ಪಿಯಾನೋ ನುಡಿಸಿದ 5 ವರ್ಷದ ಬಾಲಕ | ವಿಡಿಯೋ ವೈರಲ್ | 5 year old boy playing piano in Italy


ಪಿಯಾನೋ ನುಡಿಸಿದ 5 ವರ್ಷದ ಬಾಲಕ | ವಿಡಿಯೋ ವೈರಲ್

ಪಿಯಾನೋ ನುಡಿಸಿದ 5 ವರ್ಷದ ಬಾಲಕ

Image Credit source: NDTV

ಇಟಲಿಯ 5 ವರ್ಷದ  ಪೋರ ಮೊಜಾರ್ಟ್ (ಪಿಯಾನೋ) ನುಡಿಸಿ ಜನರ ಮೆಚ್ಚುಗೆ ಪಡೆದಿದ್ದಾನೆ. ಬಾಲಕ ಪಿಯಾನೋ ನುಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಬಾಲ ಪ್ರತಿಭೆಗಳು ಅನಾವರಣಗೊಳ್ಳುತ್ತಿವೆ. ಬಾಲ್ಯದಲ್ಲೇ ಅನೇಕರು ದೊಡ್ಡ ಡೊಡ್ಡ ಸಾಧನೆ ಮಾಡಿರುವುದನ್ನು ನಾವು ನೋಡಿದ್ದೇವೆ ಮತ್ತು ಮುಂದೆ ನೋಡಲಿದ್ದೇವೆ. ಹೀಗೆ ಇಟಲಿಯ (Italy) 5 ವರ್ಷದ  ಪೋರ ಮೊಜಾರ್ಟ್ (Mozart) (ಪಿಯಾನೋ) ನುಡಿಸಿ ಜನರ ಮೆಚ್ಚುಗೆ ಪಡೆದಿದ್ದಾನೆ. ಬಾಲಕ ಪಿಯಾನೋ ನುಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಅನೇಕರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಪಿಯಾನೋ ನುಡಿಸಿದ ಬಾಲಕನನ್ನು ಆಲ್ಬರ್ಟೊ ಕಾರ್ಟುಸಿಯಾ ಸಿಂಗೊಲಾನಿ ಎಂದು ಗುರುತಿಸಲಾಗಿದೆ. ಬಾಲಕ ಪಿಯಾನೋ ಬಾರಿಸುತ್ತಿರುವುದನ್ನು ಸುತ್ತಮುತ್ತ ನರೆದಿರುವ ಜನರನ್ನು ತಮ್ಮ ಪೋನ್​ಗಳಲ್ಲಿ ಸೆರೆ ಹಿಡಿದಿದ್ದಾರೆ.

ಇದನ್ನು ಓದಿ: ಭಾರತದಲ್ಲಿ ವಿದೇಶಿ ಪ್ರಾಣಿಗಳಿಗೆ ಹೆಚ್ಚಿದ ಬೇಡಿಕೆ: ಭಾರತದಲ್ಲೂ ಪತ್ತೆಯಾಯ್ತು ಕಾಂಗರೂಗಳು, ವಿಡಿಯೋ ವೈರಲ್

ಇದನ್ನು ಓದಿ: ದ್ವಿಚಕ್ರ ವಾಹನದಲ್ಲಿ ಆರು ಮಂದಿಯ ಸಂಚಾರ: ರೂಲ್ಸ್ ಬ್ರೇಕರ್ಸ್​ ಯುವಕರ ದುಸ್ಸಾಹಸದ ವಿಡಿಯೋ ವೈರಲ್ 

ಟ್ವಿಟ್ಟರ್ ಬಳಕೆದಾರರು ಸುಂದರವಾದ ಕಾಮೆಂಟ್‌ಗಳೊಂದಿಗೆ ಯುವಕನನ್ನು ಹೊಗಳಿದ್ದಾರೆ. “ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಬೇಕಾದ 5 ವರ್ಷದ ಮಗು ತನ್ನ ಬಾಲ್ಯವನ್ನು ಕಳೆದುಕೊಂಡಿದೆ” ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ನಾನು ಈಗ ನನ್ನ ಎಲ್ಲಾ ಬೆರಳುಗಳನ್ನು ಮುರಿಯುತ್ತೇನೆ ನನ್ನಲ್ಲಿ ಆ ಪ್ರತಿಭೆ ಇಲ್ಲ ಎಂದು ಬೇಸರದಿಂದ  ಕಾಮೆಂಟ್ ಮಾಡಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಈ ಮಗುವಿನ ಪೋಷಕರು ವೃತ್ತಿಪರ ಸಂಗೀತಗಾರರು. ಹುಡುಗ ಶಾಲೆಗೆ ಮತ್ತು ಆಟಕ್ಕೆ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾನೆ ಮತ್ತು ದೂರದರ್ಶನದಲ್ಲಿ ತನ್ನ ನೆಚ್ಚಿನ ಕಾರ್ಯಕ್ರಮಗಳನ್ನು ನೋಡುತ್ತಾನೆ ಮತ್ತು ಗಂಟೆಗಳ ಕಾಲ ಅಭ್ಯಾಸ ಮಾಡಲು ಒತ್ತಾಯಿಸುವುದಿಲ್ಲ ಎಂದು ಅವನ ತಾಯಿ ಹೇಳಿದರು.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *