‘ಪುನೀತ್​ ನಮನ’ ಕಾರ್ಯಕ್ರಮದಲ್ಲಿ ಏನೆಲ್ಲ ಇರಲಿದೆ? ಇಲ್ಲಿದೆ ಸುದ್ದಿಗೋಷ್ಠಿ ಮಾಹಿತಿ | Puneeth Namana Program Held By Karnataka Film Chamber


ಪುನೀತ್​ ನಿಧನರಾಗಿ ಎರಡು ವಾರ ಕಳೆದಿದೆ. ಅವರು ಇಲ್ಲದೆ ಕನ್ನಡ ಚಿತ್ರರಂಗ ಮಂಕಾಗಿದೆ. ಪುನೀತ್​ ಅವರನ್ನು ನೆನಪು ಮಾಡಿಕೊಳ್ಳುವ ಕೆಲಸ ಎಲ್ಲ ಕಡೆಗಳಲ್ಲೂ ನಡೆಯುತ್ತಿದೆ. ಗಾಯಕರು ತಮ್ಮ ಹಾಡಿನ ಮೂಲಕ ಪುನೀತ್​ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಪುನೀತ್​ಗೆ ನುಡಿ ನಮನ ಸಲ್ಲಿಸುತ್ತಿದ್ದಾರೆ. ನವೆಂಬರ್​ 16ರಂದು ಕನ್ನಡ ಚಿತ್ರೋದ್ಯಮದ ಪರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ‘ಪುನೀತ್ ನಮನ’ ಕಾರ್ಯಕ್ರಮವನ್ನು ಆಯೋಚಿಸಿದೆ. ಆ ಬಗ್ಗೆ ಇಂದು ಮಾಹಿತಿ ನೀಡಲಾಯಿತು.

ಪುನೀತ್ ರಾಜ್​ಕುಮಾರ್​ಗೆ  ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೊನ್ನಾಳಿ ಪಟ್ಟಣದಲ್ಲಿ ನವೆಂಬರ್ 8 ತಡರಾತ್ರಿವರೆಗೆ ನುಡಿನಮನ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ತಮ್ಮ ಮಧುರ ಸಂಗೀತದ ಮೂಲಕ ಗಾಯಕ ರಾಜೇಶ್ ಕೃಷ್ಣನ್, ಅಪ್ಪುಗೆ ನುಡಿನಮನ ಸಲ್ಲಿಸಿದ್ದರು.

ಇದನ್ನೂ ಓದಿ: ಪುನೀತ್​ ನಿಧನದ ಬಳಿಕ ಜಿಮ್​ಗೆ ತೆರಳಲು ಯುವಕರ ಹಿಂದೇಟು; ಪೋಷಕರಲ್ಲೂ ಆವರಿಸಿದೆ ಭಯ

TV9 Kannada


Leave a Reply

Your email address will not be published. Required fields are marked *