ಪಿ ಎಸ್ ಐ ನೇಮಕಾತಿ ಹಗರಣದಲ್ಲಿ ಮಂತ್ರಿಗಳು ಮತ್ತು ಪೊಲೀಸರು ಶಾಮೀಲಾಗಿದ್ದಾರೆ: ಸಿದ್ದರಾಮಯ್ಯ | Ministers and police involved in PSI recruitment scam says former CM Siddaramaiah ARBಹಗರಣದಲ್ಲಿ ಸಚಿವರು ಮತ್ತು ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅವರ ನಡುವಿನ ಬಾಂಧವ್ಯ ಬೆಳಕಿಗೆ ಬರುತ್ತಿದೆ. ಅವರ ನಡುವೆ ಹೊಂದಾಣಿಕೆ ಇರುವುದರಿಂದಲೇ ಇಷ್ಟು ದೊಡ್ಡಮಟ್ಟದ ಹಗರಣ ನಡೆಯುವುದು ಸಾಧ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

TV9kannada Web Team


| Edited By: Arun Belly

May 07, 2022 | 6:18 PM
ಪಿ ಎಸ್ ಐ ನೇಮಕಾತಿ ಹಗರಣ (PSI Recruitment Scam) ಸಾಮಾನ್ಯವಾದುಲ್ಲ, ಇದರಲ್ಲಿ ಸಚಿವರು ಮತ್ತು ಪೊಲೀಸ್ ಅಧಿಕಾರಿಗಳು (police officials) ಶಾಮೀಲಾಗಿರುವುದರಿಂದ ಇದು ಬಹಳ ಗಂಭೀರವಾದ ಪ್ರಕರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಶನಿವಾರ ಬೆಳಗಾವಿಯಲ್ಲಿ ಹೇಳಿದರು. ನಗರದಲ್ಲಿ ಪತ್ರಕರ್ತರೊಂದಿಗೆ ಮಾತಾಡಿದ ಮಾಜಿ ಮುಖ್ಯಮಂತ್ರಿಗಳು ಉಚ್ಚ ನ್ಯಾಯಾಲಯದ ಒಬ್ಬ ಹಾಲಿ ನ್ಯಾಯಧೀಶರ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಸಬೇಕು, ತನಿಖೆಯನ್ನು ಪೊಲೀಸರೇ ಮಾಡಲಿ ಅದರೆ, ಅದು ನ್ಯಾಯಾಧೀಶರ ನಿಗಾನಲ್ಲಿ ಆಗಬೇಕು, ಯಾಕೆಂದರೆ ಇದರಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳು ಶಾಮೀಲಾಗಿದ್ದಾರೆ, ಅವರು ಸಿಐಡಿ ಮೇಲೆ ಪ್ರಭಾವ ಬೀರಿ ತನಿಖೆಯನ್ನು ಹಳ್ಳ ಹಿಡಿಸುತ್ತಾರೆ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರ ಸಂಬಂಧಿಯೊಬ್ಬ ಸೆಲೆಕ್ಟ್ ಆಗಿದ್ದಾನೆ. ಅವನ ಮೇಲೆ ಅಕ್ರಮ ನಡೆಸಿರುವ ಆರೋಪವಿದೆ. ತನಿಖಾಧಿಕಾರಿಗಳು ಅವನಿಗೆ ನೋಟೀಸ್ ನೀಡಿ ವಿವಾಣೆಗೆ ಕರೆಸಿ ವಾಪಸ್ಸು ಕಳಿಸಿಬಿಡುತ್ತಾರೆ. ಉಳಿದ ಆರೋಪಿಗಳನ್ನು ಜೈಲಿಗೆ ಕಳಿಸಿದ್ದರೆ ಇವನನ್ನು ಯಾಕೆ ಮನೆಗೆ ಕಳಿಸುತ್ತಾರೆ ಎಂದು ಸಿದ್ದರಾಮಯ್ಯ ಕೇಳುತ್ತಾರೆ. ಸಚಿವರು ಸಿಐಡಿ ಮೇಲೆ ಪ್ರಭಾವ ಬೀರಿದ ಕಾರಣದಿಂದಾಗೇ ಅವನನ್ನು ಮನೆಗೆ ಕಳಿಸಲಾಗಿದೆ ಅಂತ ಅರ್ಥಮಾಡಿಕೊಳ್ಳುವುದು ಕಷ್ಟವೇ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳುತ್ತಾರೆ.

ತಮ್ಮ ಪ್ರಕಾರ ಹಗರಣದಲ್ಲಿ ಸಚಿವರು ಮತ್ತು ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅವರ ನಡುವಿನ ಬಾಂಧವ್ಯ ಬೆಳಕಿಗೆ ಬರುತ್ತಿದೆ. ಅವರ ನಡುವೆ ಹೊಂದಾಣಿಕೆ ಇರುವುದರಿಂದಲೇ ಇಷ್ಟು ದೊಡ್ಡಮಟ್ಟದ ಹಗರಣ ನಡೆಯುವುದು ಸಾಧ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

TV9 Kannada


Leave a Reply

Your email address will not be published. Required fields are marked *