ಪುಟ್ಟಕ್ಕನ ಮಕ್ಕಳು.. ಹಿರಿಯ ನಟಿ ಉಮಾಶ್ರೀ ಅವರು ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿರುವ ಬಹು ನಿರಿಕ್ಷೀತ ಧಾರಾವಾಹಿ. ಪ್ರೋಮೊನಿಂದಲೇ ಸಖತ್ ಸದ್ದು ಮಾಡ್ತಾಯಿದ್ದು, ಈಗಾಗಲೆ ಇಡೀ ಟೀಮ್ ಚಿತ್ರಿಕರಣದಲ್ಲಿ ಬ್ಯುಸಿಯಾಗಿದೆ ಮೂವರು ಹೆಣ್ಣುಮಕ್ಕಳ ತಾಯಿ ಪುಟ್ಟಕ್ಕಳನ್ನ ಗಂಡ ಬಿಟ್ಟ ಹೋಗಿರುತ್ತಾನೆ. ಬಡತನದ ನಡುವೆ ಮಕ್ಕಳನ್ನ ಪುಟ್ಟಕ್ಕ ಒಳ್ಳೆಯ ಸ್ಥಾನಕ್ಕೆ ತರಲು ಕಷ್ಟ ಪಡುತ್ತಿರುತ್ತಾಳೆ. ಅವಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಾ? ಅನ್ನೋದೇ ಕತೆಯ ಎಳೆಯಾಗಿದೆ.
ಈ ಸೀರಿಯಲ್ನ್ನ ಜೊತೆಜೊತೆಯಲಿ ಸೀರಿಯಲ್ ನಿರ್ದೇಶಕ ಆರೂರು ಜಗದೀಶ್ ಅವರು ನಿರ್ದೇಶಿಸುತ್ತಿದ್ದು, ಈ ಹಿಂದೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪ್ರಮುಖ ಲೀಡ್ ನಟಿ ಅಮಿತಾ ಸದಾಶಿವ ಅವರು ಧಾರಾವಾಹಿಯಿಂದ ಹೊರನಡೆದಿದ್ದ ಬಗ್ಗೆ ನಿಮಗೆ ಮಾಹಿತಿ ನೀಡಿದ್ವಿ. ಈಗ ಆ ಪಾತ್ರವನ್ನ ಸಂಜನಾ ಬುರ್ಲಿ ಅವರು ನಿರ್ವಹಿಸುತ್ತಿರು ಬಗ್ಗೆ ಕೂಡಾ ನಿಮಗೆ ತಿಳಿದಿದೆ.. ಅಂದ್ಹಾಗೆ ಸಂಜನಾ ಅವರು ಈ ಹಿಂದೆ ಲಗ್ನಪತ್ರಿಕೆ ಎಂಬ ಧಾರಾವಾಹಿಯ ಲೀಡ್ ಆಗಿ ಅಭಿನಯಿಸಿದ್ದರು. ಈಗ ಪುಟ್ಟಕ್ಕನ ಮಕ್ಕಳು ಸೀರಿಯಲ್ನ ಸ್ನೇಹಾ ಪಾತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಇನ್ನೂ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಜನಾ.. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಾನೂ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಿನಿ.. ಈ ಪಾತ್ರ ಹಾಗೂ ಟೀಮ್ ಬಗ್ಗೆ ತುಂಬಾನೆ ಎಕ್ಸೈಟ್ಮೆಂಟ್ ಇದೆ.
ಈ ಮುಂಚೆ ನಾನೂ ಲಗ್ನ ಪತ್ರಕೆ ಧಾರಾವಾಹಿಯಲ್ಲಿ ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿದೆ. ಲಗ್ನಪತ್ರಿಕೆ ಧಾರಾವಾಹಿಯಲ್ಲಿ ಒಂದು ಪುಟ್ಟ ಜರ್ನಿ ಸಿಕ್ತು ಕಾರಣ ಸೀರಯಲ್ ಬೇಗನೆ ಆಫ್ ಏರ್ ಆಯ್ತು.. ಹೀಗೇ ಒಂದು ದಿನ ಇದ್ದಕ್ಕಿದ್ದ ಹಾಗೇ ಸೀರಿಯಲ್ ವೈಂಡ್ಪ್ ಆಗತ್ತೆ ಅನ್ನುವ ಸುದ್ದಿ ಬಂತು ನಾನೂ ಹಾಗೂ ಇಡಿ ತಂಡ ಫುಲ್ ಶಾಕ್ ಆದ್ವಿ.. ಆಗಿನ್ನು ನನ್ನ ಪಾತ್ರಕ್ಕೆ ಚಿಕ್ಕದಾಗಿ ಫೇಮ್ ಸಿಕ್ತಾಯಿತ್ತು.. ಹಾಗೂ ನನ್ನ ಪಾತ್ರದ ಬಗ್ಗೆ ಪೊಸಿಟಿವ್ ರೆಸ್ಪಾಂನ್ಸ್ ಸಿಕ್ತಾಯಿತ್ತು.. ಆದ್ರೆ ಒಂದೆಸಲಕ್ಕೆ ಎಲ್ಲಾ ಸ್ಟಾಪ್ ಆಯ್ತು.
