‘ಪುನೀತ್​​ ನೆನಪು ಇನ್ನೂ ಕಾಡುತ್ತಲೇ ಇದೆ’- ಅಪ್ಪು ನೆನೆದು ತೆಲುಗು ನಟ ಶ್ರೀಕಾಂತ್​​ ಕಣ್ಣೀರು


ಸ್ಯಾಂಡಲ್​​ವುಡ್​​ ಪವರ್​ ಸ್ಟಾರ್​​ ಪುನೀತ್​​ ರಾಜ್​​ಕುಮಾರ್​​​ ನುಡಿ ನಮನ ಕಾರ್ಯಕ್ರಮಕ್ಕೆ ಹೈದರಾಬಾದ್​​ನಿಂದ ಆಗಮಿಸಿದ್ದ ತೆಲುಗು ನಟ ಶ್ರೀಕಾಂತ್​​ ಮಾತಾಡಿದರು. ಈ ಸಂಬಂಧ ಮಾತಾಡಿದ ನಟ ಶ್ರೀಕಾಂತ್​​​, ನಾನು ಜೇಮ್ಸ್​ನಲ್ಲಿ ಪುನೀತ್​​ ಜತೆ ನಟಿಸಿದ್ದೆ. ಸುಮಾರು 40 ದಿನ ಜೊತೆಯಲ್ಲೇ ಟ್ರಾವೆಲ್​​ ಮಾಡಿದ್ದೆ. ಅದುವೇ ಅವರ ಕೊನೆ ಚಿತ್ರ ಆಗುತ್ತೆ ಎಂದುಕೊಂಡಿರಲಿಲ್ಲ ಎಂದು ಕಂಬನಿ ಮಿಡಿದರು.

ಪುನೀತ್​​ ನೆನಪು ಇನ್ನೂ ಕಾಡುತ್ತಲೇ ಇದೆ. ಅಪ್ಪು ಇಲ್ಲ ಅನ್ನೋದನ್ನ ನಂಬೋಕೆ ಆಗ್ತಾ ಇಲ್ಲ. ಅಪ್ಪುರನ್ನ ಭಗವಂತ ಬೇಗ ಕರೆಸಿಕೊಂಡಿದ್ದಾನೆ. ಭಗವಂತ ಅವರ ಕುಟುಂಬಕ್ಕೆ ಅವರು ಇಲ್ಲದ ನೋವನ್ನ ತಡೆಯುವ ಶಕ್ತಿ ನೀಡಲಿ ಎಂದರು.

News First Live Kannada


Leave a Reply

Your email address will not be published. Required fields are marked *