ಪುಡ್​ಕಿಟ್​ ಅವಾಂತರ: ವಿತರಣೆ ವೇಳೆ ತಳ್ಳಾಟ, ಕಿತ್ತಾಟ.. ಮುಗಿಬಿದ್ದು ಕಿಟ್ ಹೊತ್ತೊಯ್ದ ಜನ

ಪುಡ್​ಕಿಟ್​ ಅವಾಂತರ: ವಿತರಣೆ ವೇಳೆ ತಳ್ಳಾಟ, ಕಿತ್ತಾಟ.. ಮುಗಿಬಿದ್ದು ಕಿಟ್ ಹೊತ್ತೊಯ್ದ ಜನ

ಚಿಕ್ಕಬಳ್ಳಾಪುರ: ಫುಡ್​ಕಿಟ್​ ವಿತರಣೆ ಸಂದರ್ಭದಲ್ಲಿ ಜನ ಕಿತ್ತಾಟ ನಡೆಸಿ ಕಿಟ್​ಗಳನ್ನು ಹೊತ್ತೊಯ್ದ ಘಟನೆ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ. ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಇಂದು ಪಟ್ಟಣದ ಶಾದಿ ಮಹಲ್​ನಲ್ಲಿ  ಪುಡ್​ಕಿಟ್​ ವಿತರಣೆ ಕಾರ್ಯಕ್ರಮ ಆಯೋಜಿಸಿದ್ದರು.

ಫುಡ್​ ಕಿಟ್​ ವಿತರಣಾ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಆಗಮಿಸಿದ್ದರು. ಸಾಂಕೇತಿಕವಾಗಿ ಪುಡ್​ಕಿಟ್​ಗೆ ಚಾಲನೆ ನೀಡಿ ನಾಯಕರು ತೆರಳಿದ ಬಳಿಕ ಶಾಸಕರು ಪುಡ್​ಕಿಟ್​ ವಿತರಿಸಲು ಆರಂಭಿಸಿದ್ದಾರೆ.

ಈ ಸಮಯದಲ್ಲಿ ನೆರೆದಿದ್ದ ಜನ, ಬಹಳ ಜನ ಇರೊದ್ರಿಂದ ಕಿಟ್​ ಸಿಗುತ್ತೇ ಇಲ್ವೊ ಅಂತ ಒಮ್ಮೇಲೆ ವೇದಿಕೆಯತ್ತ ನುಗ್ಗಿದ್ದು ನೂಕಾಟ, ತಳ್ಳಾಟಗಳೊಂದಿಗೆ ಕಿಟ್​ಗಾಗಿ ಕಿತ್ತಾಡಿ ವೇದಿಕೆ ಮೇಲಿನ ಕಿಟ್​ಗಳನ್ನು ಯಾರು ಬೇಕು ಅವ್ರು ಹೊತ್ತೊಯ್ದಿದ್ದಾರೆ.

ಇನ್ನು ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲೂ ಪುಡ್​ಕಿಟ್​ ಗಲಾಟೆ ನಡೆದಿದೆ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ನೀಡಲಾಗ್ತಿರುವ ಪುಡ್​ಕಿಟ್​ ವಿತರಣಾ ಕಾರ್ಯಕ್ರಮದಲ್ಲೂ ಕೂಡ ಗಲಾಟೆ ಉಂಟಾಗಿದೆ. ಕೋವಿಡ್​ ನಿಯಮ ಗಾಳಿಗೆ ತೂರಿ ಮಾರುಕಟ್ಟೆಯ ತುಂಬೆಲ್ಲ ಜಮಾಯಿಸಿದ್ದರು.


ಬಾಗಲಕೋಟೆಯಲ್ಲೂ ಫುಡ್‌ಕಿಟ್‌ ಪಡೆಯಲು ಹೋಗಿ ಮುಗಿಬಿದ್ದ ಕಾರ್ಮಿಕರು ಗಲಾಟೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜಿಲ್ಲೆಗೆ ಆಗಮಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ ಫುಡ್‌ ಕಿಟ್‌ ವಿತರಣೆ ಮಾಡಿದ್ರು, ಅದರ ಮುಂದುವರಿದ ಭಾಗವಾಗಿ ಇವತ್ತು ಬದಾಮಿಯ ತಹಶೀಲ್ದಾರ್‌ ಕಚೇರಿ ಬಳಿ ಫುಡ್‌ ಕಿಟ್‌ ನೀಡಲಾಯ್ತು. ಕಿಟ್ ಸಿಗುತ್ತೋ ಇಲ್ವೋ ಎಂದು ಕಾರ್ಮಿಕರ ನೂಕುನುಗ್ಗಲು ಶುರುವಾಯ್ತು, ಫುಡ್‌ ಕಿಟ್‌ ನಂಗೆ ಬೇಕು ಅಂತ ಕಾದಾಟಕ್ಕೆ ಇಳಿದ ಪ್ರಂಸಗವೂ ನಡೆಯಿತು.

 

ಇತ್ತ ಬದಾಮಿ ನಗರದ ತಹಶಿಲ್ದಾರ ಕಚೇರಿಯಲ್ಲಿ ಇಂದು ಕಟ್ಟಡ ಕಾರ್ಮಿಕರಿಗೆ ಪುಡ್​ಕಿಟ್​ ವಿತರಣಾ ಕಾಯರ್ಕ್ರಮವನ್ನ ಆಯೋಜಿಸಲಾಗಿತ್ತು. ಮೊದಲು ಸಾಲಿನಲ್ಲಿ ನಿಂತು ಕಿಟ್​ ಪಡೆಯುತ್ತಿದ್ದರು ತದನಂತರ ವಿತರಣೆಯಲ್ಲಿ ನೂಕಾಟ ಉಂಟಾಗಿ ಗಲಾಟೆ ಆರಂಭವಾಗಿದೆ.

The post ಪುಡ್​ಕಿಟ್​ ಅವಾಂತರ: ವಿತರಣೆ ವೇಳೆ ತಳ್ಳಾಟ, ಕಿತ್ತಾಟ.. ಮುಗಿಬಿದ್ದು ಕಿಟ್ ಹೊತ್ತೊಯ್ದ ಜನ appeared first on News First Kannada.

Source: newsfirstlive.com

Source link