ಪುನೀತ್​ ನಿವಾಸಕ್ಕೆ ಬಂದು ಸಾಂತ್ವನ ಹೇಳಿದ ಜಯಪ್ರದಾ; ಅಪ್ಪು ನೆನೆದು ಕಣ್ಣೀರಿಟ್ಟ ಹಿರಿಯ ನಟಿ | Jayaprada visits Puneeth Rajkumar house to express condolence


ಪುನೀತ್​ ರಾಜ್​ಕುಮಾರ್​ ಅವರ ಅಗಲಿಕೆಗೆ ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯಗಳ ಚಿತ್ರರಂಗದ ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ. ಹೈದರಾಬಾದ್​, ಚೆನ್ನೈನಿಂದ ಅನೇಕ ಕಲಾವಿದರು ಬಂದು ಪುನೀತ್​ ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಇಂದು (ನ.6) ಹಿರಿಯ ನಟಿ ಜಯಪ್ರದಾ ಅವರು ಅಪ್ಪು ನಿವಾಸಕ್ಕೆ ಭೇಟಿ ನೀಡಿದರು. ಶಿವರಾಜ್​ಕುಮಾರ್​ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು ಈ ವೇಳೆ ಪುನೀತ್​ ಅವರನ್ನು ನೆನಪು ಮಾಡಿಕೊಂಡು ಕಣ್ಣೀರು ಸುರಿಸಿದರು.

‘ಅಪ್ಪು ನಮ್ಮ ಜೊತೆ ಇಲ್ಲ ಎಂಬುದನ್ನು ಸಹಿಸಿಕೊಳ್ಳೋಕೆ ತುಂಬ ಕಷ್ಟ ಆಗುತ್ತಿದೆ. ರಾಜ್​ ಕುಟುಂಬ ಅಂದರೆ ನನಗೆ ಬಹಳ ಇಷ್ಟ. ರಾಜ್​ಕುಮಾರ್​, ಪಾರ್ವತಮ್ಮ ಅವರ ಜೊತೆ ನಾನು ಕೂಡ ಕುಟುಂಬದ ಸದಸ್ಯಳಿದ್ದಂತೆ. ಇಷ್ಟು ಚಿಕ್ಕವಯಸ್ಸಿನಲ್ಲಿ ಅಪ್ಪು ನಿಧನರಾಗಿರುವುದು ತೀವ್ರ ನೋವಿನ ಸಂಗತಿ. ಅವನನ್ನು ನಾನು ತುಂಬ ಮಿಸ್​ ಮಾಡಿಕೊಳ್ಳುತ್ತೇನೆ. ಅವನ ನಿಧನದಿಂದ ದೊಡ್ಡ ನಷ್ಟ ಆಗಿದೆ. ಅವನ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ ಜಯಪ್ರದಾ. ಡಾ. ರಾಜ್​ಕುಮಾರ್​ ಜೊತೆ ‘ಕವಿರತ್ನ ಕಾಳಿದಾಸ’, ‘ಸನಾದಿ ಅಪ್ಪಣ್ಣ’, ‘ಹುಲಿಯ ಹಾಲಿನ ಮೇವು’, ‘ಶಬ್ದವೇದಿ’ ಸಿನಿಮಾಗಳಲ್ಲಿ ಯಜಪ್ರದಾ ನಟಿಸಿದ್ದಾರೆ.

ಇದನ್ನೂ ಓದಿ:

Puneeth Rajkumar: ಪುನೀತ್​ ಬಗ್ಗೆ ಅವಹೇಳನಕಾರಿ ಪೋಸ್ಟ್​ ಮಾಡಿದ್ದ ವ್ಯಕ್ತಿ ಅರೆಸ್ಟ್​; ಸೈಬರ್​ ಪೊಲೀಸರ ಬಲೆಗೆ ಬಿದ್ದ ಕಿಡಿಗೇಡಿ

ಪುನೀತ್​ ಅವರ 2 ಕಣ್ಣನ್ನು 4 ಜನರಿಗೆ ಜೋಡಿಸಿದ್ದು ಹೇಗೆ? ವೈದ್ಯರು ತೆರೆದಿಟ್ಟ ಅಚ್ಚರಿ ಮಾಹಿತಿ ಇಲ್ಲಿದೆ

TV9 Kannada


Leave a Reply

Your email address will not be published. Required fields are marked *