ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆ ಇನ್ನೂ ಮಾಸಿಲ್ಲ. ಕೇವಲ ಚಿತ್ರರಂಗದ ಗಣ್ಯರು ಮಾತ್ರವಲ್ಲ ಇಡೀ ರಾಜ್ಯಾದ್ಯಂತ ಅಪ್ಪು ನೆನಪಿನಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಇಂದು ಮರೆಯಲಾಗದ ಮಾಣಿಕ್ಯ ಅಪ್ಪು ಅವರ ನೆನಪಿನಲ್ಲಿ ಬೆಂಗಳೂರಿನ ಮೂಡಲ್ ಪಾಳ್ಯದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ವಿಶೇಷವಾದ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರು. ರಾಜರತ್ನನ ನೆಪಿನಲ್ಲಿ ಅನ್ನ ಸಂತಪರ್ಣೆ, ರಕ್ತದಾನ ಶಿಬಿರ, ನೇತ್ರದಾನ ನೊಂದಣಿ ಶಿಬಿರವನ್ನ ಮಾಡಲಾಯ್ತು. ನೂರಾರು ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ರಕ್ತದಾನ ಮಾಡಿದ್ರು ಹಾಗೂ ನೇತ್ರದಾನಕ್ಕೂ ನೋಂದಣಿ ಮಾಡಿಕೊಂಡ್ರು.