ಪುನೀತ ನಮನ: ಕಣ್ಣೀರು ತರಿಸಿತು ಸುದೀಪ್​ ಧ್ವನಿಯಲ್ಲಿ ಮೂಡಿಬಂದ ಪುನೀತ್​ ವಿಡಿಯೋ | Kichcha Sudeep voice over for Puneeth Rajkumar video in Puneetha Namana program


ಪುನೀತ್​ ರಾಜ್​ಕುಮಾರ್​ (Puneeth Rajkumar ) ಅವರಿಗೆ ಚಿತ್ರರಂಗದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲು ‘ಪುನೀತ ನಮನ’ ಕಾರ್ಯಕ್ರಮ ಮಾಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಂಗಳವಾರ (ನ.16) ನಡೆದ ಈ ಕಾರ್ಯಕ್ರಮದಲ್ಲಿ ಪುನೀತ್​ ಬಗೆಗಿನ ಒಂದು ವಿಡಿಯೋ ಪ್ರಸಾರ ಮಾಡಲಾಯಿತು. ಅಪ್ಪು ಜನನದಿಂದ ನಿಧನದವರೆಗಿನ ಜರ್ನಿಯನ್ನು ಆ ವಿಡಿಯೋದಲ್ಲಿ ವಿವರಿಸಲಾಗಿತ್ತು. ಅದಕ್ಕೆ ಧ್ವನಿ ನೀಡಿದ್ದು ಕಿಚ್ಚ ಸುದೀಪ್​. ಚಿಕ್ಕ ವಯಸ್ಸಿನಿಂದಲೂ ಅಪ್ಪು ಮತ್ತು ಕಿಚ್ಚ ಸ್ನೇಹಿತರಾಗಿದ್ದರು. ಅಗಲಿದ ಸ್ನೇಹಿತನ ವಿಡಿಯೋಗೆ ಭಾರವಾದ ಹೃದಯದಿಂದ ಸುದೀಪ್​ (Kichcha Sudeep) ಇಂದು ಧ್ವನಿ ನೀಡುವಂತಾಗಿದ್ದು ನೋವಿನ ಸಂಗತಿ. ಈ ವಿಡಿಯೋ ಪ್ರಸಾರವಾದಾಗ ಶಿವರಾಜ್​ಕುಮಾರ್​, ಅಶ್ವಿನಿ ಪುನೀತ್​ ರಾಜ್​ಕುಮಾರ್​ ಸೇರಿದಂತೆ ಅನೇಕರು ಕಂಬನಿ ಸುರಿಸಿದರು.

ಇದನ್ನೂ ಓದಿ:

TV9 Kannada


Leave a Reply

Your email address will not be published. Required fields are marked *