ದಾವಣಗೆರೆ: ಅಪ್ಪು ಇಹಲೋಕ ತ್ಯಜಿಸಿ ಒಂದು ತಿಂಗಳಾಗಿದೆ. ಪ್ರೀತಿಯ ಅಪ್ಪುವಿನ ಅಕಾಲಿಕ ಸಾವು ಚಿತ್ರರಂಗಕ್ಕೂ, ಕುಟುಂಬ, ಮಿತ್ರರು, ಅಭಿಮಾನಿಗಳಿಗೆ ಅತೀವ ನೋವು ಕೊಟ್ಟಿದೆ. ಇದೇ ವೇಳೆ ಅಪ್ಪುರ ಜೀವನವನ್ನ ಆದರ್ಶವಾಗಿ ಉಳಿಸಿಕೊಳ್ಳಲು ಅಭಿಮಾನಿಗಳು ಮುಂದಾಗಿದ್ದಾರೆ. ಇದರಂತೆ ಹಲವರು ಅಪ್ಪುವಿನಂತೆ ಅದರ್ಶ ಕಾರ್ಯಗಳನ್ನು ಮಾಡೋ ನಿರ್ಧಾರವನ್ನು ಮಾಡಿದ್ದಾರೆ. ಇದೇ ರೀತಿ ದಾವಣಗೆರೆ ಅಪ್ಪು ಅಭಿಮಾನಿ ಅಪ್ಪು ಅವರ ನೆನಪಿಗಾಗಿ 101 ಉಚಿತ ಬೋರ್ವೇಲ್ ಕೊರೆಸಲು ಮುಂದಾಗಿದ್ದಾರೆ.
ಶಿವ ಕಲ್ಲೆಶ್ವರ ಬೊರವೇಲ್ ಏಜೆನ್ಸಿಯ ಅಪ್ಪು ಅವರಿಗೆ ವಿನೂತನ ರೀತಿ ಗೌರವ ಸಲ್ಲಿಸಲು ಮುಂದಾಗಿದೆ. ದಾವಣಗೆರೆ ನಗರಕ್ಕೆ ಸೀಮಿತವಾಗುವಂತೆ 101 ಬೋರ್ವೇಲ್ಗಳನ್ನು 100 ಅಡಿ ಉಚಿತವಾಗಿ ಕೊರೆಸಲು ಪಣ ತೊಟ್ಟಿದ್ದಾರೆ. ಏಜೆನ್ಸಿ ಮಾಲೀಕ ಕುಬೇರ ಮತ್ತು ಅವರ ಸ್ನೇಹಿತರು ವಿನೂತನ ಕಾರ್ಯಕ್ಕೆ ಮುಂದಾಗಿದ್ದು, ನಗರದ ಅಶೋಕ ರಸ್ತೆಯ ಪಕ್ಕದಲ್ಲೇ ಇರುವ ಏಜೆನ್ಸಿ ಕಚೇರಿಯಲ್ಲಿ ಬೋರ್ವೇಲ್ ಕೊರೆಯಿಸುವವರು ನೋಂದಣಿ ಮಾಡಿಕೊಳ್ಳಬಹುದು. ಇದಕ್ಕೆ ಒಂದು ತಿಂಗಳ ಕಾಲಾವಕಾಶವನ್ನು ನೀಡಿದ್ದಾರೆ.
ಅಂದಹಾಗೇ ಕಳೆದ 3 ವರ್ಷದ ಹಿಂದೆ 3 ಜನ ಸ್ನೇಹಿತರು ಸೇರಿ ಬೋರ್ ವೇಲ್ ಏಜೆನ್ಸಿ ಆರಂಭಿಸಿದ್ದು, ಇತ್ತೀಚಿಗೆ ತಮ್ಮದೆ ಸ್ವಂತ ಬೋರವೇಲ್ ಕೊರೆಯಿಸುವ ವಾಹನ ಖರೀದಿಸಿದ್ದಾರೆ. ಆದ್ದರಿಂದ ಪುನೀತ್ ಅಗಲಿಕೆಯ ನೋವಿನಲ್ಲಿ ಅವರ ನೆನಪಿಗಾಗಿ ಉಚಿತ ಬೋರವೇಲ್ ಕೊರೆಯಿಸಲು ಮುಂದಾಗಿದ್ದಾರೆ.