ಪುನೀತ್​ ರಾಜ್​ಕುಮಾರ್ ಹೇಳಿದ ವಿಶೇಷ ಸಾಲುಗಳನ್ನು ನೆನಪಿಸಿಕೊಂಡ ಯೂಟ್ಯೂಬ್​ ಸಂಸ್ಥೆ | YouTube Inia Remembers Puneeth Rajkumar Special Quote


ಪುನೀತ್​ ರಾಜ್​ಕುಮಾರ್ ಹೇಳಿದ ವಿಶೇಷ ಸಾಲುಗಳನ್ನು ನೆನಪಿಸಿಕೊಂಡ ಯೂಟ್ಯೂಬ್​ ಸಂಸ್ಥೆ

ಪುನೀತ್​ ರಾಜ್​ಕುಮಾರ್​

ಪುನೀತ್​ ರಾಜ್​ಕುಮಾರ್ (Puneeth Rajkumar)​ ನಮ್ಮನ್ನು ಅಗಲಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಅವರಿಲ್ಲ ಎಂಬ ಸತ್ಯದ ಜತೆ ಸಾಗೋದು ಎಲ್ಲರಿಗೂ ಕಷ್ಟವಾಗುತ್ತದೆ. ಪುನೀತ್​ ಅವರು ಏಕಾಏಕಿ ಮೃತಪಡುತ್ತಾರೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಇದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಲೇ ಇಲ್ಲ. ಈ ಮಧ್ಯೆ ಪುನೀತ್​ ರಾಜ್​ಕುಮಾರ್​ ಅವರನ್ನು ನೆನಪಿಸಿಕೊಳ್ಳುವ ಕೆಲಸ ಎಲ್ಲರಿಂದಲೂ ಆಗುತ್ತಿದೆ. ಪುನೀತ್ ಮಾಡಿದ ಸಾಧನೆ, ಪುನೀತ್​ ಮಾಡಿದ ಸಮಾಜ ಸೇವೆ, ಅಪ್ಪು ಅವರ ಸಿನಿಮಾಗಳು, ಅವರು ಹೇಳಿದ ವಿಶೇಷ ಸಾಲುಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ಈಗ ಯೂಟ್ಯೂಬ್​ ಇಂಡಿಯಾ (YouTube India) ಕೂಡ ಪುನೀತ್​ ಅವರು ಈ ಮೊದಲು ಹೇಳಿದ ಸಾಲುಗಳನ್ನು ನೆನಪಿಸಿಕೊಂಡಿದೆ. ಈ ಬಗ್ಗೆ ಟ್ವೀಟ್​ ಒಂದನ್ನು ಮಾಡಿದೆ.

ಪುನೀತ್ ರಾಜ್​ಕುಮಾರ್​ ಅವರು ‘ಫುಡ್​ ಲವರ್ಸ್​ ಟಿವಿ’ ಯೂಟ್ಯೂಬ್​ ಚಾನೆಲ್​ಗೆ ಸಂದರ್ಶನವೊಂದನ್ನು ನೀಡಿದ್ದರು. ಈ ಸಂದರ್ಶನದಲ್ಲಿ ಅವರು ಒಂದು ವಿಶೇಷ ಸಾಲುಗಳನ್ನು ಹೇಳಿದ್ದರು. ಇದರ ಸ್ಕ್ರೀನ್​ಶಾಟ್​ಅನ್ನು ಯೂಟ್ಯೂಬ್ ​ಹಂಚಿಕೊಂಡಿದೆ. ಇದನ್ನು ಸಾಕಷ್ಟು ಮಂದಿ ರೀಟ್ವೀಟ್​ ಮಾಡಿಕೊಂಡಿದ್ದಾರೆ. ಹಾಗಾದರೆ, ಪುನೀತ್​ ಹೇಳಿದ ಆ ವಿಶೇಷ ಮಾತುಗಳು ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಮುಂದಿನ ಬೇಂಚ್​ನಲ್ಲಿ ಕುಳಿತರೆ ನಿಮಗೆ ಬೋರ್ಡ್​ ಮಾತ್ರ ಕಾಣುತ್ತದೆ. ಆದರೆ, ಬ್ಯಾಕ್​ ಬೇಂಚ್​ನಲ್ಲಿ ಕುಳಿತರೆ ಇಡೀ ಜಗತ್ತೇ ಕಾಣುತ್ತದೆ’ ಎಂದು ಪುನೀತ್​ ಹೇಳಿದ್ದರು. ಇದನ್ನು ಪೋಸ್ಟ್ ಮಾಡಿರುವ ಯೂಟ್ಯೂಬ್​, ‘ಲೆಜೆಂಡ್​ ಒಮ್ಮೆ ಹೀಗೆ’ ಹೇಳಿದ್ದರು ಎಂದು ಬರೆದುಕೊಂಡಿದೆ.

‘ಯುವರತ್ನ’ ಕ್ಕೆ ಸಿಕ್ಕಿತ್ತು ಅದ್ದೂರಿ ಸ್ವಾಗತ 

ಪುನೀತ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಅವರನ್ನು ಆರಾಧಿಸುವ ಸಾಕಷ್ಟು ಮಂದಿ ಇದ್ದಾರೆ. ಅವರ ಸಿನಿಮಾ ರಿಲೀಸ್​ ಆಗುತ್ತಿದೆ ಎಂದರೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದರು. ಅವರ ಕಟೌಟ್​ಗೆ ಮಾಲೆ ಹಾಕಿ, ಹಾಲಿನ ಅಭಿಷೇಕ ಮಾಡುತ್ತಿದ್ದರು. ‘ಯುವರತ್ನ’ ಸಿನಿಮಾವನ್ನು ಕಿರುತೆರೆ ಪ್ರೇಕ್ಷಕರು ಹೀಗೆಯೇ ಸ್ವಾಗತಿಸಿದ್ದಾರೆ.

‘ಯುವರತ್ನ’ ಸಿನಿಮಾ ಪ್ರಸಾರವಾಗುತ್ತಿದ್ದಂತೆ ಅವರ ಅಭಿಮಾನಿಗಳು ಟಿವಿಗೆ ಹಾರ ಹಾಕಿ ಪೂಜೆ ಮಾಡಿದ್ದಾರೆ. ಈ ಮೂಲಕ ಪುನೀತ್​ ಸತ್ತಿಲ್ಲ ಎನ್ನುವ ಭಾವನೆಯನ್ನು ಮನದಲ್ಲಿ ಇಟ್ಟುಕೊಂಡಿದ್ದಾರೆ. ಈ ರೀತಿ ಮಾಡಿರುವುದು ಕೇವಲ ಒಬ್ಬಿಬ್ಬರಲ್ಲ. ಅನೇಕರು ಇದೇ ರೀತಿ ‘ಯುವರತ್ನ’ನನ್ನು​ ಸ್ವಾಗತಿಸಿದ್ದಾರೆ. ಸದ್ಯ, ವಿಡಿಯೋ ವೈರಲ್​ ಆಗುತ್ತಿದೆ. ಇದು ಪುನೀತ್​ ಮೇಲಿನ ಅಭಿಮಾನಕ್ಕೆ ಸಾಕ್ಷಿ ಆಗಿದೆ.

TV9 Kannada


Leave a Reply

Your email address will not be published. Required fields are marked *