ಪುನೀತ್​ ರಾಜ್​ಕುಮಾರ್​ ಸಮಾಧಿಗೆ ಪೂಜೆ ಸಲ್ಲಿಸಿ, ಗಳಗಳನೆ ಅತ್ತ ಕಾಲಿವುಡ್​ ನಟ ಸಿದ್ದಾರ್ಥ್​ | Tamil actor Siddharth visits Puneeth Rajkumar samadhi and mourns the demise of Appu


ಪುನೀತ್​ ರಾಜ್​ಕುಮಾರ್​ ಅವರಿಗೆ ಪರಭಾಷೆಯ ಚಿತ್ರರಂಗದಲ್ಲಿ ಹಲವಾರು ಗೆಳೆಯರಿದ್ದರು. ಆ ಪೈಕಿ ಕಾಲಿವುಡ್​ ನಟ ಸಿದ್ದಾರ್ಥ್​ ಕೂಡ ಒಬ್ಬರು. ಪುನೀತ್​ ನಿಧನರಾಗಿ ಇಂದಿಗೆ (ನ.8) 11 ದಿನವಾಗಿದ್ದು, ಕುಟುಂಬದವರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಕಾಲಿವುಡ್​ ನಟ ಸಿದ್ದಾರ್ಥ್​ ಕೂಡ ಅಪ್ಪು ಸಮಾಧಿಗೆ ನಮನ ಸಲ್ಲಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಕಣ್ಣೀರು ಸುರಿಸಿದ್ದಾರೆ.

‘ಇಂದು ಅಪ್ಪು ಇಲ್ಲದೇ 11 ದಿನ ಆಗಿದೆ. ಆದರೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್​ ಇಲ್ಲ ಎಂಬುದನ್ನು ಹೇಗೆ ಹೇಳಬೇಕೋ ತಿಳಿಯುತ್ತಿಲ್ಲ. ಅವರು ಇದ್ದಾರೆ, ಯಾವಾಗಲೂ ಇರುತ್ತಾರೆ ಎನ್ನುತ್ತೇನೆ. ಅವರದ್ದು ಮಹಾನ್​ ವ್ಯಕ್ತಿತ್ವ. ತುಂಬ ಪ್ರತಿಭಾವಂತ. ಪ್ರತಿ ಬಾರಿ ಅವರನ್ನು ಭೇಟಿ ಆದಾಗಲೂ ನಾನು ಲಕ್ಕಿ ಎಂದುಕೊಳ್ಳುತ್ತಿದ್ದೆ. ಅವರು ಎಲ್ಲರ ಕಾಳಜಿ ವಹಿಸುತ್ತಿದ್ದರು. ಎಲ್ಲರನ್ನೂ ಪ್ರೋತ್ಸಾಹಿಸುತ್ತಿದ್ದರು. ಪುನೀತ್ ರೀತಿ ಇನ್ನೋರ್ವ ವ್ಯಕ್ತಿ​ ಇರಲು ಸಾಧ್ಯವಿಲ್ಲ. ಕುಟುಂಬದವರಿಗೆ, ಕೋಟ್ಯಂತರ ಅಭಿಮಾನಿಗಳಿಗೆ ನೋವು ತಡೆದುಕೊಳ್ಳುವ ಶಕ್ತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ. ನಾನು ಕೂಡ ಪುನೀತ್​ ರಾಜ್​ಕುಮಾರ್​ ಫ್ಯಾನ್​’ ಎಂದಿದ್ದಾರೆ ಸಿದ್ದಾರ್ಥ್​.

ಇದನ್ನೂ ಓದಿ:

Puneeth Rajkumar: ಗೃಹ ಸಚಿವರಿಗೆ ಪತ್ರ ಬರೆದ ಪುನೀತ್​ ಪತ್ನಿ ಅಶ್ವಿನಿ; ಇದರಲ್ಲಿ ಉಲ್ಲೇಖವಾದ ಪ್ರಮುಖ ಅಂಶಗಳೇನು?

ಅಪ್ಪು ಪುಣ್ಯ ಸ್ಮರಣೆಗೆ ಹೇಗಿದೆ ಸಮಾಧಿ ಅಲಂಕಾರ? ವಿವಿಧ ಹೂವುಗಳಿಂದ ಪುನೀತ್​ಗೆ ನಮನ

TV9 Kannada


Leave a Reply

Your email address will not be published. Required fields are marked *