ಬಿಗ್‍ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿ ಎರಡು ದಿನ ಕಳೆದಿದೆ. ಆಗಲೇ ಮನೆಯಲ್ಲಿ ಪ್ರತಿಸ್ಪರ್ಧಿಗಳ ನಡುವೆ ಜಗಳ, ವಾದ-ವಿವಾದ ಹಾಗೂ ಅಸಮಾಧಾನ ಕಾಣಿಸಿಕೊಳ್ಳುತ್ತಿದೆ. ದಿವ್ಯಾ ಸುರೇಶ್ ಪುಕ್ಸಟ್ಟೆ ಸಲಹೆ ಕೊಟ್ಟಿರುವ ಸಂಬರಗಿಯನ್ನು ತರಾಟೆಗೆ ತೆಗೆದೊಕೊಂಡಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿ ಒಂದು ಕಡೆ ತಳ್ಳು ಬಂಡಿ ಟಾಸ್ಕ್ ಮತ್ತೊಂದು ಕಡೆ ಕುರ್ಚಿ ಪಾಲಿಟಿಕ್ಸ್ ಟಾಸ್ಕ್ ಆರಂಭವಾಗಿ 24 ಗಂಟೆ ಕಳೆದಿದೆ. ಈ ಆಟ ಆಡುವ ವೇಳೆ ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಸುರೇಶ್ ಅವರ ನಡುವೆ ಮಾತುಕತೆ ಆರಂಭವಾಗಿತ್ತು. ಈ ಮಾತು ಕಥೆ ದೊಡ್ಡ ಜಗಳವಾಗಿದೆ. ಇದನ್ನೂ ಓದಿ: ಅನುಷ್ಕಾ ಶರ್ಮಾಗೆ ಕಾಡುತ್ತಿದೆ ಕೂದಲುದುರುವ ಸಮಸ್ಯೆ

ಪ್ರಶಾಂತ್ ಸಂಬರಗಿ ಮೊದಲ ಇನ್ನಿಂಗ್ಸ್ ಮುಗಿಸಿ ಮನೆಗೆ ಹೋದಾಗ ನಿಮ್ಮ ಅಮ್ಮ ಖುಷಿಯಾಗಿರಬೇಕಲ್ಲವಾ ಎಂದು ದಿವ್ಯಾ ಸುರೇಶ್ ಅವರ ಬಳಿ ಕೇಳುತ್ತಾರೆ. ಜೊತೆಗೆ ನಿಮ್ಮ ಅಮ್ಮ ನನ್ನ ಬಗ್ಗೆ ಏನು ಹೇಳಿದರು ಅಂತ ಮಾತು ಆರಂಭಿಸಿದ ಪ್ರಶಾಂತ್ ಸಂಬರಗಿ, ನಾನು ನಿಮ್ಮ ಬಗ್ಗೆ ಈ ಬಿಗ್‍ಬಾಸ್ ಮನೆಯಲ್ಲಿ ಒಂದು ಸಲವೂ ನೆಗೆಟಿವ್ ಆಗಿ ಮಾತನಾಡಿಲ್ಲ ಎನ್ನುತ್ತಾರೆ.

ನನಗೆ ಸುಮಾರು ಜನ ಹೇಳಿದ್ದಾರೆ. ನೀವು ಪ್ರತಿ ವಾರ ನನ್ನನ್ನು ಟಾರ್ಗೆಟ್ ಮಾಡುತ್ತಿದ್ರಿ ಅಂತ. ನಿಮ್ಮ ಜತೆ ಶಮಂತ್ ಹಾಗೂ ಚಕ್ರವರ್ತಿ ಚಂದ್ರಚೂಡ್  ಅವರೂ ಇರುತ್ತಿದ್ದರು ಅಂತ ಹೇಳುತ್ತಾರೆ ಎಂದು ದಿವ್ಯಾ ಸುರೇಶ್ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸಂಬರಗಿ ಅದು ಕೇವಲ ನಾಮಿನೇಶನ್ ಸಮಯದಲ್ಲಿ ಮಾತ್ರ ಎಂದಿದ್ದಾರೆ.

ಮಾತು ಮುಂದುವರೆಸಿದ ದಿವ್ಯಾ ಸುರೇಶ್, ನೀವು ಪ್ರತಿ ಸಲ ಬಂದು ನನ್ನ ಬಳಿ ನಾನು ಮಂಜು ಜೊತೆ ಇದ್ದಿದ್ದು ತಪ್ಪು, ನೀನು ಮಂಜು ಬಾಲದಂತೆ, ಹಾಗೆ-ಹೀಗೆ ಎಂದಾಗ ನಾನು ನನ್ನ ಸ್ಟ್ಯಾಂಡ್ ತೆಗೆದುಕೊಳ್ಳಲಿಲ್ಲ. ಅದು ನಾನು ಮಾಡಿದ ತಪ್ಪು. ಅದರಿಂದಲೇ ವೀಕ್ಷಕರ ಎದುರು ನಾನು ತಪ್ಪಿತಸ್ಥೆಯಂತೆ ಕಾಣಿಸಿಕೊಂಡಿದ್ದೀನಿ ಎಂದು ಖಾರವಾಗಿ ಉತ್ತರಿಸಿದ್ದಾರೆ. ಅದಕ್ಕೆ ಪ್ರಶಾಂತ್ ಪುಕ್ಸಟ್ಟೆ ಸಲಹೆ ಕೊಟ್ಟಿದ್ದು ನನ್ನ ತಪ್ಪು ಎಂದಿದ್ದಾರೆ. ಹೀಗೆ ಇಬ್ಬರ ನಡುವೆ ಕೆಲವು ಸಮಯ ಮಾತಿನ ಚಕಮಕಿ ನಡೆದಿದೆ.

ತಳ್ಳು ಬಂಡಿ ಟಾಸ್ಕ್ ಆಡುವಾಗ ದಿವ್ಯಾ ಸುರೇಶ್ ತಮ್ಮ ಪಾದಕ್ಕೆ ಗಾಯ ಮಾಡಿಕೊಂಡಿದ್ದು, ಅಲ್ಲೇ ಚಿಕಿತ್ಸೆ ನೀಡಲಾಗಿದೆ. ಮನೆಯಲ್ಲಿ ಹೊಸ ಹೊಸ ಟಾಸ್ಕ್​ಗಳ ಮೂಲಕ ಸ್ಪರ್ಧಿಗಳಿಗೆ ಸವಾಲೆಸೆಯಲಾಗುತ್ತಿದೆ. ಸ್ಪರ್ಧಿಗಳು ಪೈಪೋಟಿಗೆ ಬಿದ್ದು ಟಾಸ್ಕ್​ಗಳ ಉತ್ತಮ ಪ್ರದರ್ಶನ ನೀಡಲು ಮುಂದಾಗುತ್ತಿದ್ದಾರೆ.

The post ಪುಕ್ಸಟ್ಟೆ ಸಲಹೆಗೆ ದಿವ್ಯಾ ಸುರೇಶ್ ಗರಂ appeared first on Public TV.

Source: publictv.in

Source link