ಚಾಮರಾಜನಗರ: ಡಿಪ್ಲೊಮಾ ಕೋರ್ಸ್​ಗಳ ಪರೀಕ್ಷೆ ನಡೆಸುವುದಕ್ಕೆ ಸರ್ಕಾರದ ನಿರ್ಧಾರ ತೆಗೆದುಕೊಂಡಿರುವುದನ್ನು ಖಂಡಿಸಿ ಚಾಮರಾಜನಗರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲಾಡಳಿತ ಭವನದ ಮುಂದೆ ಡಿಪ್ಲೋಮಾ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿ ಒಂದೇ ಬಾರಿ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದಿನ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರ ಕೈ ಬಿಡಬೇಕು.. ವ್ಯಾಕ್ಸಿನೇಷನ್‌ ಆದ ನಂತರ ಹಾಲಿ ಸೆಮಿಸ್ಟರ್​ಗಳ ಪರೀಕ್ಷೆ ನಡೆಸಬೇಕು.. ಪಿಯು ಪರೀಕ್ಷೆ ರದ್ದುಗೊಳಿಸಿದಂತೆ ಹಿಂದಿನ ಸೆಮಿಸ್ಟರ್ ಪರೀಕ್ಷೆ ರದ್ದುಪಡಿಸಬೇಕು.. ಪಿಯುಸಿಯಲ್ಲಿ ಅನುಸರಿಸಿದ ಮಾನದಂಡವನ್ನೇ ಡಿಪ್ಲೋಮಾ ಕೋರ್ಸ್‌ ಗಳಿಗೂ ಅನುಸರಿಬೇಕು ಎಂದು ಪ್ರತಿಭಟನಾ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

The post ಪಿಯು ಪರೀಕ್ಷೆಯಂತೆ ಡಿಪ್ಲೊಮಾ ಹಿಂದಿನ ಸೆಮಿಸ್ಟರ್ ಪರೀಕ್ಷೆಯೂ ರದ್ದಾಗಲಿ- ವಿದ್ಯಾರ್ಥಿಗಳಿಂದ ಪ್ರತಿಭಟನೆ appeared first on News First Kannada.

Source: newsfirstlive.com

Source link