ಬೆಂಗಳೂರು: ರಸ್ತೆ ಅಪಘಾತದಲ್ಲಿ ನನ್ನ ಪುತ್ರ ಯತಿರಾಜನಿಗೆ ರಾಯರ ದಯೆ ಹಾಗು ನಿಮ್ಮ ಶುಭಹಾರೈಕೆಯಿಂದ ಸಣ್ಣ ಗಾಯವೂ ಆಗಿಲ್ಲ ಅಂತಾ ನಟ ಜಗ್ಗೇಶ್ ಸ್ಪಷ್ಟಪಡಿಸಿದ್ದಾರೆ.

ನಟ ಜಗ್ಗೇಶ್ ಪುತ್ರ ಯತಿರಾಜ್ ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯೂ ಕಾರ್ ಚಿಕ್ಕಬಳ್ಳಾಪುರದ ಹೊರವಲಯದಲ್ಲಿ ಭೀಕರ ಅಪಘಾತಕ್ಕೊಳಗಾಗಿದೆ. ಈ ಬಗ್ಗೆ ಮಾಹಿತಿ ತಿಳಿದು, ಟ್ವೀಟ್​ ಮಾಡಿರುವ ಜಗ್ಗೇಶ್.. ಕೊರೊನಾ ಬಂದಾಗಿನಿಂದ ಹೊರ ಹೋಗಿಲ್ಲ, ಹೋಗಿಬರುವೆ ಎಂದು ಅಮ್ಮನಿಗೆ ಹೇಳಿ ಹೊರ ಹೋದ ಮಗ ಯತಿರಾಜ, ಅವನು ಪ್ರತಿಬಾರಿ ಅವನ ಇಷ್ಟದ ರಸ್ತೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಹೋಗಿ ಬರುವಾಗ ಅಡ್ಡ ಬಂದ ನಾಯಿ ರಕ್ಷಿಸಲು ಹೋಗಿ ರಸ್ತೆ ವಿಭಜಕಕ್ಕೆ ಹೊಡೆದು ಕಾರು ಪಕ್ಕದ ರಸ್ತೆಗೆ ಬಿದ್ದಿದೆ! ರಾಯರ ದತೆ ಹಾಗು ನಿಮ್ಮ ಶುಭಹಾರೈಕೆ ಯತಿರಾಜನಿಗೆ ಸಣ್ಣ ಗಾಯವೂ ಇಲ್ಲ ಎಂದು ತಿಳಿಸಿದ್ದಾರೆ.

The post ಪುತ್ರ ಯತಿರಾಜನಿಗೆ ಅಪಘಾತ: ನಾಯಿ ಅಡ್ಡಬಂದು ದುರ್ಘಟನೆ ನಡೆದಿದೆ- ಜಗ್ಗೇಶ್ ಹೇಳಿದ್ದೇನು..? appeared first on News First Kannada.

Source: newsfirstlive.com

Source link