ದಾವಣಗೆರೆ: ಕರ್ನಾಟಕದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ ಇವತ್ತಿಗೆ 12 ದಿನಗಳು ಕಳೆದಿವೆ. ಇವತ್ತಿಗೂ ಅಪ್ಪು ಅಭಿಮಾನಿಗಳು ಕಣ್ಣೀರು ಹಾಕ್ತಿದ್ದಾರೆ. ಅಪ್ಪು ಸಾವು ಸಹಿಸಿಕೊಳ್ಳದ ಕೆಲ ಅಭಿಮಾನಿಗಳು ಆತ್ಮಹತ್ಯೆ ದಾರಿ ಹಿಡಿದರೇ ಕೆಲವರು ಅತಿರೇಕದಿಂದ ವರ್ತಿಸುತ್ತಿದ್ದಾರೆ.
ಹೌದು ಅಪ್ಪು ಸಾವಿನಿಂದ ನೊಂದ ಅಭಿಮಾನಿಯೊಬ್ಬ ಪುನೀತ್ ಅಗಲಿಕೆಯ ನೋವು ತಾಳಲಾರದೆ ಕೈಗೆ ಬರೆ ಹಾಕಿಕೊಂಡ ಘಟನೆ ಜಿಲ್ಲೆಯ ಕೆರೆಯಾಗಳಹಳ್ಳಿಯಲ್ಲಿ ನಡೆದಿದೆ. ಜೀವನ್ ಕುಮಾರ್ ಎಂಬ ಅಭಿಮಾನಿ ಈ ಕೆಲಸ ಮಾಡಿದ್ದಾನೆ. ಈತ ಅಪ್ಪುವಿನ ಕಟ್ಟಾ ಅಭಿಮಾನಿಯಾಗಿದ್ದು ಬೆಂಕಿಯಲ್ಲಿ ಮೊಳೆ ಕಾಯಿಸಿ ಕೈ ಮೇಲೆ ಬರೆ ಮೂಲಕ ಅಪ್ಪು ಅಂತ ಬರೆದುಕೊಂಡಿದ್ದಾನೆ.
ಇದನ್ನೂ ಓದಿ:ಅಪ್ಪು ಅಂದ್ರೆ ಆದರ್ಶ: ಒಂದೇ ಗ್ರಾಮದ 60ಕ್ಕೂ ಹೆಚ್ಚು ಅಭಿಮಾನಿಗಳಿಂದ ನೇತ್ರದಾನಕ್ಕೆ ನಿರ್ಧಾರ
ಇದನ್ನೂ ಓದಿ:ಶಾಸಕ ರೇಣುಕಾಚಾರ್ಯ ಪತ್ನಿ ಮಾದರಿ ಕಾರ್ಯ; ಅವಿಭಕ್ತ ಕುಟುಂಬದ 68 ಜನರಿಂದ ನೇತ್ರದಾನ
ಇನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಪುವಿಗೆ ಶ್ರದ್ಧಾಂಜಲಿ ಸಲ್ಲಸೋ ವಿಡಿಯೋಗಳಿಂದ ಬೇಸತ್ತು ನೋಬೈಲ್ ಬಳಸುವುದನ್ನೇ ಈತ ಬಿಟ್ಟಿದ್ದಾನೆ. ಅಪ್ಪು ಅಗಲಿಕೆಯ ನೋವಿನಿಂದ ಆಚೆ ಬಾರದೆ ಇಂದಿಗೂ ಕಣ್ಣೀರು ಹಾಕುತ್ತಿರುವ ಯುವಕ ಪುನೀತ್ ಭಾವಚಿತ್ರಕ್ಕೆ ಪುಣ್ಯ ಸ್ಮರಣೆ ಕಾರ್ಯ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾನೆ.
ಇದನ್ನೂ ಓದಿ: ನೆಚ್ಚಿನ ನಟನಿಂದ ಸ್ಫೂರ್ತಿ: ಗಜೇಂದ್ರಗಡದ 40ಕ್ಕೂ ಹೆಚ್ಚು ಅಪ್ಪು ಅಭಿಮಾನಿಗಳಿಂದ ನೇತ್ರದಾನಕ್ಕೆ ನಿರ್ಧಾರ