ಪುನೀತ್​​ ಇಲ್ಲದೇ ಕಳೆಯಿತು ಒಂದು ತಿಂಗಳು; ಕಂಠೀರವ ಸ್ಟುಡಿಯೋದಲ್ಲಿ ಇಂದಿನ ಕಾರ್ಯಗಳೇನು? | Puneeth Rajkumar family members to offer special pooja to Appu Samadhi at Kanteerava Studio


ಪುನೀತ್​​ ಇಲ್ಲದೇ ಕಳೆಯಿತು ಒಂದು ತಿಂಗಳು; ಕಂಠೀರವ ಸ್ಟುಡಿಯೋದಲ್ಲಿ ಇಂದಿನ ಕಾರ್ಯಗಳೇನು?

ಪುನೀತ್​ ರಾಜ್​ಕುಮಾರ್

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಇಲ್ಲವಾಗಿ ಇಂದಿಗೆ (ನ.29) ಒಂದು ತಿಂಗಳು ಕಳೆದಿದೆ. ಅ.29ರಂದು ಅಪ್ಪು ಹೃದಯಾಘಾತಕ್ಕೆ ಒಳಗಾದ ಕರಾಳ ಸುದ್ದಿ ಕೇಳಿಬಂದಿತ್ತು. ಅವರು ಇಹಲೋಕ ತ್ಯಜಿಸಿದರು ಎಂಬ ಕಹಿ ಸುದ್ದಿ ಬಂದು ಕಿವಿಗೆ ಎರಗಿದಾಗ ಅದನ್ನು ಯಾರಿಂದಲೂ ನಂಬಲು ಸಾಧ್ಯವಾಗಿರಲಿಲ್ಲ. ಅಭಿಮಾನಿಗಳು ಮತ್ತು ಕುಟುಂಬದವರು ಈಗ ನೋವಿನ ಜೊತೆಯಲ್ಲೇ ಜೀವನ ಮುಂದುವರಿಸುವುದು ಅನಿವಾರ್ಯ ಆಗಿದೆ. ಅಪ್ಪು ಇನ್ನಿಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡು, ಮುಂದಿನ ಕಾರ್ಯಗಳನ್ನು ಮಾಡಲಾಗುತ್ತಿದೆ. ಪುನೀತ್​ ನೋಡಿಕೊಳ್ಳುತ್ತಿದ್ದ ‘ಪಿಆರ್​ಕೆ ಪ್ರೊಡಕ್ಷನ್ಸ್​’, ‘ಪಿಆರ್​ಕೆ ಆಡಿಯೋ’, ‘ಶಕ್ತಿಧಾಮ’ ಮುಂತಾದ ಸಂಸ್ಥೆಗಳ ಜವಾಬ್ದಾರಿಯನ್ನು ಅವರ ಕುಟುಂಬ ನಿಭಾಯಿಸುತ್ತಿದೆ. ಅಪ್ಪು ಅಗಲಿ ಇಂದಿಗೆ ಒಂದು ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಕುಟುಂಬದವರು ಕಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.

ಪ್ರತಿದಿನ ಪುನೀತ್​ ಸಮಾಧಿ ದರ್ಶನಕ್ಕೆ ಸಾವಿರಾರ ಜನರು ಆಗಮಿಸುತ್ತಲೇ ಇದ್ದಾರೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಪುನೀತ್​ ಕುಟುಂಬದವರು ಪೂಜೆ ಮಾಡಲಿದ್ದಾರೆ. ಅದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ಮಾಡಲಾಗುತ್ತಿದೆ. 9 ಗಂಟೆ ಬಳಿಕ ಗೇಟ್​ ತೆರೆಯಲಿದೆ. ಪುನೀತ್​ ನಿಧನರಾಗಿ ಒಂದು ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಒಂದು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬರುವ ನಿರೀಕ್ಷೆ ಇದೆ. ಅಪ್ಪು ಸ್ಮರಣಾರ್ಥ ಅನೇಕ ಕಡೆಗಳಲ್ಲಿ ಅಭಿಮಾನಿಗಳು ಹಲವು ಸಮಾಜಮುಖಿ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ.

ಶೀಘ್ರವೇ ರಿಲೀಸ್​ ಆಗಲಿದೆ ‘ಲಕ್ಕಿ ಮ್ಯಾನ್​’ ಸಿನಿಮಾ:

ಹೃದಯಾಘಾತದಿಂದ ಮೃತರಾಗುವುದಕ್ಕೂ ಮುನ್ನ ಪುನೀತ್​ ರಾಜ್​ಕುಮಾರ್​ ಅವರು ಅನೇಕ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರು. ಆದರೆ ಆ ಚಿತ್ರಗಳು ತೆರೆ ಕಾಣುವುದಕ್ಕೂ ಮೊದಲೇ ಅಪ್ಪು ಇಹಲೋಕ ತ್ಯಜಿಸಿದ್ದು ವಿಪರ್ಯಾಸ. ಪುನೀತ್​ ನಟಿಸುತ್ತಿದ್ದ ಒಂದೆರಡು ಚಿತ್ರದ ಕೆಲಸಗಳು ಪೂರ್ಣಗೊಂಡಿವೆ ಎಂಬುದು ಸಮಾಧಾನಕರ ಸಂಗತಿ. ಆ ಪೈಕಿ ‘ಜೇಮ್ಸ್​’ ಸಿನಿಮಾ ರಿಲೀಸ್​ ಆಗುವುದು ಖಚಿತ ಎಂಬುದು ಈಗಾಗಲೇ ಗೊತ್ತಾಗಿದೆ. ಅಷ್ಟೇ ಅಲ್ಲದೇ, ಅಪ್ಪು ಜತೆ ಪ್ರಭುದೇವ ಮತ್ತು ಡಾರ್ಲಿಂಗ್​ ಕೃಷ್ಣ  ನಟಿಸಿರುವ ‘ಲಕ್ಕಿ ಮ್ಯಾನ್​’ ಶೂಟಿಂಗ್​ ಕೂಡ ಪೂರ್ಣಗೊಂಡಿದೆ. ಆ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಬಗ್ಗೆ ಚಿತ್ರತಂಡದಿಂದ ಕೆಲವೇ ದಿನಗಳ ಹಿಂದೆ ಮಾಹಿತಿ ಹೊರಬಿದ್ದಿತ್ತು. ಡಿಸೆಂಬರ್​ ಅಥವಾ ಜನವರಿಯಲ್ಲಿ ‘ಲಕ್ಕಿ ಮ್ಯಾನ್​’ ಬಿಡುಗಡೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ. ಅದಕ್ಕೆ ಅನುಗುಣವಾಗಿ ಈಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ.

ಇದನ್ನೂ ಓದಿ:

ದೇವರಿಗೆ ಮುಡಿ ಕೊಟ್ಟು, ಪುನೀತ್​ಗಾಗಿ ಹಾಡು ಹೇಳಿದ ನಟಿ ವಿಜಯಲಕ್ಷ್ಮೀ; ಇಲ್ಲಿದೆ ವಿಡಿಯೋ

ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ಡಾ. ರಾಜ್​-ಪುನೀತ್​ ಜೀವನ ಚರಿತ್ರೆ; ಇಲ್ಲಿದೆ ಅಭಿಮಾನಿಗಳಿಗೆ ಸಿಹಿ ಸುದ್ದಿ

TV9 Kannada


Leave a Reply

Your email address will not be published. Required fields are marked *