ಪುನೀತ್​ಗೆ ಕರ್ನಾಟಕ ರತ್ನ ನೀಡುವುದು ಸಂತಸ, ಆದರೆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿಲ್ಲ, ಹಾಗಾಗಿ ಹೋಗುತ್ತಿಲ್ಲ- ಸಿದ್ದರಾಮಯ್ಯ – I’m not invited to Karnataka Ratna Award function so am not attending says Siddaramaiah


Karnataka Ratna: ಶಿಷ್ಟಾಚಾರದಂತೆ ವಿರೋಧ ಪಕ್ಷದ ನಾಯಕರನ್ನ ಆಹ್ವಾನಿಸಬೇಕಿತ್ತು. ಅವರು ಬಂದು ಕರೆದಿದ್ದರೆ ಕಾರ್ಯಕ್ರಮಕ್ಕೆ ಹೋಗೋಣ ಅಂತಿದ್ದೆ. ನನ್ನನ್ನು ಆಹ್ವಾನಿಸದಿರುವುದರಿಂದ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ ಎಂದು ಬೆಂಗಳೂರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಪುನೀತ್​ಗೆ ಕರ್ನಾಟಕ ರತ್ನ ನೀಡುವುದು ಸಂತಸ, ಆದರೆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿಲ್ಲ, ಹಾಗಾಗಿ ಹೋಗುತ್ತಿಲ್ಲ- ಸಿದ್ದರಾಮಯ್ಯ

ಸಿದ್ದರಾಮಯ್ಯ

ಬೆಂಗಳೂರು: ನಟ ಪುನೀತ್ ರಾಜ್​ಕುಮಾರ್​​ ​ಗೆ (Puneeth Rajkumar) ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ನೀಡುತ್ತಿರುವುದು ಸಂತಸವಾಗಿದೆ. ಆದರೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿಲ್ಲ. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿದ್ದಾರೆ. ಶಿಷ್ಟಾಚಾರದಂತೆ ವಿರೋಧ ಪಕ್ಷದ ನಾಯಕರನ್ನ ಆಹ್ವಾನಿಸಬೇಕಿತ್ತು. ಅವರು ಬಂದು ಕರೆದಿದ್ದರೆ ಕಾರ್ಯಕ್ರಮಕ್ಕೆ ಹೋಗೋಣ ಅಂತಿದ್ದೆ. ನನ್ನನ್ನು ಆಹ್ವಾನಿಸದಿರುವುದರಿಂದ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ ಎಂದು ಬೆಂಗಳೂರಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಗೊಂಡ ಕುರುಬರನ್ನು ಎಸ್ಟಿಗೆ ಸೇರಿಸಿ ಮಿಸ್ಟರ್​ ಬೊಮ್ಮಾಯಿ: ಸಿದ್ದರಾಮಯ್ಯ ಟಾಂಗ್

