ಪುನೀತ್​ ಸಾವಿನ ಬಗ್ಗೆ ಮೂಡಿದೆ ಅನುಮಾನ; ವೈದ್ಯರ ವಿರುದ್ಧ ದೂರು ದಾಖಲು | Puneeth Rajkumar Death: Some fans express doubt about Appu demise


ನಟ ಪುನೀತ್​ ರಾಜ್​ಕುಮಾರ್​ ಅವರು ಫಿಟ್ನೆಸ್ ಬಗ್ಗೆ​ ಅತಿ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಅಂಥ ವ್ಯಕ್ತಿಗೆ ಹೃದಯಾಘಾತ ಆಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಅನೇಕರ ಮನದಲ್ಲಿ ಕಾಡುತ್ತಿದೆ. ಅಲ್ಲದೇ, ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಸಂದರ್ಭದಲ್ಲಿ ಯಾವ ರೀತಿ ಚಿಕಿತ್ಸೆ ನೀಡಲಾಯಿತು? ಸಡನ್​ ಆಗಿ ಅಪ್ಪು ಕೊನೆಯುಸಿರೆಳೆಯಲು ಹೇಗೆ ಸಾಧ್ಯ? ಇಂಥ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿವೆ. ಹಾಗಾಗಿ ಪುನೀತ್​ ಅಭಿಮಾನಿ ಅರುಣ್​ ಪರಮೇಶ್ವರ್​ ಅವರು ದೂರು ನೀಡಿದ್ದಾರೆ. ಪುನೀತ್​ಗೆ ಚಿಕಿತ್ಸೆ ನೀಡಿದ ವೈದ್ಯರನ್ನು ತನಿಖೆಗೆ ಒಳಪಡಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

‘ಯಾರ ಮನಸ್ಸಿಗೂ ಘಾಸಿ ಮಾಡುವ ಉದ್ದೇಶ ನಮಗಿಲ್ಲ. ಕ್ಲಿನಿಕ್​ನಿಂದ ವಿಕ್ರಂ ಆಸ್ಪತ್ರೆ ತಲುಪಲು ಪುನೀತ್​ ಅವರಿಗೆ 40 ನಿಮಿಷ ಹಿಡಿಯಿತು ಅಂತ ಹೇಳಲಾಗುತ್ತಿದೆ. ಅಷ್ಟು ತಡ ಆಗಿದ್ದು ಯಾಕೆ?  ಸತ್ಯಾಂಶ ಹೊರಗೆ ಬರಲಿ. ಸತ್ಯ ಏನು ಎಂಬುದು ಅಭಿಮಾನಿಗಳಿಗೆ ಗೊತ್ತಾಗಲಿ’ ಎಂದು ಅರುಣ್​ ಪರಮೇಶ್ವರ್​ ಹೇಳಿದ್ದಾರೆ.

ಇದನ್ನೂ ಓದಿ:

ರಸ್ತೆ, ಪಾರ್ಕ್​, ಮೈದಾನಕ್ಕೆ ಪುನೀತ್​ ಹೆಸರು; ಬಿಬಿಎಂಪಿ ಆಯುಕ್ತ ಗೌರವ್​ ಗುಪ್ತಾ ಹೇಳೋದೇನು?

Puneeth Rajkumar: ಪುನೀತ್​ ಸಮಾಧಿಗೆ ನಟ ಸೂರ್ಯ ಭೇಟಿ; ಅಪ್ಪು ನೆನೆದು ಕಂಬನಿ ಮಿಡಿದ ಕಾಲಿವುಡ್​ ಸ್ಟಾರ್​ ಹೀರೋ

TV9 Kannada


Leave a Reply

Your email address will not be published. Required fields are marked *