ಪುನೀತ್​​ ರಾಜಕುಮಾರ್​​ ಪುಣ್ಯಸ್ಮರಣೆ; 2 ಸಾವಿರ ಜನರಿಗೆ ಬಾಡೂಟ ಬಡಿಸಿದ ಗ್ರಾಮಸ್ಥರು


ಕನ್ನಡದ ಪವರ್​​ ಸ್ಟಾರ್​​​ ಪುನೀತ್​​​ ರಾಜಕುಮಾರ್​​ ಇನ್ನಿಲ್ಲ ಎಂಬ ಸತ್ಯ ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗಲೇ ಇವರ ಪುಣ್ಯಸ್ಮರಣೆ ಅಂಗವಾಗಿ ಮಂಡ್ಯದ ಬಸವನಹಳ್ಳಿ ಗ್ರಾಮಸ್ಥರು 2 ಸಾವಿರಕ್ಕೂ ಹೆಚ್ಚು ಮಂದಿಗೆ ಭರ್ಜರಿ ಬಾಡೂಟ ಬಡಿಸಿದ್ದಾರೆ.

ಗ್ರಾಮಸ್ಥರು ಮತ್ತು ಪುನೀತ್ ಅಭಿಮಾನಿಗಳು 2 ಸಾವಿರ ಜನರಿಗೆ ಬಾಡೂಟ ತಯಾರಿ ಬಡಿಸಿದರು. ಅಲ್ಲದೇ ಅಪ್ಪು ಅಭಿಮಾನಿಗಳು ಕೇಶ ಮುಂಡನೆ ಮಾಡಿಸಿಕೊಂಡರು. ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳು ಮತ್ತು ಮಹಿಳೆಯರು ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಇದನ್ನೂ ಓದಿ: ಬಾರದೂರಿಗೆ ಹೋದ ಪುಟಾಣಿಗಳ ಪ್ರಹ್ಲಾದ; ಮತ್ತೆ ಮತ್ತೆ ನೆನೆದು ಬಿಕ್ಕಳಿಸಿ ಅತ್ತ ಕಂದಮ್ಮಗಳು

News First Live Kannada


Leave a Reply

Your email address will not be published. Required fields are marked *