ಪುಣೆಯಲ್ಲಿ ರೈಲು ನಿಲುಗಡೆಗೆ ಮುನ್ನವೇ ಇಳಿಯಲು ಹೋಗಿ ಜಾರಿ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ | Railway Protection Force officer’s quick actions Saves Man Who Slipped While Deboarding Train In Pune


ಚಲಿಸುವ ರೈಲುಗಳನ್ನು ಹತ್ತಬೇಡಿ ಅಥವಾ ಇಳಿಯಬೇಡಿ ಎಂದು ಜನರನ್ನು ಕೇಳುವ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಭಾರತೀಯ ರೈಲ್ವೆ ಆಗಾಗ್ಗೆ ಟ್ವೀಟ್ ಮಾಡುತ್ತದೆ.

ಪುಣೆಯಲ್ಲಿ ರೈಲು ನಿಲುಗಡೆಗೆ ಮುನ್ನವೇ ಇಳಿಯಲು ಹೋಗಿ ಜಾರಿ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ  ಆರ್‌ಪಿಎಫ್ ಸಿಬ್ಬಂದಿ

ರೈಲ್ವೆ ಹಂಚಿಕೊಂಡ ಚಿತ್ರ

ಮಹಾರಾಷ್ಟ್ರದ ಪುಣೆಯ ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಸಂರಕ್ಷಣಾ ಪಡೆ (RPF) ಸಿಬ್ಬಂದಿಯ ತ್ವರಿತ ಕ್ರಮವು ಇತ್ತೀಚೆಗೆ ಚಲಿಸುವ ರೈಲಿನಡಿಗೆ ಸಿಲುಕಿದ ವ್ಯಕ್ತಿಯನ್ನು ರಕ್ಷಿಸಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರೈಲ್ವೆ ಸಚಿವಾಲಯ ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದೆ. ಆರ್‌ಪಿಎಫ್ ಉದ್ಯೋಗಿಯ ಜಾಗರೂಕತೆ ಪ್ರಯಾಣಿಕರ ಜೀವವನ್ನು ಉಳಿಸಿದೆ. ಚಲಿಸುವ ರೈಲನ್ನು ಹತ್ತಲು/ಇಳಿಯಲು ಪ್ರಯತ್ನಿಸಬೇಡಿ ಎಂದು ಎಲ್ಲರಿಗೂ ವಿನಂತಿಸಲಾಗಿದೆ, ಅದು ಮಾರಣಾಂತಿಕವಾಗಬಹುದು” ಎಂದು ಟ್ವೀಟ್​​ನಲ್ಲಿ ಹೇಳಿದೆ. ಪ್ರಯಾಣಿಕನನ್ನು ರೈಲು ಸ್ವಲ್ಪ ಸಮಯದವರೆಗೆ ಎಳೆದುಕೊಂಡು ಹೋಗುವುದು ವಿಡಿಯೊದಲ್ಲಿ ಕಾಣುತ್ತದೆ ಪ್ಲಾಟ್‌ಫಾರ್ಮ್ ಮತ್ತು ಚಲಿಸುವ ರೈಲಿನ ನಡುವಿನ ಅಂತರದ ಬಳಿ ಅಪಾಯಕಾರಿಯಾಗಿ ಎಳೆದೊಯ್ಯುತ್ತಿರುವಾಗ ಅದೃಷ್ಟವಶಾತ್, ಎಚ್ಚೆತ್ತ RPF ಸಿಬ್ಬಂದಿಯ ತ್ವರಿತ ಕ್ರಮಗಳು ವ್ಯಕ್ತಿಯ ಜೀವವನ್ನು ಉಳಿಸಿದವು. ಈ ವಿಡಿಯೊ 23,000 ವೀಕ್ಷಣೆಗಳನ್ನು ಮತ್ತು ನೂರಾರು ಲೈಕ್ ಪಡೆದಿದೆ.

ಚಲಿಸುವ ರೈಲುಗಳನ್ನು ಹತ್ತಬೇಡಿ ಅಥವಾ ಇಳಿಯಬೇಡಿ ಎಂದು ಜನರನ್ನು ಕೇಳುವ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಭಾರತೀಯ ರೈಲ್ವೆ ಆಗಾಗ್ಗೆ ಟ್ವೀಟ್ ಮಾಡುತ್ತದೆ. ಸ್ವಲ್ಪ ಸಮಯದ ಹಿಂದೆ ಸಚಿವಾಲಯವು ಪಶ್ಚಿಮ ಬಂಗಾಳದ ಬಂಕುರಾ ರೈಲು ನಿಲ್ದಾಣದಲ್ಲಿ ವಯಸ್ಸಾದ ಮಹಿಳೆ ಮತ್ತು ಆಕೆಯ ಮಗನ ಜೀವವನ್ನು ಆರ್‌ಪಿಎಫ್ ಅಧಿಕಾರಿಯೊಬ್ಬರು ಉಳಿಸಿದ ಮತ್ತೊಂದು ವೀಡಿಯೊವನ್ನು ಹಂಚಿಕೊಂಡಿದೆ.

ಪ್ರಯಾಣಿಕರು ಚಲಿಸುತ್ತಿರುವ ರೈಲನ್ನು ಹತ್ತಬೇಡಿ ಅಥವಾ ಇಳಿಯದಂತೆ ವಿನಂತಿಸಲಾಗಿದೆ” ಎಂದು ಸಚಿವಾಲಯವು ತ ಘಟನೆಯ ಸಿಸಿಟಿವಿ ದೃಶ್ಯಗಳನ್ನು ಟ್ವೀಟ್ ಮಾಡಿ ಹೇಳಿದೆ

ತಾಜಾ ಸುದ್ದಿ

TV9 Kannada


Leave a Reply

Your email address will not be published.