ಬೆಂಗಳೂರು: ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ ಎಂಟು ದಿನಗಳಾಗಿವೆ. ತೆಲುಗು ಹಿರಿಯ ನಟ ರಾಜೇಂದ್ರ ಪ್ರಸಾದ್ ಕಠೀರವ ಸ್ಟುಡಿಯೋಗೆ ಭೇಟಿ ನೀಡಿ ಪುನೀತ್ ರಾಜ್ಕುಮಾರ್ ಸಮಾಧಿ ದರ್ಶನ ಪಡೆದಿದ್ದಾರೆ.
ಸಮಾಧಿ ದರ್ಶನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪುನೀತ್ ರಾಜಕುಮಾರ್ ನನಗೆ ಸ್ವಂತ ಸಹೋದರನ ಸಮ. ಅವರ ನಿಧನ ನನಗೆ ಜೀರ್ಣಿಸಿಕೊಳ್ಳಲು ಆಗ್ತಿಲ್ಲ ಎಂದು ಭಾವುಕರಾಗಿದ್ದಾರೆ. ಅಪ್ಪು ದೊಡ್ಡ ಸೂಪರ್ ಸ್ಟಾರ್ ಎಂಬುದು ಎಲ್ಲರಿಗೂ ಗೊತ್ತು. ಅಪ್ಪು ನಿಧನದಿಂದ ತೆಲುಗು ಸಿನಿಮಾ ರಂಗಕ್ಕೆ ಸಾಕಷ್ಟು ನೋವಾಗಿದೆ ಎಂದರು.
ಇನ್ನು ಅಪ್ಪು ಮೃತಪಟ್ಟ ದಿನ ಅಭಿಮಾನಿಗಳು ಹೆಚ್ಚಾಗಿ ಬರ್ತಾಯಿದ್ದರು. ಹೀಗಾಗಿ ಅಂದು ಬರಲಿಲ್ಲ .25 ಲಕ್ಷ ಜನ ಅವರ ಅಂತಿಮ ದರ್ಶನ ಪಡೆದಿದ್ದಾರೆ ಎಂದು ಹೇಳಲಾಗ್ತಿದೆ. ಅದರಿಂದಲೇ ಗೊತ್ತಾಗುತ್ತೆ ಅವರು ಅಪ್ಪು ಎಂತಹ ವ್ಯಕ್ತಿ ಎಂಬುದು. ಆಗ ಕಂಠೀರವದಲ್ಲಿ ಶೂಟಿಂಗ್ ಮಾಡುವಾಗ ರಾಘಣ್ಣ ಮಗನ ಮದುವೆಗೆ ಆಮಂತ್ರಣ ನೀಡಿದ್ರು. ಅವರ ಕುಟುಂಬದ ಜೊತೆ ನಾನು ಆತ್ಮೀಯ ಓಡನಾಟ ಹೊಂದಿದ್ದೆ. ಅಪ್ಪುವಿನ ದಿಢೀರ್ ಸಾವು ನನ್ನ ಸ್ವಂತ ತಮ್ಮನೆ ಹೋಗಿರುವಂತಾಗಿದೆ ಎಂದು ಭಾವುಕರಾಗಿದ್ದಾರೆ.