ನವದೆಹಲಿ: ಕೊರೊನಾ ವಾರಿಯರ್ ಆಗಿರುವ ವೈದ್ಯರೊಬ್ಬರು ಕೋವಿಡ್‍ಗೆ ಬಲಿಯಾಗಿದ್ದು, ಅವರ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬರೋಬ್ಬರಿ 1ಕೋಟಿ ರೂಪಾಯಿ ಹಣವನ್ನು ಪರಿಹಾರವಾಗಿ ಕೊಟ್ಟಿದ್ದಾರೆ.

ಡಾ. ಅನಾಸ್(26) ಮೃತ ವೈದ್ಯರಾಗಿದ್ದಾರೆ. ಇವರು ಕೊರೊನಾ ಸೋಂಕಿನಿಂದ ಇತ್ತೀಚೆಗಷ್ಟೇ ಮೃತಪಟ್ಟಿದ್ದರು. ಇವರ ಕುಟುಂಬಕ್ಕೆ ಅರವಿಂದ ಕೇಜ್ರಿವಾಲ್ ಅವರು ಸಹಾಯವನ್ನು ಮಾಡಿದ್ದಾರೆ.

ಮೃತ ಡಾ. ಅನಾಸ್ ಅವರ ಮನೆಗೆ ಭೇಟಿನೀಡಿ ಅವರ ತಂದೆಗೆ ಸಾಂತ್ವನ ಹೇಳಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 1 ಕೋಟಿ ರೂಪಾಯಿ ಮೌಲ್ಯದ ಚೆಕ್ ಹಸ್ತಾಂತರಿಸಿದ್ದಾರೆ. ನನ್ನ ಪುತ್ರ ಕರ್ತವ್ಯದ ಮೇಲಿದ್ದು, ಜನರ ಸೇವೆ ಮಾಡಿ ಜೀವ ಕಳೆದುಕೊಂಡಿದ್ದಾನೆ. ನನ್ನ ಇತರ ಮಕ್ಕಳು ಅವನಂತೆಯೇ ದೇಶಕ್ಕಾಗಿ ಸೇವೆ ಮಾಡಲಿ ಎಂದು ಬಯಸುತ್ತೇನೆ ಎಂದು ಅನಾಸ್ ಅವರ ತಂದೆ ಹೇಳಿದ್ದಾರೆ.

The post ಪುತ್ರನನ್ನು ಕಳೆದುಕೊಂಡ ತಂದೆ-1 ಕೋಟಿ ಪರಿಹಾರ ಕೊಟ್ಟ ಕೇಜ್ರಿವಾಲ್ appeared first on Public TV.

Source: publictv.in

Source link