ಪುನೀತ್​​ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಪ್ರಿಯಾಮಣಿ, ಹಿರಿಯ ನಟಿ ಗೀತಾ


ಬೆಂಗಳೂರು: ಪುನೀತ್ ರಾಜ್​​ಕುಮಾರ್​ ನಮ್ಮನ್ನು ಅಗಲಿ ಇಂದಿಗೆ 9 ದಿನಗಳು ಕಳೆದಿದೆ. ಅಪ್ಪು ಅಕಾಲಿಕವಾಗಿ ನಮ್ಮಿಂದ ದೂರವಾದ ನೋವು ಇನ್ನು ಕಾಡುತ್ತಲೇ ಇದೆ. ಈ ನಡುವೆ ರಾಜ್​​ ಕುಟುಂಬಸ್ಥರಿಗೆ ಸಂತ್ವಾನ ಹೇಳಿ, ಧೈರ್ಯ ತುಂಬುವ ಕಾರ್ಯವನ್ನು ಹಲವು ಹಿರಿಯ ನಟರು, ಕಲಾವಿದರು ಮಾಡುತ್ತಿದ್ದಾರೆ. ಇಂದು ಪಂಚ ಭಾಷಾ ನಟಿ ಪ್ರಿಯಾಮಣಿ ಹಾಗೂ ಡಾ.ರಾಜ್​ ಅವರೊಂದಿಗೆ ನಟಿಸಿದ್ದ ಹಿರಿಯ ನಟಿ ಗೀತಾ ಅವರು ಪುನೀತ್​ ನಿವಾಸಕ್ಕೆ ಭೇಟಿ ನೀಡಿದ್ದರು.

ಪತಿಯೊಂದಿಗೆ ಪುನೀತ್​ ನಿವಾಸಕ್ಕೆ ಆಗಮಿಸಿದ್ದ ಪ್ರಿಯಾಮಣಿ ಅವರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕುಟುಂಬಸ್ಥರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಈ ವೇಳೆ ಹಿರಿಯ ನಟಿ ಗೀತಾ ಅವರು ಕೂಡ ಅವರೊಂದಿಗಿದ್ದರು. ಅಂದಹಾಗೇ ಪ್ರಿಯಾಮಣಿ ಅವರು ಕನ್ನಡ ಚಿತ್ರರಂಗಕ್ಕೆ ಪುನೀತ್​ ರಾಜ್​ಕುಮಾರ್​ ಅವರ ರಾಮ್​ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ್ದರು. ಆ ಬಳಿಕ ಅಣ್ಣಾ ಬಾಂಡ್ ಸಿನಿಮಾದಲ್ಲಿ ಮತ್ತೆ ಎರಡನೇ ಬಾರಿ ನಟನೆ ಮಾಡಿದ್ದರು. ಇನ್ನು ಪ್ರಿಯಾಮಣಿ ಅವರು ಆಗಮಿಸಿದ್ದ ಕಾರಣ ಶಿವಣ್ಣ ಹಾಗೂ ಗೀತಾ ಶಿವರಾಜ್​ಕುಮಾರ್ ಕೂಡ ಅಪ್ಪು ನಿವಾಸಕ್ಕೆ ಆಗಮಿಸಿದ್ದರು. ಆ ಬಳಿಕ ಮನೆಯಿಂದ ಹೊರಟ ಪ್ರಿಯಾಮಣಿ ಅವರು, ಮಾತನಾಡಲು ಮನಸ್ಸಿಲ್ಲ ಎಂದು ಹೇಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಕಣ್ಣಲ್ಲಿ ನೀರು ತುಂಬಿಕೊಂಡು ತೆರಳಿದರು.

News First Live Kannada


Leave a Reply

Your email address will not be published. Required fields are marked *