ಲಗ್ನ ಪತ್ರಿಕೆ ಸೀರಿಯಲ್ ಬಳಿಕ ನನಗೆ ಸಾಕಷ್ಟು ಆಫರ್ಗಳು ಬಂದ್ವು ಆದ್ರೆ ನಾನಿನ್ನೂ ಓದ್ತಾಯಿದ್ದೆ.. ಹಾಗಾಗಿ ಓದಿಗೋಸ್ಕರ ಆ್ಯಕ್ಟಿಂಗ್ಗೆ ಬ್ರೇಕ್ ಕೊಡೊಣ ಅಂತಾ ಡಿಸೈಡ್ ಮಾಡಿದ್ದೆ.. ಆದ್ರೆ ಒಂದು ದಿನ ಆರೂರ್ ಜಗದೀಶ್ ಸರ್ ಕಾಲ್ ಮಾಡಿ ಈ ರೀತಿ ಒಂದು ಪಾತ್ರ ಇದೆ ಟ್ರೈ ಮಾಡು ಅಂತಾ ಹೇಳಿದ್ರು.
ಆರೂರ್ ಜಗದೀಶ್ ಸರ್ ಜೊತೆ ಮಾತನಾಡಿದ್ದೆ ಆದ್ರೆ ನಾನೂ ಯಾವುದೆ ಡಿಸಿಶನ್ ತಗೊಂಡಿರಲಿಲ್ಲಾ.. ಅವ್ರು ಕೇಳಿದ ಒಂದಿಷ್ಟು ದಿನಗಳಲ್ಲಿ ಕೋವಿಡ್ ಹಾವಳಿಯಿಂದ ಲಾಕ್ಡೌನ್ ಮಾಡಲಾಯ್ತು.. ಬಳಿಕ ಆನ್ಲೈನ್ ಕ್ಲಾಸ್ ಶುರುವಾಯ್ತು.. ಆಗಾ.. ನಾನೂ ಮತ್ತೆ ಆ್ಯಕ್ಟಿಂಗ್ ಶುರುಮಾಡ್ಬೇಕು ಅಂತಾ ನಿರ್ಧರಿಸಿ ಆರೂರ್ ಜಗದೀಶ್ ಸರ್ಗೆ ಕಾಲ್ ಮಾಡಿ ಆ್ಯಕ್ಟ್ ಮಾಡ್ತೀನಿ. ನಾನೂ ಆ್ಯಕ್ಟಿಂಗ್ ಹಾಗೂ ಎಜ್ಯೂಕೆಶನ್ ಎರಡನ್ನೂ ಬ್ಯಾಲೆನ್ಸ್ ಮಾಡ್ತೀನಿ ಅಂತಾ ತೀರ್ಮಾನಿಸಿದೆ.
ನಂತರ ನಾನೂ ಲುಕ್ ಟೆಸ್ಟ್ ನೀಡಿದೆ.. ಒಂದು ವಾರದಲ್ಲಿ ನಾವೂ ಮೊಕ್ ಶೂಟ್ ಶುರುಮಾಡಿದ್ವಿ.. ನನಗೆ ಖುಷಿ ನೀಡಿದ ವಿಚಾರ ಅಂದ್ರೆ ನಾನೂ ಉಮಶ್ರೀ ಅಮ್ಮ ಜೊತೆ ಸ್ಕ್ರೀನ್ ಶೇರ್ ಮಾಡ್ತಾಯಿರೊದು..ಮೊಕ್ ಶೂಟ್ ನಂತ್ರ ಸೆಪ್ಟಂಬರ್ ತಿಂಗಳಿಂದ ಶೂಟಿಂಗ್ ಶುರುವಾಯ್ತು.. ನಾನೂ ಕಲಿಯೋಕೆ ಒಳ್ಳೆಯ ಎಕ್ಸ್ಪಿರಿಯನ್ಸ್ ಅಂತಾ ನಟಿ ಸಂಜನಾ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನೂ ತಮ್ಮ ಪಾತ್ರದ ಬಗ್ಗೆ ಮತನಾಡಿರುವ ಸಂಜನಾ.. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಾನೂ ಸ್ನೇಹಾ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದೀನಿ..ಸ್ನೇಹಾ ದೊಡ್ಡದೊಂದು ಗುರಿ ಇಟ್ಟುಕೊಂಡಿರುತ್ತಾಳೆ.. ಅವ್ಳಿಗೆ IAS ಆಫಿಸರ್ ಆಗಬೇಕೆಂಬ ದೊಡ್ಡ ಕನಸು ಇರತ್ತೆ.. ಈ ಕನಸು ಚಿಕ್ಕ ವಯಸ್ಸಿನಿಂದಲು ಇರತ್ತೆ. ಈ ಪಾತ್ರದಲ್ಲಿ ನಾನೂ ಹಳ್ಳಿಯ ಹುಡುಗಿಯಾಗಿ ಕಾಣಿಸಿಕೊಳ್ತೀನಿ.. ಯಾವುದೇ ಗ್ಲಾಮರ್ ಲುಕ್ ಇರಲ್ಲಾ ಎಂದಿದ್ದಾರೆ.
ಒಟ್ನಲ್ಲಿ ಹೊಸ ಪ್ರಾಜೆಕ್ಟ್ ಬಗ್ಗೆ ಸಖತ್ ಖುಷಿಯಾಗಿರುವ ಸಂಜನಾ.. ಪಾತ್ರಕ್ಕಾಗಿ ಸಾಕಷ್ಟು ತಯಾರಿಗಳನ್ನು ನಡೆಸ್ತಾಯಿದ್ದಾರಂತೆ.. ಸ್ನೇಹಾ ಆ್ಯಂಡ್ ಇಡಿ ಟೀಮ್ಗೆ ನಮ್ ಕಡೆಯಿಂದ ಬೆಸ್ಟ್ ವಿಶ್ಶಸ್.
The post ‘ಪುಟ್ಟಕ್ಕನ ಮಕ್ಕಳ’ ಬಗ್ಗೆ ನಟಿ ಸಂಜನಾ ಹೇಳಿದ್ದೇನು ಗೊತ್ತಾ..? appeared first on News First Kannada.