ಪುನೀತ್​ ಸಮಾಧಿ ಮುಂದೆ ಮದ್ವೆ ಆಗಲು ಲವ್​ ಬರ್ಡ್ಸ್​ ನಿರ್ಧಾರ.. ದೊಡ್ಮನೆಯಿಂದ ಸಿಕ್ತಂತೆ ಗ್ರೀನ್​ಸಿಗ್ನಲ್


ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿರುವ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಸಮಾಧಿ ಮುಂದೆ ಜೋಡಿಯೊಂದು ಮದುವೆಯಾಗಲು ನಿರ್ಧರಿಸಿದೆ.

ಬಳ್ಳಾರಿಯ ಗುರುರಾಜ್ ಹಾಗೂ ಗಂಗಾ ಜೋಡಿ ಪುನೀತ್ ಸಮಾಧಿ ಮುಂದೆ ಮದುವೆಯಾಗೋಕೆ ನಿರ್ಧರಿಸಿದೆ. ಎರಡು ವರ್ಷದಿಂತ ಪ್ರೀತಿ ಮಾಡುತ್ತಿರೋ ಈ ಜೋಡಿಗಳು ಈಗಾಗಲೇ ಶಿವಣ್ಣ ಹಾಗೂ ರಾಘಣ್ಣರ ಬಳಿ ಅನುಮತಿ ಕೇಳಿದ್ದು, ಶಿವಣ್ಣ ಮದುವೆಯಾಗೋಕೆ ಅನುಮತಿ ಕೊಟ್ಟಿದ್ದಾರೆ ಎನ್ನಲಾಗಿದೆ.

ನಾವಿಬ್ಬರು ಅಪ್ಪು ಅವರ ಅಪ್ಪಟ ಅಭಿಮಾನಿಗಳು. ಅವರ ಅಕಾಲಿಕ ಅಗಲಿಕೆಯಿಂದ ನಮ್ಮ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ಈ ರೀತಿ ಸಮಾಧಿ ಮುಂದೆ ಮದುವೆಯಾದ್ರೆ ಅವರಿಗೆ ಗೌರವ ನೀಡಿದ ಹಾಗೇ ಆಗುತ್ತೆ. ಹೀಗಾಗಿ ಈ ನಿರ್ಧಾರ ಕೈಗೊಂಡಿರೋದಾಗಿ ನವ ಜೋಡಿ ತಿಳಿಸಿದೆ.

ಇದನ್ನೂ ಓದಿ:ಕತ್ತಲಾದ ಮೇಲೆ ಬೆಳಕು ಬರ್ಲೇಬೇಕಲ್ವಾ ಎಂದಿದ್ದ ಅಪ್ಪು ನಮ್ಮನ್ನ ಬಿಟ್ಟು ಹೋದರು: ಕಣ್ಣೀರಿಟ್ಟ ರಮೇಶ್​​ ಅರವಿಂದ್​

The post ಪುನೀತ್​ ಸಮಾಧಿ ಮುಂದೆ ಮದ್ವೆ ಆಗಲು ಲವ್​ ಬರ್ಡ್ಸ್​ ನಿರ್ಧಾರ.. ದೊಡ್ಮನೆಯಿಂದ ಸಿಕ್ತಂತೆ ಗ್ರೀನ್​ಸಿಗ್ನಲ್ appeared first on News First Kannada.

News First Live Kannada


Leave a Reply

Your email address will not be published. Required fields are marked *