‘ಜೇಮ್ಸ್’ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಲು ಅನೇಕ ಕಾರಣಗಳಿವೆ. ಇದೇ ಮೊದಲ ಬಾರಿಗೆ ಪುನೀತ್ ರಾಜ್ಕುಮಾರ್ ಅವರಿಗೆ ಚೇತನ್ ಕುಮಾರ್ ಆ್ಯಕ್ಷನ್-ಕಟ್ ಹೇಳಿದ ಚಿತ್ರವಿದು. ಪುನೀತ್ ನಿಧನಕ್ಕೂ ಮುನ್ನ ಬಿಡುಗಡೆಯಾಗಿದ್ದ ಪೋಸ್ಟರ್ಗಳಿಂದ ಭಾರಿ ಹೈಟ್ ಸೃಷ್ಟಿ ಆಗಿತ್ತು. ಅದ್ದೂರಿ ಆ್ಯಕ್ಷನ್ ಸಿನಿಮಾಗಳನ್ನು ಕಟ್ಟಿಕೊಡುವಲ್ಲಿ ಚೇತನ್ ಕುಮಾರ್ ಫೇಮಸ್. ಈಗ ಈ ಸಿನಿಮಾದ ಶೂಟಿಂಗ್ ಮುಕ್ತಾಯ ಆಗಿದೆ. ಈ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರ ದೃಶ್ಯಗಳ ಶೂಟಿಂಗ್ ಈ ಮೊದಲೇ ಮುಕ್ತಾಯ ಆಗಿದೆ. ಅವರ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡುವ ಸಾಧ್ಯತೆ ದಟ್ಟವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ದಿನವೇ (ಮಾ.17) ‘ಜೇಮ್ಸ್’ ರಿಲೀಸ್ ಆಗುವ ಸಾಧ್ಯತೆ ಇದೆ. ಆ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಬರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಕೂಡ ನಟಿಸಿದ್ದಾರೆ ಎಂಬುದು ವಿಶೇಷ.
ಪುನೀತ್ ನಟನೆಯ ‘ಜೇಮ್ಸ್’ ಶೂಟಿಂಗ್ ಮುಕ್ತಾಯ; ರಿಲೀಸ್ ಡೇಟ್ ತಿಳಿಯಲು ಕಾದಿರುವ ಅಭಿಮಾನಿಗಳು