ಇನ್ನು, ಕಾಂಗ್ರೆಸ್​ನಿಂದ ಹಿಂದುಳಿದ ಸಮುದಾಯಕ್ಕೆ ಮೋಸ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ನನ್ನ ಅವಧಿಯಲ್ಲಿ ಹೆಚ್​.ಎಂ. ರೇವಣ್ಣ, ಎಂಟಿಬಿ ಮಂತ್ರಿ ಆಗಿರಲಿಲ್ವಾ? ಸಂತೋಷ್​​ ಲಾಡ್, ಉಮಾಶ್ರೀ, ಮಧ್ವರಾಜ್ ಯಾವ ಜಾತಿ? ಸೊರಕೆ, ಬಾಬುರಾವ್ ಚಿಂಚನಸೂರು, ಪುಟ್ಟರಂಗಶೆಟ್ಟಿ ಯಾವ ಜಾತಿ? ಮುಖ್ಯಮಂತ್ರಿ ಆಗಿದ್ದು ಯಾರು ಕುರುಬ ಅಲ್ವಾ? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಹಿಂದುಳಿದ ಜಾತಿಯವರು ಮುಖ್ಯಮಂತ್ರಿ ಆಗಿದ್ದರೆ ಕಾಂಗ್ರೆಸ್​ನಲ್ಲಿ ಮಾತ್ರ. ಗೊಂಡ ಕುರುಬರನ್ನು STಗೆ ಸೇರಿಸುವಂತೆ ಶಿಫಾರಸು ಮಾಡಿಲ್ವಾ? ಅಷ್ಟಿದ್ರೆ ನೀನು ರಾಜೀನಾಮೆ ಕೊಟ್ಟು ಈಶ್ವರಪ್ಪ ನ ಸಿಎಂ ಮಾಡು ಹಾಗಾದ್ರೆ? ಯಾದಗಿರಿ, ಕೊಡಗು, ಬೀದರ್, ಗುಲಬರ್ಗ ಎಲ್ಲ ಕಡೆ ಇರುವ ಗೊಂಡ ಕುರುಬರನ್ನು ಎಸ್ಟಿಗೆ ಸೇರಿಸಿ ಅಂತ ನಾನು ಶಿಫಾರಸು ಮಾಡಿಲ್ವಾ? ಇವರನ್ನೆಲ್ಲ ನೀವು ಎಸ್ಟಿ ಮಾಡ್ರಿ ಬೊಮ್ಮಾಯಿ. ಬಸವರಾಜ ಬೊಮ್ಮಾಯಿ ನಿಮಗೆ ಸಾಮಾಜಿಕ ನ್ಯಾಯದ ಬಗ್ಗೆ ಬಹಳ ಪ್ರೀತಿ ಇದ್ರೆ ಗೋಂಡ ಕುರುಬರನ್ನು ಎಸ್ಟಿ ಗೆ ಸೇರಿಸ್ರಿ. ಬೆಸ್ತ ಜಾತಿಗೆ, ಕಾಡುಗೊಲ್ಲರಿಗೆ ಎಸ್.ಟಿಗೆ ಸೇರಿಸಿ ಅಂತ ಶಿಫಾರಸು ಮಾಡಿದ್ದೀನಿ, ಮಾಡಿಸಿರಿ ನೋಡೋಣ ಎಂದು ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ವಿಷಯವಾಗಿ ಸಿಎಂ ಬೊಮ್ಮಾಯಿ ಜೊತೆಗೆ ಈ ಬಗ್ಗೆ ಚರ್ಚೆಗೆ ನಾನು ಸಿದ್ದ. ಯಾವುದೇ ವೇದಿಕೆಗೆ ಸಿಎಂ ಚರ್ಚೆಗೆ ಬರಲಿ. ಹಾನಗಲ್ ನಲ್ಲೇ ನಾನು ಆಹ್ವಾನ ಕೊಟ್ಡಿದ್ದೆ… ಬರಲಿ ಚರ್ಚೆಗೆ ಅಂತಾ. ಇವತ್ತಿನ ತನಕ ಚರ್ಚೆಗೆ ಬಂದಿಲ್ಲ. ಸುಳ್ಳು ಹೇಳಬಾರದು. ಕರ್ನಾಟಕ ರತ್ನ ಕೊಡ್ತಿದ್ದಾರೆ ಒಳ್ಳೆ ಕೆಲಸ, ಸ್ವಾಗತ ಮಾಡ್ತೀನಿ. ಆದರೆ ಹಿಂದುಳಿದ ವರ್ಗದ ವಿಚಾರದಲ್ಲಿ ಸುಳ್ಳು ಯಾಕೆ ಹೇಳ್ತೀರಿ?

ಮೀಸಲಾತಿಗೆ ವಿರುದ್ದವಾಗಿರೋದು ಬಿಜೆಪಿ

ನಾಲ್ಕು ತಿಂಗಳಲ್ಲಿ ಇಲೆಕ್ಷನ್ ಇದೆಯಲ್ಲ ಅದಕ್ಕಾಗಿ ಇದೆಲ್ಲಾ ಮಾಡಿರುವುದು. ಪೇಪರ್ ಪ್ರೊಜೆಕ್ಟ್ ಇದು ಅಷ್ಟೇ. ಹಿಂದುಳಿದ ವರ್ಗಕ್ಕೆ ಬಿಜೆಪಿ ಕಾಲದಲ್ಲಿ ಆದಷ್ಟು ಅನ್ಯಾಯ ಯಾವತ್ತೂ ಆಗಿಲ್ಲ. ಹಿಂದುಳಿದ ಜಾತಿಗೆ ವಿರುದ್ದವಾಗಿರೋದು ಬಿಜೆಪಿ. ಮೀಸಲಾತಿಗೆ ವಿರುದ್ದವಾಗಿರೋದು ಬಿಜೆಪಿ. ಇದು ಸುಬ್ಬರಾಯನಕೆರೆ ರಾಜಕೀಯ ಭಾಷಣ ಅಲ್ಲ, ಅಂಕಿ ಅಂಶಗಳ ಮೂಲಕ ಸತ್ಯ ಹೇಳಿದ್ದೀನಿ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

