ಪುದುಚೆರಿ: ಬರೋಬ್ಬರಿ 41 ವರ್ಷಗಳಿಂದಲೂ ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಒಬ್ಬರೇ ಒಬ್ಬರು ಮಹಿಳೆಯೂ ಸಹ ಮಂತ್ರಿ ಸ್ಥಾನಕ್ಕೇರಲು ಸಾಧ್ಯವಾಗಿರಲಿಲ್ಲ. ಅಂಥದ್ದೊಂದು ಅಘೋಷಿತ ನಿಯಮವನ್ನ ಮುರಿದು ಇಂದು ಚಂದಿರಾ ಪ್ರಿಯಾಂಗ್ ಹೆಸರಿನ ಮಹಿಳೆ ಇಂದು ಪುದುಚೆರಿಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಒಟ್ಟು ಐವರು ಶಾಸಕರು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು ಈ ಪೈಕಿ ಚಂದಿರಾ ಪ್ರಿಯಾಂಗ್ ಕೂಡ ಒಬ್ಬರು.

ಯಾರಿದು ಚಂದಿರಾ ಪ್ರಿಯಾಂಗ್..?

ಚಂದಿರಾ ಪ್ರಿಯಾಂಗ್ ಪುದುಚೆರಿಯ ಎಐಎನ್​ಆರ್​ಸಿ ಪಕ್ಷದ ಮೀಸಲಾತಿ ಅಭ್ಯರ್ಥಿಯಾಗಿ ನೆಡುಂಗಡು ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿದು ಶಾಸಕಿಯಾಗಿ ಚುನಾಯಿತರಾಗಿ ಇದೀಗ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಚಂದಿರಾ ಪ್ರಿಯಾಂಗ್ ಅವರ ತಂದೆ ಎಂ ಚಂದಿರಕಸು 2011 ರಲ್ಲಿ ಸಿಎಂ ರಂಗಾಸಾಮಿ ಆಡಳಿತದಲ್ಲಿ ಮಂತ್ರಿಯಾಗಿದ್ದವರು.

ಇನ್ನು ಇಂದು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಚಂದಿರಾ ಪ್ರಿಯಾಂಗ್.. ನನ್ನ ಗುರಿ ಯುವಕರನ್ನ ವಿದ್ಯಾವಂತರನ್ನಾಗಿಸಿ ಉದ್ಯೋಗಿಗಳನ್ನಾಗಿ ಮಾಡುವುದು. ಇದರಲ್ಲಿ ಹೆಣ್ಣು ಗಂಡೆಂಬ ಭೇದವಿರುವುದಿಲ್ಲ. ನಾನಿದನ್ನು ಸಾಧಿಸಿ ತೋರಿಸ್ತೇನೆ ಎಂದಿದ್ದಾರೆ.

The post ಪುದುಚೆರಿಯಲ್ಲಿ 40 ವರ್ಷಗಳಲ್ಲೇ ಮೊದಲ ಬಾರಿಗೆ ಮಹಿಳೆಗೆ ಮಂತ್ರಿ ಸ್ಥಾನ.. ಯಾರಿದು..? appeared first on News First Kannada.

Source: newsfirstlive.com

Source link