಯ ಸಿಬ್ಭಂದಿಗಳಿಗೆ ಪ್ರತಿದಿನ ಒಂದು ರೀತಿ ಹಿಂಸೆ. ಎಷ್ಟೊ ನರ್ಸ್​​ಗಳು ಈ ಪಿಪಿಇ ಕಿಟ್ ಧರಿಸಲು ಆಗದೆ ಕೆಲಸದಿಂದ ನಿವೃತ್ತಿ ಪಡೆದ ಉದಾಹರಣೆಗಳು ಇದೆ. ಅಷ್ಟರ ಮಟ್ಟಿಗೆ ಹಿಂಸೆ ನೀಡುತ್ತೆ ಪಿಪಿಇ ಕಿಟ್. ಆದರೆ ಅನಿವಾರ್ಯ ಪರಿಸ್ಥಿತಿ ಆದ್ದರಿಂದ ಇದನ್ನು ತ್ಯಜಿಸುವಂತಿಲ್ಲ. ಕೋವಿಡ್ ಐಸಿಯುವಿಗೆ ಕಾಲಿಡಬೇಕಾದರೆ ಇದನ್ನು ಧರಿಸಿರಲೇಬೇಕು. ಅಲ್ಲದೆ ಒಮ್ಮೆ ಧರಿಸಿದ ಪಿಪಿಇ ಕಿಟ್ ಅನ್ನು ಮತ್ತೊಮ್ಮೆ ಧರಿಸುವಂತಿಲ್ಲ. ಹೀಗೆ ಪದೇ ಪದೇ ಹೊಸ ಪಿಪಿಇ ಕಿಟ್ ಧರಿಸಿ ಬಿಸಾಡುವುದರಿಂದ ತ್ಯಾಜ್ಯ ಹೆಚ್ಚಾಗ್ತಿದೆ. ಇದರಿಂದ ಪರಿಸರ ಮಾಲಿನ್ಯ ಕೂಡ ಆಗುತ್ತಿದೆ. ಈ ಎಲ್ಲ ಸಮಸ್ಯೆಗಳಿಂದ ಹೊರಬರೋಕೆ ನಮ್ಮ ಸಿ.ಆರ್.ಪಿ.ಎಫ್ ಆರ್ ಅ್ಯಂಡ್ ಡಿ ಟೀಮ್ ವೈರಸ್ ಪ್ರೊಟೆಕ್ಷನ್​ಗಾಗಿ ಮೈಕ್ರೊಬಿಯಲ್ ಪ್ರಿವೆಂಟೀವ್ ಸೂಟ್ ಸಿದ್ದಪಡಿಸಿದೆ.

ಎಮ್.ಪಿ.ಎಸ್ ಎನ್ನುವುದು ಪಿಪಿಇ ಕಿಟ್ ಬದಲಾಗಿ ಬಳಸಬಹುದಾದ ಅಸ್ತ್ರ. ಇದನ್ನು ಸ್ಪೆಷಲ್ ಆಗಿ ಆರೋಗ್ಯ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಗಾಗಿ ಸಿದ್ದಪಡಿಸಲಾಗಿದೆ. ಈ ಸೂಟ್ನ ಮಹತ್ವ, ಇದರ ಬಳಕೆ ಮತ್ತು ಸಂಪೂರ್ಣ ಮಾಹಿತಿಯನ್ನು ಱಪಿಡ್ ಆ್ಯಕ್ಷನ್ ಫೋರ್ಸ್​ನ 97 ಬೆಟಾಲಿಯನ್ ಮುಖ್ಯಸ್ಥರು ವಿವರವಾಗಿ ತಿಳಿಸಿದ್ದಾರೆ.

