ಪುನೀತ್ ರಾಜಕುಮಾರ್ ಅವರಿಗಿರುವ ಜನಪ್ರಿಯತೆ ಕರ್ನಾಟಕದಲ್ಲಿ ಪ್ರಾಯಶಃ ಬೇರೆ ಯಾರಿಗೂ ಇಲ್ಲ | Puneeth Rajkumar probably the most popular personality of Karnataka


ಪುನೀತ್ ರಾಜಕುಮಾರ್ ಕನ್ನಡನಾಡಿನ ಅತಿ ಜನಪ್ರಿಯ ವ್ಯಕ್ತಿಯೆಂದರೆ ಅದರಲ್ಲಿ ಉತ್ಪ್ರೇಕ್ಷೆಯ ಲವಲೇಶವೂ ಇರದು. ನಾವು ಈಗಾಗಲೇ ಹೇಳಿರುವ ಹಾಗೆ, ಅವರ ಅಂತಿಮ ದರ್ಶನ ಪಡೆಯಲು ಆಗಮಿಸಿದವರು 25 ಲಕ್ಷಕ್ಕೂ ಹೆಚ್ಚು ಜನ. ಮಹಾತ್ಮಾ ಗಾಂಧಿಯವರ ನಂತರ ಅತಿಹೆಚ್ಚು ಜನ ಶ್ರದ್ಧಾಂಜಲಿ ಸಲ್ಲಿಸಲು ಬಂದಿದ್ದು ಅಂದರೆ ಅಂದರೆ ಅದು ಪುನೀತ್ಗೆ. ಇದನ್ನು ಪುನಃ ಯಾಕೆ ಹೇಳಬೇಕಾಗಿದೆ ಅಂದರೆ, ಅವರು ನಮ್ಮನ್ನಗಲಿ ಎರಡು ವಾರಕ್ಕಿಂತ ಹೆಚ್ಚು ಸಮಯ ಕಳೆದಿದೆ. ಆದರೆ, ಜನ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಆಗಮಿಸಿ ಅವರಿಗೆ ನಮನ ಸಲ್ಲಿಸುವುದು ಮಾತ್ರ ನಿಂತಿಲ್ಲ. ಬೆಳ್ಳಂಬೆಳಿಗ್ಗೆಯೇ ಜನ ರಾಜ್ಯದ ನಾನಾ ಭಾಗಗಳಿಂದ ಅವರ ಸಮಾಧಿ ಬಳಿಗೆ ಬರುತ್ತಿದ್ದಾರೆ. ಕೇವಲ ಸುತ್ತಮುತ್ತಲಿನ ಊರುಗಳಿಂದ ಮಾತ್ರ ಜನ ಆಗಮಿಸುತ್ತಿಲ್ಲ, ದೂರದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಿಂದಲೂ ಜನ ಬರುತ್ತಿದ್ದಾರೆ.

ಈ ವಿಡಿಯೋವನ್ನು ನೋಡಿ. ನೂರಾರು ಜನ ಪುನೀತ್ ಅವರ ಸಮಾಧಿಗೆ ಬಂದಿದ್ದಾರೆ. ಅವರಲ್ಲಿ, ಯುವಕರು, ಯುವತಿಯರು, ಮಧ್ಯವಯಸ್ಕರು, ಮಕ್ಕಳು, ಹಿರಿಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು-ಎಲ್ಲರೂ ಇದ್ದಾರೆ. ಇದರರ್ಥ, ಪುನೀತ್ ಅವರಿಗೆ ಕೇವಲ ಮಕ್ಕಳು ಮತ್ತು ಯುವಜನಾಂಗ ಮಾತ್ರ ಅಭಿಮಾನಿಗಳಲ್ಲ. ಎಲ್ಲಾ ವಯೋಮಾನದವರಿಗೆ, ಎಲ್ಲಾ ವರ್ಗದವರಿಗೆ ಅಪ್ಪು ಪ್ರೀತಿಪಾತ್ರರಾಗಿದ್ದರು.

ಅವರ ಜನಪ್ರಿಯತೆ ನಿಜಕ್ಕೂ ವಿಸ್ಮಯ ಮೂಡಿಸುತ್ತದೆ. ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ನಟಿಸಿದಿದ್ದರೂ ಬೇರೆ ರಾಜ್ಯಗಳಲ್ಲೂ ಅವರಿಗೆ ಅಭಿಮಾನಿಗಳಿದ್ದಾರೆ. ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ದಕ್ಷಿಣ ಭಾರತ ಎಲ್ಲ ಮತ್ತು ಬೇರೆ ಕೆಲ ರಾಜ್ಯಗಳ ಮುಖ್ಯಂತ್ರಿಗಳು ಪುನೀತ್ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದರು.

ಒಬ್ಬ ನಟ ಮತ್ತು ಸಮಾಜಮುಖಿ ಚಿಂತನೆಗಳ ವ್ಯಕ್ತಿಯಾಗಿ ಪುನೀತ್ ಅವರಿಗಿರುವ ಜನಪ್ರಿಯತೆ ದಂಗುಬಡಿಸುತ್ತದೆ!

ಇದನ್ನೂ ಓದಿ:  ‘ಪುನೀತ್​ ನಮನ’ ಕಾರ್ಯಕ್ರಮಕ್ಕೆ ಪಾಸ್​ ಇಲ್ಲದವರಿಗೆ ನೋ ಎಂಟ್ರಿ; ಪೊಲೀಸರು ಕೊಟ್ಟ​ ವಾರ್ನಿಂಗ್​ ಏನು?

TV9 Kannada


Leave a Reply

Your email address will not be published. Required fields are marked *