ಪುನೀತ್​ ಸಮಾಧಿ ದರ್ಶನ ಪಡೆಯಲು 600 ಕಿ.ಮೀ ಸೈಕಲ್​ ಯಾತ್ರೆ ಆರಂಭಿಸಿದ ಅಭಿಮಾನಿ


ಬಾಗಲಕೋಟೆ: ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಸಮಾಧಿ ದರ್ಶನ ಪಡೆಯಲು ಅಭಿಮಾನಿಯೊಬ್ಬರು ಬರೋಬ್ಬರಿ 600 ಕಿಮೀ ಸೈಕಲ್​ ಯಾತ್ರೆ ಆರಂಭಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬಾದರದಿನ್ನಿ ಗ್ರಾಮದ ಅಪ್ಪು ಅಭಿಮಾನಿ ರಾಘವೇಂದ್ರ ಗಾಣಿಗೇರ ಈ ಯಾತ್ರೆ ಆರಂಭಿಸಿದ್ದಾರೆ. ಬಾದರದಿನ್ನಿ ಗ್ರಾಮದಿಂದ ಬೆಂಗಳೂರಿಗೆ ಬರೋಬ್ಬರಿ 600 ಕಿಮೀ ಅಂತರವಿದ್ದು ಅಪ್ಪು ಮೇಲಿನ ಅಭಿಮಾನಕ್ಕಾಗಿ ಸೈಕಲ್​ ಮೂಲಕವೇ ಹೊರಟಿದ್ದಾರೆ.

ಇಂದು ಬೆಳಗ್ಗೆ ಹುನಗುಂದದಿಂದ ಯಾತ್ರೆ ಆರಂಭಿಸಿದ ಅಭಿಮಾನಿ ಸೈಕಲ್​ನ್ನು ಮಧುವಣಗಿತ್ತಿಯಂತೆ ಶೃಂಗರಿಸಿದ್ದಾರೆ. ಸೈಕಲ್‌ ಹಿಂದೆ ಮುಂದೆ ಅಪ್ಪು ಭಾವಚಿತ್ರ ಇರಿಸಿ ಕನ್ನಡ ಧ್ವಜ ಕಟ್ಟಿಕೊಂಡು ಅಗಲಿದ ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಲು ಪ್ರಯಾಣ ಆರಂಭಿಸಿದ್ದಾರೆ.

ಈ ವೇಳೆ ನ್ಯೂಸ್​ಫಸ್ಟ್​ನ ಜೊತೆ ಮಾತನಾಡಿದ ಅಭಿಮಾನಿ ಅವರು ಮೃತಪಟ್ಟ ದಿನವೇ ‌ಹೋಗಬೇಕೆಂದುಕೊಂಡಿದ್ದೆ ಆದರೆ ಆರೋಗ್ಯ ಸರಿಯಿರಲಿಲ್ಲ. ಅದಕ್ಕೆ ಈಗ ಸೈಕಲ್ ಯಾತ್ರೆ ಹೊರಟಿದ್ದೇನೆ ಎಂದಿದ್ದಾನೆ. ಇನ್ನು ಹುನಗುಂದ,ಇ ಳಕಲ್, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ಬಂದು ಸೇರಲಿದ್ದಾರೆ.

News First Live Kannada


Leave a Reply

Your email address will not be published. Required fields are marked *