ಪುನೀತ್ ನಿಧನದ ಬಗ್ಗೆ ರಶ್ಮಿಕಾ ಮಂದಣ್ಣ ಕೊಟ್ಟ ರಿಯಾಕ್ಷನ್​ ಏನು? ಇಲ್ಲಿದೆ ವಿಡಿಯೋ | Rashmika Mandanna First Reaction On Puneeth Rajkumar Death


ರಶ್ಮಿಕಾ ಮಂದಣ್ಣ ಈಗ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಎಲ್ಲ ಭಾಷೆಯ ಚಿತ್ರರಂಗದಲ್ಲೂ ಸ್ಟಾರ್​ ನಟರ ಸಿನಿಮಾಗಳಿಗೆ ಅವರೇ ನಾಯಕಿ ಆಗಬೇಕು ಎಂದು ನಿರ್ಮಾಪಕರು ಬೇಡಿಕೆ ಇಡುತ್ತಿದ್ದಾರೆ. ತೆಲುಗು, ತಮಿಳು ಮಾತ್ರವಲ್ಲದೇ ಹಿಂದಿಯಲ್ಲೂ ಅವರ ಹವಾ ಹೆಚ್ಚಿದೆ. ಅಮಿತಾಭ್​ ಬಚ್ಚನ್​, ಸಿದ್ದಾರ್ಥ್​ ಮಲ್ಹೋತ್ರಾ ಅವರಂತಹ ಸ್ಟಾರ್​ ಕಲಾವಿದರ ಜೊತೆ ತೆರೆಹಂಚಿಕೊಳ್ಳುವ ಚಾನ್ಸ್​ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ. ಸಿನಿಮಾ ಕೆಲಸಗಳ ಮಧ್ಯೆ ಜಾಹೀರಾತು ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಅವರು ಜಾಹೀರಾತೊಂದರ ಕೆಲಸಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಪುನೀತ್​ ನಿಧನದ ಬಗ್ಗೆ ಕೇಳಲಾಯಿತು. ಇದಕ್ಕೆ ರಶ್ಮಿಕಾ ಪ್ರತಿಕ್ರಿಯಿಸಿದ್ದು ಹೇಗಿತ್ತು ಎಂಬುದನ್ನು ವಿಡಿಯೋದಲ್ಲಿ ನೋಡಿ. ಪುನೀತ್​ ಅವರ ಅಂತಿಮ ದರ್ಶನ ಪಡೆಯೋಕೆ ರಶ್ಮಿಕಾ ಬೆಂಗಳೂರಿಗೆ ಆಗಮಿಸಿದ್ದರು. ಕೊನೆಯ ಕ್ಷಣದಲ್ಲಿ ಅವರು ಅಂತಿಮ ದರ್ಶನ ಪಡೆದು ತೆರಳಿದ್ದರು. ರಶ್ಮಿಕಾ ಹಾಗೂ ಪುನೀತ್​ ‘ಅಂಜನೀಪುತ್ರ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು.

ಇದನ್ನೂ ಓದಿ: Rashmika Mandanna: ಮುಂಬೈನಲ್ಲಿ ಹೆಚ್ಚಿದೆ ರಶ್ಮಿಕಾ ಮಂದಣ್ಣ ತಿರುಗಾಟ; ಕೊಡಗಿನ ಕುವರಿ ಹೋದಲ್ಲೆಲ್ಲ ಕ್ಯಾಮೆರಾ ಕಣ್ಣು

TV9 Kannada


Leave a Reply

Your email address will not be published. Required fields are marked *