ಕೊರೊನಾ ಎರಡನೇ ಅಲೆ ಮುಗಿಯುತ್ತಾ ಬಂದಿದ್ದು ಇದೀಗ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆಗಳನ್ನ ಕೊಡುತ್ತಿದ್ದಾರೆ. ಅಲ್ಲದೇ ಕೊರೊನಾ ಮೂರನೇ ಅಲೆ ವಯಸ್ಕರಿಗಿಂತಲೂ ಹೆಚ್ಚಾಗಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನಲಾಗಿದೆ.

ಈ ಮಧ್ಯೆ ಕೊರೊನಾ ಸೋಂಕಿನ ಸಮಯದಲ್ಲಿ ಕಷ್ಟ ಅನುಭವಿಸಿದವರ ಬೆನ್ನಿಗೆ ನಿಂತಿದ್ದ ನಟ ಸುದೀಪ್ ಅವರ ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್ ಇದೀಗ ಮಕ್ಕಳ ಆರೋಗ್ಯ ಹೆಚ್ಚಿಸುವ ಕೆಲಸಕ್ಕೆ ಮುಂದಾಗಿದೆ. ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗದಿದ್ದಲ್ಲಿ ಮಕ್ಕಳ ಮೇಲೆ ಥರ್ಡ್ ವೇವ್ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ವೈದ್ಯರ ಸಲಹೆಯ ಮೇರೆಗೆ ಚಾರಿಟೇಬಲ್ ಟ್ರಸ್ಟ್ ಇದೀಗ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸಲು ಮುಂದಾಗಿದೆ. ಅದ್ರಲ್ಲೂ ಗ್ರಾಮೀಣ ಪ್ರದೇಶದ 1-10 ವರ್ಷದ ಮಕ್ಕಳಿಗೆ ಒಂದು ತಿಂಗಳಿಗಾಗುವಷ್ಟು ಪೌಷ್ಠಿಕ ಆಹಾರ ತಲುಪಿಸುವ ಕೆಲಸವನ್ನ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮಾಡಲಿದೆ ಎಂದು ಟ್ರಸ್ಟ್​ ಅಧ್ಯಕ್ಷರಾದ ರಮೇಶ್ ಕಿಟ್ಟಿ ಹೇಳಿದ್ದಾರೆ.

ಅಲ್ಲದೇ ಇದಕ್ಕಾಗಿ ಹೆಲ್ಪ್​ಲೈನ್​ ನಂಬರ್​​ನ್ನೂ ಸಹ ತೆರೆದಿರುವ ಟ್ರಸ್ಟ್​ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳು ಈ ಸೇವೆಯ ಉಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. 6360334455 ಈ ನಂಬರ್​ಗೆ ಕರೆಮಾಡಿದಲ್ಲಿ ನಿಮ್ಮ ಮನೆ ಬಾಗಿಲಿಗೆ ಪೌಷ್ಠಿಕ ಆಹಾರ ತಲುಪಲಿದೆ ಎಂದು ರಮೇಶ್ ಕಿಟ್ಟಿ ಮಾಹಿತಿ ನೀಡಿದ್ದಾರೆ.

The post ಪುಟ್ಟ ಕಂದಮ್ಮಗಳ ರಕ್ಷಣೆಗೆ ನಿಂತ ಕಿಚ್ಚ; ಬಡವರ ಮನೆ ಬಾಗಿಲಿಗೇ ಬರಲಿದೆ ಪೌಷ್ಠಿಕ ಆಹಾರ appeared first on News First Kannada.

Source: newsfirstlive.com

Source link