ಎಂ.ಪಿ. ರೇಣುಕಾಚಾರ್ಯ (ಸಂಗ್ರಹ ಚಿತ್ರ)
ಬೆಂಗಳೂರು: ಕರ್ನಾಟಕದ ಜನರಿಂದ ದೀಪಾವಳಿ ಆಚರಣೆ ಬದಲು ಪುನೀತ್ ರಾಜ್ಕುಮಾರ್ ಸಮಾಧಿ ದರ್ಶನ ಮಾಡಲಾಗಿದೆ. ಜನರು ಈಗಲೂ ಸಾಗರೋಪಾದಿಯಲ್ಲಿ ಬಂದು ಪುನೀತ್ ಸಮಾಧಿ ದರ್ಶನ ಪಡೆಯುತ್ತಿದ್ದಾರೆ ಎಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ನಟ ಪುನೀತ್ ಮನೆ ಬಳಿ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಇಂದು (ನವೆಂಬರ್ 7) ಹೇಳಿಕೆ ನೀಡಿದ್ದಾರೆ.
ಪುನೀತ್ ರಾಜ್ಕುಮಾರ್ ಪ್ರಚಾರವಿಲ್ಲದೆ ಸೇವೆ ಮಾಡಿದ್ದಾರೆ. ನಾನು ಶಕ್ತಿಧಾಮಕ್ಕೆ ನೆರವು ನೀಡುವ ಬಗ್ಗೆ ಅಶ್ವಿನಿ ಜತೆ ಮಾತಾಡಿದ್ದೇನೆ. ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ನುಡಿನಮನ ಆಯೋಜಿಸಿರುವೆ. ಗಾಯಕ ರಾಜೇಶ್ ಕೃಷ್ಣನ್ರಿಂದ ನುಡಿನಮನ ಕಾರ್ಯಕ್ರಮ ನಡೆಯಲಿದೆ. 10 ಸಾವಿರ ಜನರು ಸೇರಿ ಪುನೀತ್ಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ನೇತ್ರದಾನ ಬಗ್ಗೆ ನಮ್ಮ ಕುಟುಂಬಸ್ಥರು ಅಭಿಯಾನ ಮಾಡುತ್ತೇವೆ. ಪುನೀತ್ಗೆ ಪದ್ಮಶ್ರೀ, ಡಾ. ರಾಜ್ಕುಮಾರ್ಗೆ ಭಾರತ ರತ್ನ ಗೌರವ ನೀಡಬೇಕು. ಈ ಬಗ್ಗೆ ಪ್ರಧಾನಿಗೆ ಪತ್ರ ಬರೆಯುವೆ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಪುನೀತ್ ಸಮಾಧಿ ಬಳಿ ಬಂದು ಹಾಡು ಹೇಳಿದ ಮಕ್ಕಳು; ಪುಟ್ಟ ಹೃದಯಗಳಿಗೆ ಅಪ್ಪು ಎಂದರೆ ಪಂಚಪ್ರಾಣ