ಈ ಮೈಕ್ರೊಬಿಯಲ್ ಪ್ರಿವೆಂಟೀವ್ ಸೂಟ್ ಎನ್ನುವುದು ಪಿಪಿಇ ಕಿಟ್​ನ ಅಡ್ವಾನ್ಸ್ಡ್​​ ವರ್ಷನ್. ಅಂದ್ರೆ ಸೆಕೆಂಡ್ ಜನರೇಷನ್ ಪಿಪಿಇ ಕಿಟ್ ಎಂದ್ರೆ ತಪ್ಪಾಗಲಾರ್ದು. ಇದುವರೆಗೂ ಪಿಪಿಇ ಕಿಟ್ ಧರಿಸಿದ್ದರು, ಸಂಪೂರ್ಣ ರಕ್ಷಣೆಯಲ್ಲಿದ್ದರು ಸಹ ವೈದ್ಯರಿಗೆ ಸೋಂಕು ತಗುಲಿರುವುದು ನೋಡಿದ್ದೆವೆ. ಅದ್ದರಿಂದ ಈ ಎಮ್.ಪಿ.ಎಸ್  ಸಿದ್ಧವಾಗಿದೆ. ಇದು ಕೋವಿಡ್ ವೈರಾಣುವಿನಿಂದ ಸಂಪೂರ್ಣ ರಕ್ಷಣೆ ನೀಡುವುದರಲ್ಲಿ ಸಂಶಯವೇ ಇಲ್ಲ. ಸಿ.ಆರ್.ಪಿ.ಎಫ್ ನ ಸೇವಕರು ಕೋವಿಡ್ ಡ್ಯೂಟಿಯಲ್ಲಿ ಇರುವುದರಿಂದ ಅವರ ಸುರಕ್ಷತೆಗಾಗಿ ಈ ಮೈಕ್ರೊಬಿಯಲ್ ಪ್ರಿವೆಂಟೀವ್ ಸೂಟ್​ ಸಿದ್ಧಪಡಿಸಿದ್ದರು. ಇದರ ಅತ್ಯತ್ತಮ ರೆಸ್ಪಾನ್ಸ್ನಿಂದ ಕೋವಿಡ್ ಸೇವೆಯಲ್ಲಿ ನಿರತರಾಗಿರುವ ಪ್ರತಿಯೊಬ್ಬರಿಗೂ ಸಿಗುವಂತೆ ಯೋಚಿಸುತ್ತಿದ್ದಾರೆ ಸಿ.ಆರ್.ಪಿ.ಎಫ್ ಯೋಧರು.

ಈ ಸೂಟ್​ ವಿಶೇಷತೆ ಏನು?
ಮೈಕ್ರೊಬಿಯಲ್ ಪ್ರಿವೆಂಟೀವ್ ಸೂಟ್​ನಲ್ಲಿ ಮೂರು ಪೀಸ್​ ಇರುತ್ತೆ. ಒಂದು ಶೂನಿಂದ ಮಂಡಿಯವರೆಗೂ ಕವರ್ ಮಾಡುವುದು, ಇನ್ನೊಂದು ಅಪ್ಪರ್ ವೇರ್ ಹಾಗೂ ಮೂರನೆಯದ್ದು ಲೋವರ್ ವೇರ್. ಪಿಪಿಇ ಕಿಟ್ಗೆ ಹೋಲಿಸಿದರೆ ಇದರಲ್ಲಿ ಬಹಳ ಉಪಯೋಗವಿದೆ. ಮಾರುಕಟ್ಟೆಯಲ್ಲಿ ಇರುವ ಪಿಪಿಕಿ ಕಿಟ್​​ಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ಆಗ್ತಾ ಇದೆ. ಸಂಪೂರ್ಣ ಸುರಕ್ಷತೆಗಾಗಿ ಪ್ಲಾಸ್ಟಕ್ ಲೇಪನ ಕವರ್ ಮಾಡಿರಲಾಗುತ್ತದೆ. ಇದನ್ನು ದಾಟಿ ಯಾವುದೆ ಫ್ಲುಯಿಡ್ ಆಗಲಿ ವೈರಸ್ ಆಗಲಿ ಹೋಗಲಾಗುವುದಿಲ್ಲ. ಆದರೆ ಎಮ್.ಪಿ.ಎಸ್​ನಲ್ಲಿ ನೇಯ್ದ ಬಟ್ಟೆಗಳನ್ನು ಬಳಸಿರುತ್ತಾರೆ. ಇದು ಸಹ ಯಾವುದೆ ವೈರಸ್ ಹಾದು ಹೋಗಲು ಬಿಡುವುದಿಲ್ಲ. ಹಾಗೂ ಪ್ಲಾಸ್ಟಿಕ್ ಗಿಂತ ಆರಾಮದಾಯಕವಾಗಿರುತ್ತದೆ.

