ಪುನೀತ್​-ಶಿವಣ್ಣ ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸಬೇಕಿತ್ತು; ಹೊರಬಿತ್ತು ಅಚ್ಚರಿ ವಿಚಾರ | Shivarajkumar And Puneeth Rajkumar wanted to act in Bhajarangi 2


ಪುನೀತ್​ ನಿಧನ ಹೊಂದಿ ಹಲವು ದಿನಗಳು ಕಳೆದಿವೆ. ಆದಾಗ್ಯೂ ಅವರನ್ನು ನೆನಪು ಮಾಡಿಕೊಳ್ಳುವ ಕಾರ್ಯ ಮಾತ್ರ ಇನ್ನೂ ನಿಂತಿಲ್ಲ. ಅಭಿಮಾನಿಗಳ ಕಣ್ಣೀರು ಹಾಗೂ ನೋವು ಕೂಡ ಕಡಿಮೆ ಆಗಿಲ್ಲ. ಈ ಮಧ್ಯೆ ಪುನೀತ್​ ಕುರಿತು ಸಾಕಷ್ಟು ವಿಚಾರಗಳು ಈಗ ಹೊರ ಬರುತ್ತಿವೆ. ಈ ವಿಚಾರ ಕೇಳಿ ಅಭಿಮಾನಿಗಳು ಅಚ್ಚರಿ ಹೊರ ಹಾಕುತ್ತಿದ್ದಾರೆ. ಈಗ ಮತ್ತೊಂದು ವಿಚಾರ ಬಹಿರಂಗವಾಗಿದೆ. ಪುನೀತ್​ ಹಾಗೂ ಶಿವರಾಜ್​ಕುಮಾರ್​ ಒಂದೇ ಸಿನಿಮಾದಲ್ಲಿ ನಟಿಸಬೇಕಿತ್ತಂತೆ. ಈ ವಿಚಾರವನ್ನು ನಿರ್ಮಾಪಕ ಕೆ.ಪಿ. ಶ್ರೀಕಾಂತ್​ ಬಿಚ್ಚಿಟ್ಟಿದ್ದಾರೆ.

‘ಟಗರು’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ನಟಿಸಿದ್ದರು. ‘ಟಗರು 2’ಗೆ ಶ್ರೀಕಾಂತ್​ ಸಿದ್ಧತೆ ಮಾಡಿಕೊಂಡಿದ್ದರು. ಈ ಸಿನಿಮಾದಲ್ಲಿ ಪುನೀತ್​ ಕೂಡ ನಟಿಸಬೇಕಿತ್ತು. ಈ ಕುರಿತಂತೆ ಮಾತುಕತೆ ಕೂಡ ನಡೆದಿತ್ತು ಎನ್ನುವ ವಿಚಾರವನ್ನು ಶ್ರೀಕಾಂತ್​ ಬಿಚ್ಚಿಟ್ಟಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಭಜರಂಗಿ 2’ ಸಿನಿಮಾ ನೋಡಿದ ನಂತರ ಮಹತ್ವದ ಘೋಷಣೆ ಮಾಡಿದ ಶಿವರಾಜ್​ಕುಮಾರ್​

TV9 Kannada


Leave a Reply

Your email address will not be published. Required fields are marked *