ಪುನೀತ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಟಾಲಿವುಡ್ ಹಾಸ್ಯ ನಟ ಬ್ರಹ್ಮಾನಂದಂ, ಅಲಿ | Brahmanandam and Ali visited Puneeth Rajkumar home


ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ಆರು ತಿಂಗಳು ಕಳೆಯುತ್ತಾ ಬಂದಿದೆ. ಈ ಅವಧಿಯಲ್ಲಿ ಪುನೀತ್​ ಇಲ್ಲ ಎಂದು ಕಣ್ಣೀರು ಹಾಕಿದವರ ಸಂಖ್ಯೆ ಅದೆಷ್ಟೋ. ಪುನೀತ್​ ಕುಟುಂಬದವರು ಹಾಗೂ ಆಪ್ತರು ನಿತ್ಯ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ. ಪುನೀತ್ ರಾಜ್​​ಕುಮಾರ್ ನಿಧನದ ಬಳಿಕ ಸಾಕಷ್ಟು ಸೆಲೆಬ್ರಿಟಿಗಳು ಅವರ ನಿವಾಸಕ್ಕೆ ಆಗಮಿಸಿ ಸಾಂತ್ವನ ಹೇಳಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಗಮಿಸಿ ಅಪ್ಪು​ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೆ ಸಾಂತ್ವನ ಹೇಳಿದ್ದರು. ಈಗ ಪುನೀತ್‌ ರಾಜ್‌ಕುಮಾರ್ ನಿವಾಸಕ್ಕೆ ಟಾಲಿವುಡ್ ಹಾಸ್ಯ ನಟರಾದ ಬ್ರಹ್ಮಾನಂದಂ (Brahmanandam
), ಅಲಿ (Ali) ಭೇಟಿ ಕೊಟ್ಟಿದ್ದಾರೆ. ಅವರು ಪುನೀತ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

TV9 Kannada


Leave a Reply

Your email address will not be published.