ಪುನೀತ್​-ಅಶ್ವಿನಿ ವಿವಾಹ ವಾರ್ಷಿಕೋತ್ಸವ; ಮದುವೆ ಫೋಟೋ ವೈರಲ್​ | Ashwini and Puneeth Rajkumar Wedding Anniversary Marriage Photo Goes viral In social media

1/6

ಪುನೀತ್​ ರಾಜ್​ಕುಮಾರ್​ ಹಾಗೂ ಅಶ್ವಿನಿ ಅವರದ್ದು ಪ್ರೇಮ ವಿವಾಹ. ಪುನೀತ್​ಗೆ ಪತ್ನಿ ಮೇಲೆ ಅಪಾರ ಪ್ರೀತಿ ಇತ್ತು. ಅಶ್ವಿನಿ ಅವರಿಗೂ ಅಷ್ಟೇ ಪತಿಯನ್ನು ಕಂಡರೆ ಅತಿಯಾದ ಪ್ರೀತಿ. ಆದರೆ, ಈಗ ಪತ್ನಿಯನ್ನು ಬಿಟ್ಟು ಅವರು ಬಾರದ ಲೋಕಕ್ಕೆ ತೆರಳಿದ್ದಾರೆ.

2/6

ಇಡೀ ಕುಟುಂಬಕ್ಕೆ ಈ ದುಃಖವನ್ನು ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಪುನೀತ್​ ಪಕ್ಕಾ ಫ್ಯಾಮಿಲಿ ಮ್ಯಾನ್​. ಸಿನಿಮಾ ಕೆಲಸಗಳ ಮಧ್ಯೆಯೂ ಕುಟುಂಬಕ್ಕೆ ಸಮಯ ನೀಡುತ್ತಿದ್ದರು.

3/6

ಅಶ್ವಿನಿ ಬಗ್ಗೆ ಅವರು ಎಷ್ಟು ಪ್ರೀತಿ ಇಟ್ಟುಕೊಂಡಿದ್ದರು ಎಂಬುದು ಸಾಕಷ್ಟು ಬಾರಿ ಸಾಬೀತಾಗಿತ್ತು. ಇಂದು (ಡಿಸೆಂಬರ್​ 1) ಪುನೀತ್​ ಹಾಗೂ ಅಶ್ವಿನಿ ಅವರ ವಿವಾಹ ವಾರ್ಷಿಕೋತ್ಸವ.

4/6

ಪುನೀತ್​ ರಾಜ್​ಕುಮಾರ್​ ಅವರು 1999 ಡಿಸೆಂಬರ್​ ಒಂದರಂದು ಮದುವೆ ಆದರು. ಚಿಕ್ಕಮಗಳೂರಿನ ಅಶ್ವಿನಿ ರೇವಂತ್​ ಅವರನ್ನು ವರಿಸಿದರು.

5/6

ಗೆಳೆಯರ ಮೂಲಕ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ನಂತರ ಗೆಳೆತನ ಪ್ರೀತಿಗೆ ತಿರುಗಿತ್ತು. ಇಬ್ಬರೂ ಹಿರಿಯರ ಸಮ್ಮುಖದಲ್ಲಿ ಮದುವೆ ಆದರು. ಈ ದಂಪತಿಗೆ ಧೃತಿ ಹಾಗೂ ವಂದಿತಾ ಹೆಸರಿನ ಮಕ್ಕಳಿದ್ದಾರೆ.

6/6

ಈ ವಿಶೇಷ ದಿನವನ್ನು ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ನೆನಪು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ಪುನೀತ್​ ರಾಜ್​ಕುಮಾರ್​ ಅವರು ನಮ್ಮ ಜತೆ ಇರಬೇಕಿತ್ತು ಎಂದು ಪರಿತಪಿಸುತ್ತಿದ್ದಾರೆ.

TV9 Kannada

Leave a Reply

Your email address will not be published. Required fields are marked *