ಚಿಕ್ಕಮಗಳೂರು: ದಿವಂಗತ ನಟ ಪುನೀತ್ ರಾಜ್ ಕುಮಾರ್ ಬ್ಯಾನರ್ ಹರಿದವನಿಗೆ ಯುವಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದ ಮಾರ್ಕೆಟ್ ರಸ್ತೆಯಲ್ಲಿ ನಡೆದಿದೆ.
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣ ಕರುನಾಡಿಗೆ ನುಂಗಲಾರದ ತುತ್ತಾಗಿದೆ..ಅಪ್ಪು ನಮ್ಮನಗಲಿದ್ರೂ ಕೂಡ ಅವರ ನೆನಪುಗಳು ಕಾಡ್ತಿವೆ. ನಗರದ ಮಾರ್ಕೆಟ್ ರಸ್ತೆಯಲ್ಲಿ ಪುನೀತ್ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಬ್ಯಾನರ್ ಹಾಕಲಾಗಿತ್ತು. ಆದರೆ ಕಿಡಿಗೇಡಿಯೊಬ್ಬ ಅದನ್ನು ಹರೆದಿದ್ದಾನೆ.
ಇದರಿಂದ ರೊಚ್ಚಿಗೆದ್ದ ಯುವಕರು ಬ್ಯಾನರ್ ಹರಿದವನಿಗೆ ಹಿಗ್ಗಮುಗ್ಗಾ ಥಳಿಸಿ ಹರಿದ ಬ್ಯಾನರ್ನ್ನು ಅವನ ಮೇಲೆ ಹೊದಿಸಿದ್ದಾರೆ. ಆ ಬಳಿಕ ಫ್ಲೆಕ್ಸ್ ಹರಿಯುತ್ತಿರುವ ಸಿಸಿಟಿವಿ ಫೂಟೇಜ್ ಸಮೇತ ಆತನನ್ನು ಪೊಲೀಸ್ ಠಾಣೆಗೆ ತಂದೊಪ್ಪಿಸಿದ್ದಾರೆ.
ಇದನ್ನೂ ಓದಿ:ನಾಲೆಯಲ್ಲಿ ಮುಳುಗಿಸಿ ಪತ್ನಿಯನ್ನ ಕೊಲೆಗೈದ ಪತಿ; ವಾರದ ಬಳಿಕ ಅರೆಸ್ಟ್.. ಸಿಕ್ಕಿ ಬಿದ್ದಿದ್ದೇಗೆ?