ರಾಕಿಂಗ್​ ಸ್ಟಾರ್​ ಯಶ್​​-ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್​ ಮುದ್ದಿನ ಮಗಳು ಐರಾ ಎಲ್ಲರಿಗೂ ಅಚ್ಚುಮೆಚ್ಚು. ಐರಾಳ ಮುದ್ದು ಮುಖ, ಕ್ಯೂಟ್​ ನಗು ಹಾಗೇ ತಂದೆ-ತಾಯಿ ಜೊತೆ ಆ ಮಾತುಕತೆ.. ಇದೆಲ್ಲವೂ ಯಶ್​​-ರಾಧಿಕಾ ಅಭಿಮಾನಿಗಳಿಗಲ್ಲದೇ ನೋಡಿದ ಎಲ್ಲರಿಗೂ ಅದೇನೋ ಖುಷಿ. ಸದ್ಯ ರಾಧಿಕಾ ಪಂಡಿತ್​​ ಪೋಸ್ಟ್​ ಮಾಡಿರುವ ಹಳೆಯ ವಿಡಿಯೋವೊಂದರಲ್ಲೂ ಐರಾ ತನ್ನ ಹೊಸ ಫ್ರೆಂಡ್​ ಜೊತೆ ಮಾತುಕತೆ ನಡೆಸುತ್ತಿರೋದು ನೋಡಬಹುದು.

ಹೌದು.. ಈ ವಿಡಿಯೋದಲ್ಲಿ ಮುದ್ದು ಐರಾ ಆಗಿನ್ನೂ ಪುಟ್ಟ ಪುಟ್ಟ ಹೆಜ್ಜೆಗಳನ್ನ ಇಡುತ್ತಿದ್ದಳಷ್ಟೆ. ತಾಯಿ ರಾಧಿಕಾ ಪಂಡಿತ್​ ಹಾಗೂ ಅಜ್ಜಿಯ ಜೊತೆ ವಾಕ್​ ಹೊರಟ ಐರಾಗೆ ಅಲ್ಲಿ ಹೊಸ ಫ್ರೆಂಡ್​​ ಪರಿಚಯವಾಗಿತ್ತು. ಯಾರು ಅಂತೀರಾ.? ಐರಾಳ ನೆರಳು…ಯೆಸ್​.. ಪುಟ್ಟ ಮಗುವಿಗೇನು ಗೊತ್ತು ಅದು ನೆರಳು ಅಂತ? ನಾವಂದ್ರೂ ಅಷ್ಟೇ ಅಲ್ವಾ? ಆ ನೆರಳನ್ನ ಅದ್ಯಾರೋ ಇರಬೇಕು ಅಂದ್ಕೊಂಡ ಐರಾ ಯಶ್​, ಕೈ ಬೀಸಿ ಹಾಯ್​ ಅಂದಿದ್ದಾಳೆ.

ಐರಾಳ ಈ ಮುಗ್ಧತೆ ನೋಡಿ ನಟಿ ರಾಧಿಕಾ ಪಂಡಿತ್​ ಹಾಗೂ ಅವರ ತಾಯಿ ಖುಷಿಯಿಂದ ನಗುತ್ತಿರೋದು ವಿಡಿಯೋದಕ್ಕೆ ಕೇಳಬಹುದು. ಈ ಬಗ್ಗೆ ಐರಾಳಿಗೆ ಎರಡೂವರೆ ವರ್ಷಗಳು ತುಂಬಿದ ಬಳಿಕ ಹಂಚಿಕೊಂಡ ರಾಧಿಕಾ ಪಂಡಿತ್​, ಈ ಕಷ್ಟಕಾಲದಲ್ಲಿ ಪ್ರೇಕ್ಷಕರ ಮುಖದಲ್ಲಿ ನಗು ತರಿಸಿದ್ದಾರೆ. ‘ಆಗಿನ್ನೂ ಐರಾ ಹೆಜ್ಜೆ ಇಡೋದನ್ನ ಕಲಿಯುತ್ತಿದ್ದಳಷ್ಟೆ, ಆದ್ರೆ ಒಬ್ಬ ಫ್ರೆಂಡ್​​ನಿಂದಾಗಿ ಅವಳ ಗಮನ ಬೇರೆಡೆಗೆ ಹೋಗಿತ್ತು. ಅದೇ ಅವಳ ನೆರಳು. ಮಕ್ಕಳ ಒಂದು ಅದ್ಭುತ ಗುಣವೇ ಇದು. ಎಲ್ಲರಿಗೂ, ಎಲ್ಲಾದರ ಜೊತೆಗೂ ದಯೆಯಿಂದ ವರ್ತಿಸುತ್ತಾರೆ. ಯಾಕಂದ್ರೆ ಮಕ್ಕಳು ಯಾರನ್ನೂ, ಯಾವುದನ್ನೂ ಜಡ್ಜ್​​ ಮಾಡಲ್ಲ’ ಅಂತ ರಾಧಿಕಾ ಪಂಡಿತ್​ ಈ ಕ್ಯೂಟ್​ ಪೋಸ್ಟ್​ಗೆ ಕ್ಯಾಪ್ಶನ್​ ಬರೆದಿದ್ದಾರೆ.

 

View this post on Instagram

 

A post shared by Radhika Pandit (@iamradhikapandit)

The post ಪುಟಾಣಿ ಐರಾ ಫ್ರೆಂಡ್​ ಯಾರು ಗೊತ್ತಾ.? ನೋಡಿದ್ರೆ ರಾಧಿಕಾ ನಕ್ಕಂತೆ ನೀವೂ ಖುಷಿ ಪಡ್ತೀರ appeared first on News First Kannada.

Source: newsfirstlive.com

Source link