ಮರುಬಳಕೆ ಮಾಡಬಹುದಾದ ಸೂಟ್
ಪಿಪಿಇ ಕಿಟ್​ಗಳನ್ನು ಕೇವಲ ಒಂದು ಬಾರಿ ಮಾತ್ರ ಧರಿಸಬಹುದು. ಆದರೆ ಎಮ್.ಪಿ.ಎಸ್ ಅನ್ನು ಮರುಬಳಕೆ ಮಾಡಬಹುದು ಎನ್ನುವುದು ವಿಶೇಷ. ಇದು ವೂವನ್ ಕ್ಲೋತ್ ಆಗಿರುವುದರಿಂದ ಇದನ್ನು ವಾಶ್ ಮಾಡಿ ಮರುಬಳಕೆ ಮಾಡಬಹುದು. ಪ್ಲಾಸ್ಟಿಕ್ ಪಿಪಿಇ ಕಿಟ್ ಧರಿಸಿದ ಬಳಿಕ ಎಲ್ಲಿ ಡಿಸ್ಪೋಸ್ ಮಾಡಿದರು ಅದು ಅಪಾಯವೆ. ಹೀಗೆ ಒಂದು ಆಸ್ಪತ್ರೆಯಲ್ಲಿ ದಿನಕ್ಕೆ ಕನಿಷ್ಠ ನೂರು ಪಿಪಿಇ ಕಿಟ್ ಗಳನ್ನು ಬಳಸಿರುತ್ತಾರೆ. ಇದನ್ನು ಪರಿಸರಿಕ್ಕೆ ಬಿಸಾಡಿದರೆ ಕರಗದ ಪ್ಲಾಸ್ಟಿಕ್ ನಿಂದ ಆಗಿರುವ ಅನಾಹುತ ತಿಳಿದೆ ಇದೆ. ಆದ್ರಿಂದ ಒಮ್ಮೆ ಬಳಸಿದ ಪಿಪಿಇ ಕಿಟ್ ಅನ್ನು ಬೆಂಕಿಗೆ ಹಾಕುತ್ತಾರೆ. ಇದರಿಂದ ಸೃಷ್ಟಿಯಾಗುವ ಹೊಗೆ ಬಹಳಷ್ಟು ಮಾಲಿನ್ಯ ಮಾಡುತ್ತದೆ. ಆದರೆ ಎಮ್.ಪಿ.ಎಸ್ ಬಳಸುವುದರಿಂದ ಈ ಮಾಲಿನ್ಯವನ್ನು ತಡೆಯಬಹುದಾಗಿದೆ.

ಇನ್ನು ಪಿಪಿಇ ಕಿಟ್​ನ ದೊಡ್ಡ ತೊಂದರೆ ಅಂದ್ರೆ ಅದು ದೇಹದಲ್ಲಿ ಏರುವ ಉಷ್ಣಾಂಷವನ್ನು ಹೊರ ಹಾಕಲು ಸಹಾಯಕವಾಗಿಲ್ಲ. ಸತತವಾಗಿ ಕಿಟ್ ಧರಿಸಿದ ವೈದ್ಯರು ಐಸಿಯುವಿನಲ್ಲೂ ಸಹ ಬೆಂದು ಬೆವತಿರುತ್ತಾರೆ. ಇದರಿಂದ ಕೆಲಸ ಮಾಡಲು ಬಹಳ ಕಷ್ಟವಾಗ್ತಾ ಇದೆ. ಅಷ್ಟರ ಮಟ್ಟಿಗೆ ಹೀಟ್ ಸೃಷ್ಟಿಯಾಗಿರುತ್ತದೆ. ಆದರೆ ಎಮ್.ಪಿ.ಎಸ್​ನಲ್ಲಿ ಈ ಸಮಸ್ಯೆ ಇಲ್ಲ . ಈ ಸೂಟ್ ಮೂರು ಭಾಗಗಳಾಗಿರುವುದರಿಂದ ಗಾಳಿಯಾಡಲು ಅವಕಾಶವಿರುತ್ತದೆ. ಅಲ್ಲದೆ ಮಾಲಿಕ್ಯೂಲಾರ್ ಡಿಸ್ಎಮಿಷನ್ ನಿಂದಾಗಿ ದೇಹದಲ್ಲಿ ಸೃಷ್ಟಿಯಾಗುವ ಹೀಟ್ ಹೊರ ಹಾಕಬಲ್ಲದು. ಇದರಿಂದ ವೈದ್ಯರು ಬೆವತು ಕೆಲಸ ಮಾಡುವುದರಿಂದ ದೂರ ಮಾಡಿಬಿಡಬಹುದು ಎನ್ನುತ್ತಾರೆ ಸಿ.ಆರ್.ಪಿ.ಎಫ್ ನ ಮುಖ್ಯಸ್ಥರು.

