ಪುಟ್ಟ ಬಾಲಕನೋರ್ವ ನುರಿತ ಕ್ರಿಕೆಟ್ ಬ್ಯಾಟ್ಸ್ ಮ್ಯಾನ್ ನಂತೆ ಕ್ರಿಕೆಟ್‍ನ ಎಲ್ಲಾ ವಿಧದ ಶಾಟ್‍ಗಳನ್ನು ಬ್ಯಾಟ್ ಇಲ್ಲದೆ ವಿಕೆಟ್‍ನಲ್ಲಿ ಹೊಡೆಯುವ ಮೂಲಕ ಕ್ರಿಕೆಟ್ ಪ್ರಿಯರ ಮನಗೆದ್ದಿದ್ದಾನೆ.

ಬಾಲಕ ನೆಟ್ಸ್ ನಲ್ಲಿ ಬ್ಯಾಟ್ ಬಳಸದೆ ಒಂದು ವಿಕೆಟ್ ಹಿಡಿದುಕೊಂಡು ಕ್ರಿಕೆಟ್‍ನ ವಿವಿಧ ಮಾದರಿಯ ಶಾಟ್‍ಗಳನ್ನು ಸಖತ್ ಸಲಿಸಾಗಿ ಹೊಡೆಯುವ ವೀಡೀಯೊ ಒಂದನ್ನು ಟ್ವಿಟ್ಟರ್‍ ನಲ್ಲಿ ಗ್ರೇಡ್ ಕ್ರಿಕೆಟರ್ ಎಂಬ ಹೆಸರಿನ ಖಾತೆಯೊಂದು ಹಾಕಿಕೊಂಡಿದೆ. ಇದನ್ನು ಗಮನಿಸಿದ ಕ್ರಿಕೆಟ್ ಅಭಿಮಾನಿಗಳು ಈ ಪುಟ್ಟ ಬಾಲಕನ ಪತ್ರಿಭೆಯನ್ನು ಕಂಡು ಬೆರಗಾಗಿದ್ದಾರೆ.

ವೀಡೀಯೊದಲ್ಲಿ ಬಾಲಕ ಕ್ರಿಕೆಟ್‍ನಲ್ಲಿ ಕಂಡು ಬರುವ ಸ್ವೀಪ್ ಶಾಟ್, ಡ್ರೈವ್, ಕವರ್ ಡ್ರೈವ್, ರಿವರ್ಸ್ ಸ್ವೀಪ್, ಕಟ್ ಶಾಟ್ ಮತ್ತು ಫ್ಲಿಕ್ ಶಾಟ್‍ಗಳನ್ನು ಬ್ಯಾಟ್ ಇಲ್ಲದೆ ವಿಕೆಟ್ ಮೂಲಕ ಬಾರಿಸುತ್ತಿದ್ದಾನೆ. ಬಾಲಕ ಸಿಮೆಂಟ್ ನೆಲದ ಮೇಲೆ ತಾಲೀಮು ಮಾಡುತ್ತಿದ್ದು ಹೆಲ್ಮೆಟ್, ಗ್ಲಾವ್ಸ್, ಪ್ಯಾಡ್ ಕಟ್ಟಿಕೊಂಡು ತನ್ನ ಅದ್ಭುತ ಪಾದ ಚಲನೆಯ ಮೂಲಕ ಉತ್ತಮವಾದ ಹೊಡೆತಗಳನ್ನು ಹೊಡೆಯುವ ಮೂಲಕ ತಾನೊಬ್ಬ ಭವಿಷ್ಯದ ಕ್ರಿಕೆಟ್ ಆಟಗಾರ ಎಂಬುದನ್ನು ಸಾಬೀತು ಪಡಿಸುತ್ತಿದ್ದಾನೆ.

The post ಪುಟ್ಟ ಬಾಲಕನ ಬ್ಯಾಟಿಂಗ್‍ಗೆ ಮನಸೋತ ಕ್ರಿಕೆಟ್ ಪ್ರಿಯರು appeared first on Public TV.

Source: publictv.in

Source link