ಪುನೀತ್ ರಾಜ್​ಕುಮಾರ್​ಗೆ ಚಿಕಿತ್ಸೆ ನೀಡಿದ್ದ ವೈದ್ಯರ ವಿರುದ್ಧ ಅವಹೇಳನ: ಮುಖ್ಯಮಂತ್ರಿಗೆ ಫನಾ ಪತ್ರ | Fans Derogatory statements about Dr Ramana rao over Puneeth Rajkumar Death Phana Writes to CM Basavaraj Bommai


ಪುನೀತ್ ರಾಜ್​ಕುಮಾರ್​ಗೆ ಚಿಕಿತ್ಸೆ ನೀಡಿದ್ದ ವೈದ್ಯರ ವಿರುದ್ಧ ಅವಹೇಳನ: ಮುಖ್ಯಮಂತ್ರಿಗೆ ಫನಾ ಪತ್ರ

ಡಾ.ರಮಣರಾವ್ ಮತ್ತು ಪುನೀತ್ ರಾಜ್​ಕುಮಾರ್

ಬೆಂಗಳೂರು: ಖ್ಯಾತ ನಟ ಪುನೀತ್ ರಾಜ್​ಕುಮಾರ್ ಅವರಿಗೆ ಎದೆನೋವು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ನೀಡಿದ್ದ ವೈದ್ಯ ರಮಣರಾವ್ ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನ ನಡೆಯುತ್ತಿರುವ ಬಗ್ಗೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಒಕ್ಕೂಟವು (ಫನಾ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ರಮಣರಾವ್ ಅವರ ಕ್ಲಿನಿಕ್​ಗೆ ಪುನೀತ್ ರಾಜ್​ಕುಮಾರ್ ಮೊದಲು ಭೇಟಿ ನೀಡಿದ್ದರು. ಅಲ್ಲಿ ವೈದ್ಯ ಡಾ.ರಮಣರಾವ್ ಅವರ ಸೂಚನೆ ಮೇರೆಗೆ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪುನೀತ್ ರಾಜ್​ಕುಮಾರ್ ನಿಧನರಾದರು. ಈ ವಿಚಾರದಲ್ಲಿ ವೈದ್ಯರ ಕರ್ತವ್ಯಲೋಪವಿದೆ ಎಂದು ಕೆಲ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿ, ದೂರುತ್ತಿದ್ದಾರೆ.

ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದು ಗಮನ ಸೆಳೆದಿರುವ ಫನಾ ಅಧ್ಯಕ್ಷ ಡಾ.ಪ್ರಸನ್ನ, ಸಾವಿನ ಬಗ್ಗೆ ಚರ್ಚೆಯಿಂದ ವೈದ್ಯಕೀಯ ಗೌಪ್ಯತೆ ಉಲ್ಲಂಘನೆಯಾಗುತ್ತಿದೆ. ಈ ವಿಚಾರದಲ್ಲಿ ಎಫ್​ಐಆರ್ ಅಥವಾ ಪಿಸಿಆರ್ ದಾಖಲಿಸುವ ಮುನ್ನ ಸುಪ್ರೀಂಕೋರ್ಟ್​ ರೂಪಿಸಿರುವ ನಿಯಮಾವಳಿಗಳನ್ನು ಗಮನಿಸಬೇಕು ಎಂದು ಹೇಳಿದ್ದಾರೆ.

ಎಲ್ಲಾ ಸಂದರ್ಭದಲ್ಲೂ ರೋಗಿಗಳ ಜೀವ ಉಳಿಸಲು ಸಾಧ್ಯವಾಗುವುದಿಲ್ಲ. ವೈದ್ಯರಿಗೆ ಅವರದ್ದೇ ಆದ ಇತಿಮಿತಿಗಳು ಇರುತ್ತವೆ. ನಟ ಪುನೀತ್​ಗೆ ಚಿಕಿತ್ಸೆ ನೀಡಿದ್ದ ವೈದ್ಯಕೀಯ ಸಿಬ್ಬಂದಿಗೆ ರಾಜ್ಯ ಸರ್ಕಾರ ರಕ್ಷಣೆ ಒದಗಿಸಬೇಕು ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಡಾ.ಪ್ರಸನ್ನ ಮನವಿ ಮಾಡಿದ್ದಾರೆ. ವೈದ್ಯಕೀಯ ಚಿಕಿತ್ಸೆ, ವೈದ್ಯಕೀಯ ವೃತ್ತಿ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡಬಾರದೆಂಬ ನಿಯಮವಿದೆ. ಚರ್ಚೆಯಿಂದ ಸುಪ್ರೀಂಕೋರ್ಟ್​ ನಿಯಮಾವಳಿಗಳು ಉಲ್ಲಂಘನೆಯಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.



ಇದನ್ನೂ ಓದಿ: ಪುನೀತ್ ಎದೆನೋವಿನೊಂದಿಗೆ ಕ್ಲಿನಿಕ್​​​​​ಗೆ ಬಂದಾಗ ಸೂಕ್ತ ಚಿಕಿತ್ಸೆ ನೀಡಿ ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವ ಸಲಹೆ ನೀಡಲಾಯಿತು: ಡಾ ರಮಣ ರಾವ್
ಇದನ್ನೂ ಓದಿ: ಅಪ್ಪುದು ಸಡನ್ ಡೆತ್ -ಈ ಹಿಂದೆ ಯಾವುದೇ ಸಮಸ್ಯೆ ಇರಲಿಲ್ಲ: ಕೊನೆಯ ಕ್ಷಣ ವಿವರಿಸಿದ ಡಾ. ರಮಣ, ವಿಡಿಯೋ ನೋಡಿ

TV9 Kannada


Leave a Reply

Your email address will not be published. Required fields are marked *