ಪುನೀತ್ ರಾಜಕುಮಾರ್ ಹನ್ನೊಂದನೇ ದಿನದ ವಿಧಿವಿಧಾನಗಳನ್ನು ಡ್ರೋಣ್ ಕೆಮೆರಾ ಮೂಲಕವೂ ಸೆರೆಹಿಡಿಯಲಾಯಿತು | Drone camera too recorded 11th day rituals of Power Star Puneeth Rajkumar


ಬೆಂಗಳೂರಿನ ಕಂಠೀರವ ಸ್ಟುಡಿಯೋನಲ್ಲಿ ಸೋಮವಾರದಂದು ಪುನೀತ್ ರಾಜಕುಮಾರ್ ಅವರ 11ನೇ ದಿನದ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕುಟುಂಬದ ಸದಸ್ಯರೆಲ್ಲ ಆ ಸಮಯದಲ್ಲಿ ಹಾಜರಿದ್ದರು. ಅಭಿಮಾನಿಗಳನ್ನು ಸ್ಟುಡಿಯೋ ಒಳಗಡೆ ಬಿಟ್ಟರೆ ಹನ್ನೊಂದನೇ ದಿನ ಕಾರ್ಯಕ್ರಮ ನೆರವೇರಿಸುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ವಿಧಿವಿಧಾನಗಳು ಮುಗಿಯುವವರೆಗೆ ಅವರನ್ನು ತಡೆಯಲಾಗಿತ್ತು. ಶಿವರಾಜಕುಮಾರ ಅವರು ಅಭಿಮಾನಿಗಳಿಗೆ ಆದ ಅನಾನುಕೂಲತೆಗಾಗಿ ಮಾಧ್ಯಮದೆದುರು ವಿಷಾದ ವ್ಯಕ್ತಪಡಿಸಿದರು. ವಿಶೇಷವೆಂದರೆ, ಹನ್ನೊಂದನೇ ದಿನದ ಕಾರ್ಯಕ್ರಮವನ್ನು ಡ್ರೋಣ್ ಕೆಮೆರಾ ಮೂಲಕವೂ ಸೆರೆಹಿಡಿಯಲಾಯಿತು.

ಇಲ್ಲಿರುವ ವಿಡಿಯೋನಲ್ಲಿ ಕಾರ್ಯಕ್ರಮದ ವಿಹಂಗಮ ದೃಶ್ಯ ನಿಮಗೆ ಕಾಣುತ್ತದೆ. ರಾಜ್ ಕುಟುಂಬ ಸದಸ್ಯರು ಪೂಜಾ ವಿಧಿಗಳನ್ನು ಪೂರೈಸಿದ ನಂತರ ಅದುವರೆಗೆ ತಡೆಹಿಡಿಯಲಾಗಿದ್ದ ಅಭಿಮಾನಿಗಳನ್ನು ಒಳಗೆ ಬಿಡಲಾಯಿತು. ಸಾವಿರಾರು ಸಂಖ್ಯೆಯಲ್ಲಿದ್ದ ಅವರು ಆಪ್ಪು ಸಮಾಧಿಗೆ ಹೂಹಾರ ಅರ್ಪಿಸಿ ಅವರಿಗೆ ಇಷ್ಟವಾಗುತ್ತಿದ್ದ ತಿಂಡಿಗಳನ್ನು ಎಡೆಯಿಟ್ಟರು. ಅವರಲ್ಲಿ ಬಹಳಷ್ಟು ಅಭಿಮಾನಿಗಳು ಅಗಲಿದ ನಟನನ್ನು ನೆನೆದು ಕಣ್ಣೀರು ಸುರಿಸುತ್ತಿದ್ದರು.

ಅಪ್ಪು ಸಮಾಧಿಗೆ ಇವತ್ತೇ ಅಂತಲ್ಲ, ಅವರ ಅಂತ್ಯಕ್ರಿಯೆ ನಡೆದ ಮರುದಿನದಿಂದ ಜನಸಾಗರ ಹರಿದು ಬರುತ್ತಲೇ ಇದೆ. ಅವರಿಗಿದ್ದ ಜನಪ್ರಿಯತೆ ಕಂಡು ಇಡೀ ಭಾರತವೇ ದಂಗಾಗಿದೆ. ಮಹಾತ್ಮಾ ಗಾಂಧಿಯವರ ನಂತರ ಅಪ್ಪು ಅವರ ಅಂತ್ಯಕ್ರಿಯೆಯಲ್ಲೇ ಅತಿಹೆಚ್ಚು ಜನ ಸೇರಿದ್ದು.

ಇದನ್ನೂ ಓದಿ:   ಪಟಾಕಿ ಹಚ್ಚೋದು ಬೇಡ, ದೇಹದ ಕ್ಯಾಲೋರಿ ಬರ್ನ್ ಮಾಡೋಣ; ದೀಪಾವಳಿಗೆ ಮನವಿ ಮಾಡಿದ್ದ ಪುನೀತ್ ಹಳೆಯ ವಿಡಿಯೋ ವೈರಲ್​

TV9 Kannada


Leave a Reply

Your email address will not be published. Required fields are marked *