ಪುನೀತ್​ ಹೇಳಿದ್ದ ಕಿವಿಮಾತನ್ನು ನೆನಪಿಸಿಕೊಂಡ ನಟ ಹರೀಶ್​ ರಾಜ್​ | Harish Raj Remembers Puneeth Rajkumar In Bangalore


ಪುನೀತ್​ ರಾಜ್​ಕುಮಾರ್​ ಅವರು ಎಲ್ಲರ ಜತೆ ಬೆರೆಯುತ್ತಿದ್ದರು. ಎಲ್ಲರಿಗೂ ಅವರು ಸರಿಯಾದ ಆದ್ಯತೆ ಕೊಡುತ್ತಿದ್ದರು. ಎಲ್ಲರನ್ನೂ ಪುನೀತ್​ ರಾಜ್​ಕುಮಾರ್ ಒಂದೇ  ರೀತಿ ನೋಡುತ್ತಿದ್ದರು. ಅವರನ್ನು ಕಳೆದುಕೊಂಡು ಎಲ್ಲರೂ ನೋವು ಅನುಭವಿಸುವಂತಾಗಿದೆ. ಈಗ ನಟ ಹರೀಶ್​ ರಾಜ್​ ಅವರು ಪುನೀತ್​ ಅವರನ್ನು ನೆನಪು ಮಾಡಿಕೊಳ್ಳುವ ಕೆಲಸ ಮಾಡಿದ್ದಾರೆ.

ಪುನೀತ್​ ಅವರನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಮಣ್ಣು ಮಾಡಲಾಗಿದೆ. ಇಂದು (ನವೆಂಬರ್​ 4) ಪುನೀತ್​ ಸಮಾಧಿ ಜಾಗಕ್ಕೆ ಅವರು ಭೇಟಿ ಮಾಡಿದರು. ಈ ವೇಳೆ ನಮನ ಸಲ್ಲಿಸಿ ಹರೀಶ್​ ರಾಜ್​ ಮಾತನಾಡಿದರು. ಜತೆಗೆ ಹಳೆಯ ಘಟನೆಯನ್ನು ಅವರು ನೆನಪಿಸಿಕೊಂಡರು. ಪುನೀತ್​ ಜತೆ ಶೂಟಿಂಗ್​ನಲ್ಲಿ 15 ದಿನ ಒಟ್ಟಾಗಿ ಕಳೆದಿದ್ದರು ಹರೀಶ್​ ರಾಜ್​. ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ ಅವರು.

ಇದನ್ನೂ ಓದಿ: ವಿಶೇಷ ಹಾಡಿನ ಮೂಲಕ ಪುನೀತ್​ಗೆ ನಮನ ಸಲ್ಲಿಸಿದ ಯುವತಿ

ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಪುನೀತ್​ಗೆ ಸ್ವರ ನಮನ; ಗುರು ಕಿರಣ್ ಹೇಳಿದ್ದೇನು?

TV9 Kannada


Leave a Reply

Your email address will not be published. Required fields are marked *