33 % ಮೀಸಲಾತಿ ಹಿಂದುಳಿದ ವರ್ಗಕ್ಕೆ ನೀಡಿದ್ದು ಕಾಂಗ್ರೆಸ್. ಇದನ್ನು ವಿರೋಧ ಮಾಡಿದ್ದು ಬಿಜೆಪಿಯ ಮಿಸ್ಟರ್ ರಾಮಾ ಜೋಯಿಸ್. ಇದನ್ನು ಯಡಿಯೂರಪ್ಪ, ಈಶ್ವರಪ್ಪ, ನಳೀನ್ ಕಟೀಲ್ ತಡೆದರಾ? ಇಲ್ಲ. ಪಕ್ಷದ ನಿರ್ದೇಶನ‌ ಇಲ್ಲದೆಯೇ ರಾಮಾ ಜೋಯಿಸ್ ಹೀಗೆ ಮಾಡುವುದಕ್ಕೆ ಸಾಧ್ಯವಾ? ಎಂದು ಸಿದ್ದರಾಮಯ್ಯ ಹೇಳಿದರು. ಇನ್ನು, ಹಿಂದುಳಿದ ಜಾತಿಯವರಿಗೆ ನೀವು ಯಾವಾಗಾ ಸಾಮಾಜಿಕ ನ್ಯಾಯ ಕೊಡಿಸಿದ್ದು ಹೇಳಿ? ಮಂಡಲ ಕಮಿಷನ್ ಬಂದಾಗ ವಿರೋಧ ಮಾಡಿದ್ದು ಯಾರು? ಅಡ್ವಾಣಿ ಅವರಲ್ಲವಾ. ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಬಾರದು ಅಂತ ಇದೇ ಅನಂತ್ ಕುಮಾರ್, ಯಡಿಯೂರಪ್ಪ ವಿರೋಧ ಮಾಡಿದ್ರು?

ಹಿಂದುಳಿದ ವರ್ಗಕ್ಕೆ ಯಾವ ಕ್ರಾಂತಿಕಾರ ನಿರ್ಧಾರವನ್ನೂ ಬಿಜೆಪಿ ಮಾಡಿಲ್ಲ

ಈಗಲೂ ಅಷ್ಟೇ… ಹಿಂದುಳಿದ ವರ್ಗಕ್ಕೆ ಯಾವ ಕ್ರಾಂತಿಕಾರ ನಿರ್ಧಾರವನ್ನೂ ಬಿಜೆಪಿ ಮಾಡಿಲ್ಲ. ಹಿಂದುಳಿದ ವರ್ಗಕ್ಕೆ ಮೂಗಿಗೆ ತುಪ್ಪ ಸವರುವುದು ಬೇಡ. ಹಿಂದುಳಿದ ವರ್ಗದ ಹಾಸ್ಟೆಲ್ ಮಕ್ಕಳಿಗೆ ಸೋಪ್ ಕಿಟ್ ನಿಲ್ಸಿದ್ದೀರಿ? ಮಕ್ಕಳಿಗೆ ಬ್ಲಾಂಕೆಟ್, ಬೆಡ್ ಶೀಡ್ ಕೊಡಲೇ ಇಲ್ಲ. ನೆಲದ ಮೇಲೆ ಮಕ್ಕಳು ಮಲಗುವಂತೆ ಮಾಡಿದಿರಿ. ಎರಡು ವರ್ಷದಿಂದ ಹಿಂದುಳಿದ ಜಾತಿಯವರಿಗೆ ಸ್ಕಾಲರ್ಶಿಪ್ ಕೊಟ್ಟಿಲ್ಲ. ಹಿಂದುಳಿದ ಜಾತಿಯವರು ಮಕ್ಕಳಲ್ವಾ? ಯಾಕೆ ಎಲ್ಲ ನಿಲ್ಲಿಸಿದ್ದೀರಿ? ದೇವರಾಜ ಅರಸು ಅಭಿವೃದ್ಧಿ ನಿಗಮ ಹಿಂದುಳಿದ ಜಾತಿ ಯವರಿಗರ ಸಹಾಯ ಮಾಡುವುದಕ್ಕೆ ಇರುವುದು. ನಾನು 374 ಕೋಟಿ ರೂ ಅನುದಾನ ನೀಡಿದ್ದೆ. ನೀವು ಬರೀ 200 ಕೋಟಿ ಕೊಟ್ಡಿದ್ದೀರಿ. ಯಾಕೆ ಮಿಸ್ಟರ್ ಬಸವರಾಜ ಬೊಮ್ಮಾಯಿ? ಯಾಕೆ ಕಡಿಮೆ ಮಾಡಿದಿರಿ? ಎಂದು ಸಿದ್ದರಾಮಯ್ಯ ನೇರವಾಗಿ ಪ್ರಶ್ನಿಸಿದರು.

ಹಿಂದುಳಿದ ವರ್ಗದ ಬಗ್ಗೆ ಈಗ ಮೊಸಳೆ ಕಣ್ಣೀರು ಸುರಿಸ್ತೀಯಾ? ಮೊರಾರ್ಜಿ ಶಾಲೆಗಳನ್ನು ಪ್ರತಿ ಹೋಬಳಿಗೊಂದು ಮಾಡ್ತೀವಿ ಅಂತ ನಾನು ಘೋಷಣೆ ಮಾಡಿದ್ದೆ. ಅದನ್ನು ಮಾಡಿದೆ. ನೀವೇನು ಮಾಡಿದಿರಿ? ನಿಮ್ಮ ಕೊಡುಗೆ ಏನು? ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ ವೆಲ್ ಎಷ್ಟು ಹೊಡೆಸಿದ್ದೀರಿ? 80 ಸಾವಿರ ಎಕರೆಗೆ ನಾವು ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ ವೆಲ್ ತೋಡಿಸಿದ್ವಿ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published.