ಪುನೀತ್​ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ತೆಲುಗು ನಟ ರಾಜೇಂದ್ರ ಪ್ರಸಾದ್ | Telugu Actor Rajendra Prasad visited Puneeth rajkumar Home


ಸ್ಯಾಂಡಲ್​ವುಡ್​ ಖ್ಯಾತ ನಟ ಪುನೀತ್​ ರಾಜ್​ಕುಮಾರ್​ ನಿಧನ ಹೊಂದಿರುವ ವಿಚಾರ ಇಡೀ ದಕ್ಷಿಣ ಭಾರತದ ಚಿತ್ರರಂಗಕ್ಕೆ ಶಾಕ್​ ನೀಡಿದೆ. ಪುನೀತ್ ಕುಟುಂಬಕ್ಕೆ ಸಾಂತ್ವನ ಹೇಳೋಕೆ ಬೇರೆ ಚಿತ್ರರಂಗದ ಅನೇಕ ಸ್ಟಾರ್​ಗಳು ಆಗಮಿಸುತ್ತಿದ್ದಾರೆ. ತೆಲುಗು ನಟ ರಾಜೇಂದ್ರ ಪ್ರಸಾದ್ ಪುನೀತ್ ಮನೆಗೆ ಇಂದು (ಅಕ್ಟೋಬರ್​ 5) ಭೇಟಿ ನೀಡಿದ್ದಾರೆ.

ಬೆಂಗಳೂರಿನ ಸದಾಶಿವನಗರದ ಪುನೀತ್ ಮನೆಗೆ ರಾಜೇಂದ್ರ ಪ್ರಸಾದ್​ ತೆರಳಿದ್ದಾರೆ. ಪುನೀತ್ ಕುಟುಂಬಸ್ಥರಿಗೆ ಅವರು ಸಾಂತ್ವನ ಹೇಳಿದ್ದಾರೆ. ‘ನಾನು ಮತ್ತು ಪುನೀತ್ ರಾಜ್‌ಕುಮಾರ್ ಒಡಹುಟ್ಟಿದವರಂತಿದ್ದೆವು. ಪುನೀತ್ ನಿಧನದ ಸುದ್ದಿ ಕೇಳಿ ನನಗೆ ಶಾಕ್ ಆಗಿತ್ತು. ಪುನೀತ್ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲು ಆಗಲಿಲ್ಲ’ ಎಂದು ಮಾತನಾಡುವ ವೇಳೆ ರಾಜೇಂದ್ರ ಪ್ರಸಾದ್ ಭಾವುಕರಾದರು. ನಟ ಸೂರ್ಯ, ರಾಮ್​ ಚರಣ್​ ಸೇರಿ ಅನೇಕ ಸ್ಟಾರ್​ ನಟರು ಬೆಂಗಳೂರಿಗೆ ಆಗಮಿಸಿ ಪುನೀತ್​ ಕುಟುಂಬವನ್ನು ಭೇಟಿ ಮಾಡಿ ತೆರಳಿದ್ದಾರೆ. ಅಕ್ಟೋಬರ್​ 29ರಂದು ಪುನೀತ್ ನಿಧನ ಹೊಂದಿದ್ದರು.

ಇದನ್ನೂ ಓದಿ: ಪುನೀತ್​ ಸಾವಿನ ಬಗ್ಗೆ ಮೂಡಿದೆ ಅನುಮಾನ; ವೈದ್ಯರ ವಿರುದ್ಧ ದೂರು ದಾಖಲು

ಪುನೀತ್​ ಸಮಾಧಿಗೆ ಪ್ರತಿದಿನ 20 ಸಾವಿರ ಮಂದಿ ಭೇಟಿ; ಕಂಠೀರವ ಸ್ಟುಡಿಯೋದಲ್ಲಿ ಈಗ ಹೇಗಿದೆ ಪರಿಸ್ಥಿತಿ?

TV9 Kannada


Leave a Reply

Your email address will not be published. Required fields are marked *