ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿ ಅಕ್ರಮ ಹಣ ವರ್ಗಾವಣೆ ಪ್ರಕರಣ: ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡ ಇಡಿ | Puttenahalli Illegal money transfer case ED registers separate Case Crime News


ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿ ಅಕ್ರಮ ಹಣ ವರ್ಗಾವಣೆ ಪ್ರಕರಣ: ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡ ಇಡಿ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಪ್ರತ್ಯೇಕ‌ ಪ್ರಕರಣ ದಾಖಲಿಸಿಕೊಂಡು ಇಡಿಯಿಂದ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಬಂಧಿಸಿದ್ದ ನಾಲ್ವರಿಂದ ಅಕ್ರಮ ವ್ಯವಹಾರ ಪತ್ತೆ ಆಗಿದೆ. ಫೈಜಲ್, ಫಜಲ್, ಅಬ್ದುಲ್ ಮನಾಫ್, ಮೊಹಮ್ಮದ್ ಸಾಲಿ ಈ ನಾಲ್ವರಿಂದ ಕೋಟ್ಯಂತರ ರೂ. ಅಕ್ರಮ ವ್ಯವಹಾರ ನಡೆದಿತ್ತು. 2,886 ಅಕೌಂಟ್‌ಗಳಿಗೆ ಹಣ ವರ್ಗಾವಣೆ ಆಗಿದ್ದು ಬೆಳಕಿಗೆ ಬಂದಿತ್ತು. ಹೀಗಾಗಿ ಪ್ರಕರಣ ದಾಖಲಿಸಿಕೊಂಡ ಇಡಿ ತನಿಖೆಗೆ ಇಳಿದಿದೆ.

ಇಡಿ ಅಂಗಳಕ್ಕೆ ಪುಟ್ಟೇನಹಳ್ಳಿ ಠಾಣೆಯಲ್ಲಿ ನಡೆದಿದ್ದ ಮನಿ ಲಾಂಡರಿಂಗ್ ಕೇಸ್ ಬಂದಿದೆ. ಒಂದು ಲಕ್ಷ ಹಣದ ಜೊತೆ ಎಟಿಎಂ ಮುಂದೆ ನಿಂತಿದ್ದ ಓರ್ವನನ್ನು ಪುಟ್ಟೇನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದರು. ಆತನ ಮಾಹಿತಿ ಆಧಾರದ ಮೇಲೆ ಮನೆಯಲ್ಲಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿತ್ತು. ಫೈಜಲ್, ಫಜಲ್, ಅಬ್ದುಲ್ ಮನಾಫ್, ಮಹಮ್ಮದ್ ಸಾಲಿ ಬಂಧಿಸಲಾಗಿತ್ತು. ಬಂಧಿತ ನಾಲ್ವರಿಂದ ನೂರಾರು ಕೋಟಿ ಅಕ್ರಮ ವ್ಯವಹಾರ ನಡೆದಿತ್ತು. ಬೇರೆ ಬೇರೆ 2886 ಅಕೌಂಟ್ ಗಳಿಗೆ ಹಣ ವರ್ಗಾವಣೆ ಆಗಿತ್ತು ಎಂದು ತಿಳಿದುಬಂದಿತ್ತು.

ಇದೇ ಜಾಲ ದೇಶಾದ್ಯಂತ ಹರಡಿರುವ ಶಂಕೆ ವ್ಯಕ್ತವಾಗಿದೆ. ಇದೇ ಹವಾಲ ಕೇಸ್ ತನಿಖೆ ಮುಂದುವರೆಸಲಾಗಿದೆ. ಬ್ಯಾಂಕ್ ಅಕೌಂಟ್ ಹೊಂದಿರುವವರ ವಿಚಾರಣೆ ನಡೆಸಲಾಗಿದೆ. ಆದರೆ ಅಕೌಂಟ್ ಹೋಲ್ಡರ್ಸ್ ಕೊವಿಡ್ ನೆಪ ಹೇಳುತ್ತಿದ್ದಾರೆ. ಈಗಾಗಲೇ ಹಲವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿರುವ ಪೊಲೀಸರು, ಹವಾಲಾ ದಂಧೆಯ ಕಿಂಗ್ ಪಿನ್ ರಿಯಾಜ್ ಹಾಗೂ ಮನಸ್ ಸಹೋದರರ ಬಂಧನಕ್ಕೂ ಬಲೆ ಬೀಸಿದ್ದಾರೆ.

TV9 Kannada


Leave a Reply

Your email address will not be published. Required fields are marked *