ಆಗಲೇ ಹೇಳಿದಂತೆ ಈ ಸೂಟ್ ಮರುಬಳಕೆ ಮಾಡುವಂತದ್ದು. ಒಬ್ಬ ವೈದ್ಯನಿಗೆ ಇಡಿ ಪ್ಯಾಂಡಮಿಕ್ ಪಿರಿಯಡ್ನಲ್ಲಿ ಒಂದು ಸೂಟ್ ಸಾಕಾಗುತ್ತದೆ. ಅದಲ್ಲದೆ ಈ ಸೂಟ್ ವಾಶ್ ಮಾಡಿ ಸ್ಯಾನಿಟೈಸ್ ಮಾಡುವ ಸುಲಭ ವಿಧಾನವನ್ನು ಇವರು ವಿವರಿಸಿದ್ದಾರೆ. ಮೊದಲಿಗೆ ಬಿಸಿ ನೀರು ಹಾಗೂ ಸೋಪ್ ಪೌಡರ್ ಮಿಶ್ರಿತ ನೀರಿನಲ್ಲಿ ಅದ್ದಿ ತೆಗೆದರೆ ವೈರಸ್​ಗಳು ಕೂಡಲೆ ಸಾಯುತ್ತವೆ. ನಂತರ ಎರಡು ಬಕೆಟ್ ನೀರಿನಲ್ಲಿ ಸೋಪ್ ಅಂಶಗಳು ತೆಗೆದು ಒಣಗಿಸಲು ಹಾಕಬೇಕು. ಈ ಮೆಟೀರಿಯಲ್ ವಾಟರ್ ರೆಸಿಸ್ಟೆಂಟ್ ಆದ್ದರಿಂದ ಹಾಗೂ ನೀರನ್ನು ಹೀರಿಕೊಳ್ಳಲು ಆಗದಿದ್ದರಿಂದ ಇದು ಕೇವಲ ಮೂರರಿಂದ ನಾಲ್ಕು ನಿಮಿಷದಲ್ಲಿ ಒಣಗುತ್ತದೆ. ಹಾಗೂ ಮರುಬಳಕೆಗೆ ಸಿದ್ದವಾಗಿರುತ್ತದೆ.

ಕೊರೊನಾ ಕಷ್ಟ ಕಾಲದಲ್ಲಿ ಆರೋಗ್ಯ ಕಾರ್ಯಕರ್ತರು ದಿನ ನಿತ್ಯ ಪಿಪಿಇ ಕಿಟ್ ನಿಂದ ಬೇಸತ್ತು ಹೋಗಿದ್ದಾರೆ. ಅಲ್ಲದೆ ಪಿಪಿಇ ಕಿಟ್ ಖರೀಧಿಸುವುದು ದುಬಾರಿ. ಆದ್ದರಿಂದ ಈ ಹೊಸ ಶೈಲಿಯ ಎಮ್.ಪಿ.ಎಸ್ಗಳನ್ನು ಬಳಸುವುದು ಕಾಸ್ಟ್ ಎಫೇಕ್ಟೀವ್ ಸಹ ಹೌದು. ಮತ್ತು ಹೆಚ್ಚು ಸುರಕ್ಷತೆಯನ್ನು ನೀಡುತ್ತದೆ. ಈ ಆವಿಷ್ಕಾರವನ್ನು ದೇಶಕ್ಕೆ ಕೊಡುಗೆಯಾಗಿ ನೀಡಲು ಸಿ.ಆರ್.ಪಿ.ಎಫ್ ಬಹಳ ಹೆಮ್ಮೆಪಡುತ್ತಿದೆ. ಇದನ್ನು ಸರ್ಕಾರ ಗಮನಿಸಿ ಸಂಶೋಧನೆಯನ್ನು ಪರಿಗಣಿಸಿ ಅಗತ್ಯ ಸೇವೆಯನ್ನು ಪಡೆಯಬೇಕು. ದೇಶ ಪ್ಯಾಂಡಮಿಕ್ ನಿಂದ ದೂರಾಗಲು ಈ ಯೋಧರ ಶ್ರಮವನ್ನು ಶ್ಲಾಘಿಸಲೇಬೇಕು.

The post ಪಿಪಿಇ ಕಿಟ್​ ಸಮಸ್ಯೆಗೆ CRPF​ನ ಆರ್​&ಡಿ ಟೀಂ ಪರಿಹಾರ.. ಮೈಕ್ರೊಬಿಯಲ್ ಪ್ರಿವೆಂಟೀವ್ ಸೂಟ್ appeared first on News First Kannada.

Source: newsfirstlive.com

Source link