ಮಂಡ್ಯ: ಇಂದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ರವರ 11ನೇ ದಿನದ ಪುಣ್ಯ ಸ್ಮರಣೆ.. ಈ ಹಿನ್ನೆಲೆಯಲ್ಲಿ ನಟ ವಿನೋದ್ ರಾಜ್, ಶ್ರೀರಂಗಪಟ್ಟಣದ ಗಂಜಾಂ ಬಳಿ ಇರುವ ಸಂಗಮದಲ್ಲಿ ಅಪರ ಕರ್ಮ ಕಾರ್ಯ ನೆರವೇರಿಸಿದ್ದಾರೆ.
ಪುನೀತ್ ನಿಧನದ 11ನೇ ದಿನದ ಪುಣ್ಯತಿಥಿ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಗಂಜಾಂ ಬಳಿ ಇರುವ ಸಂಗಮಕ್ಕೆ ಹಿರಿಯ ನಟಿ ಲೀಲಾವತಿ, ನಟ ವಿನೋದ್ ರಾಜ್ ಆಗಮಿಸಿದ್ದರು. ಸಂಗಮದ ಕಾವೇರಿ ನದಿ ತೀರಕ್ಕೆ ಆಗಮಿಸಿ ನದಿ ತೀರದಲ್ಲಿ ಮೃತ ಪುನೀತ್ ರಾಜ್ಕುಮಾರ್ಗೆ ವೈದಿಕ ಪೂಜಾ ಕೈಂಕರ್ಯ ನೆರವೇರಿಸಿ ತರ್ಪಣ ಅರ್ಪಿಸಿದರು. ಅಲ್ಲದೇ ಇದಕ್ಕೂ ಮುನ್ನ ಸ್ಥಳದಲ್ಲಿ ಆಶ್ಲೇಷ ಬಲಿ ಹಾಗೂ ನಾರಾಯಣ ಬಲಿ ಪೂಜೆ ನಡೆಸಿ ಪುನೀತ್ ಆತ್ಮಕ್ಕೆ ಶಾಂತಿ ಕೋರಿದರು. ಈ ವೇಳೆ ಲೀಲಾವತಿ ಅವರ ಕುಟುಂಬದ ಸಮೀಪದ ಬಂಧುಗಳು ಸ್ಥಳದಲ್ಲಿ ಹಾಜರಿದ್ದರು.