ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನುಡಿ ನಮನ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ನಟಿ ರಾಗಿಣಿ ದ್ವಿವೇದಿ ಮಾಧ್ಯಮಗಳೊಂದಿಗೆ ಮಾತಾಡಿದರು.
ಈ ಸಂಬಂಧ ಮಾತಾಡಿದ ರಾಗಿಣಿ, ಪುನೀತ್ ರಾಜ್ಕುಮಾರ್ ಸಾರ್ ಇನ್ನಿಲ್ಲ ಎಂಬ ಸುದ್ದಿ ನೆನೆಪು ಮಾಡಿಕೊಂಡರೆ ಬಹಳ ಬೇಜಾರಾಗುತ್ತೆ. ಒಬ್ಬ ವ್ಯಕ್ತಿ ಮಾಡಿರುವ ಒಳ್ಳೆ ಕೆಲಸಗಳು ಮತ್ತು ಸಾಧನೆಗಳನ್ನು ನಾವು ನೆನೆಯಲೇಬೇಕಾಗುತ್ತದೆ. ಅಪ್ಪು ಸಾರ್ ಇನ್ನಿಲ್ಲ ಅನ್ನೋದು ಹಾರ್ಟ್ ಬ್ರೇಕಿಂಗ್ ವಿಷಯ, ಈ ಸತ್ಯ ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಯಾವತ್ತೂ ಅವರ ಒಳ್ಳೆ ಕೆಲಸಗಳನ್ನು ನೆನೆಸಿಕೊಳ್ಳಿ ಎಂದು ಫ್ಯಾನ್ಸ್ ಮತ್ತು ಕುಟುಂಬಸ್ಥರಲ್ಲಿ ಕೇಳಿಕೊಳ್ಳುತ್ತೇನೆ ಎಂದರು.